ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ವಿಶ್ವಕಪ್ ಅತ್ಯಂತ ಮೌಲ್ಯಯುತ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ

Suryakumar Yadav And Virat Kohli included In Most Valuable Team Of ICC Mens T20 World Cup

ಐಸಿಸಿ ಟಿ20 ವಿಶ್ವಕಪ್ 2022ರ ಆವೃತ್ತಿಗೆ ತೆರೆ ಬಿದ್ದಿದೆ. ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್‌ 2022ರ ಅತ್ಯಮೂಲ್ಯ ತಂಡವನ್ನು ಹೆಸರಿಸಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಹೆಸರಿಸಿ ಮೌಲ್ಯಯುತ ತಂಡದಲ್ಲಿ ಭಾರತದ ಇಬ್ಬರು ಸ್ಟಾರ್ ಬ್ಯಾಟರ್ ಗಳಾದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಈ ತಂಡಕ್ಕೆ ನಾಯಕನಾಗಿದ್ದಾರೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರ ಅತ್ಯಂತ ಮೌಲ್ಯಯುತ ತಂಡದಲ್ಲಿ ಆರು ರಾಷ್ಟ್ರಗಳ ಕ್ರಿಕೆಟಿಗರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಾಂಪಿಯನ್‌ಗಳಾದ ಇಂಗ್ಲೆಂಡ್, ರನ್ನರ್ ಅಪ್ ಪಾಕಿಸ್ತಾನ, ಸೆಮಿಫೈನಲ್ ತಲುಪಿದ್ದ ಭಾರತ ಮತ್ತು ನ್ಯೂಜಿಲೆಂಡ್ ಹಾಗೂ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ

"ಇಂಗ್ಲೆಂಡ್ ತಂಡ ಅಭಿಯಾನದಲ್ಲಿ ಗೆಲುವು ಸಾಧಿಸಲು ಸಹಾಯ ಮಾಡಿದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಮಾರ್ಕ್‌ ವುಡ್ ಮತ್ತು ಟೂರ್ನಿಯ ಆಟಗಾರ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಐಸಿಸಿ ಟಿ20 ವಿಶ್ವಕಪ್ ಮೌಲ್ಯಯುತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ" ಎಂದು ಐಸಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಥಾನ ಪಡೆದುಕೊಂಡ ಸೂರ್ಯ, ವಿರಾಟ್

ಸ್ಥಾನ ಪಡೆದುಕೊಂಡ ಸೂರ್ಯ, ವಿರಾಟ್

ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಸಹಜವಾಗಿ ಸ್ಥಾನ ಪಡೆದರು. ವಿರಾಟ್ ಕೊಹ್ಲಿ ಈ ಬಾರಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 6 ಪಂದ್ಯಗಳಲ್ಲಿ 98.67 ಸರಾಸರಿ ಮತ್ತು 136.41 ಸ್ಟ್ರೈಕ್‌ರೇಟ್‌ನಲ್ಲಿ 296 ರನ್ ಗಳಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಕೊಹ್ಲಿ ಒಟ್ಟು 4 ಅರ್ಧಶತಕ ಗಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಕೂಡ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 6 ಇನ್ನಿಂಗ್ಸ್‌ಗಳಲ್ಲಿ 59.75 ಸರಾಸರಿಯಲ್ಲಿ 189.68 ಸ್ಟ್ರೈಕ್‌ ರೇಟ್‌ನಲ್ಲಿ 239 ರನ್ ಗಳಿಸಿದ್ದಾರೆ. ಅವರು ಈ ವಿಶ್ವಕಪ್‌ನಲ್ಲಿ ಮೂರು ಅರ್ಧಶತಕ ಗಳಿಸಿದರು.

T20 world cup 2022 : ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್‌ಗೆ ಅಭಿನಂದನೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್

ತಂಡವನ್ನು ಆಯ್ಕೆ ಮಾಡಿದ ಐಸಿಸಿ

ತಂಡವನ್ನು ಆಯ್ಕೆ ಮಾಡಿದ ಐಸಿಸಿ

ಪ್ರತಿ ಬಾರಿ ವಿಶ್ವಕಪ್ ನಡೆದಾಗ ಈ ರೀತಿ ಮೌಲ್ಯಯುತ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯ್ಕೆ ಮಾಡುತ್ತದೆ. ಕಾಮೆಂಟೇಟರ್‌ಗಳು, ಮಾಜಿ ಅಂತರಾಷ್ಟ್ರೀಯ ಆಟಗಾರರು ಮತ್ತು ಪತ್ರಕರ್ತರಾದ ಇಯಾನ್ ಬಿಷಪ್ (ಕನ್ವೀನರ್), ಮೆಲ್ ಜೋನ್ಸ್ (ಕಾಮೆಂಟೇಟರ್), ಶಿವನಾರಾಯಣ್ ಚಂದ್ರಪಾಲ್ (ಐಸಿಸಿ ಹಾಲ್ ಆಫ್ ಫೇಮರ್), ಪಾರ್ಥ ಭಾದುರಿ (ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತ), ವಾಸಿಂ ಖಾನ್ (ಐಸಿಸಿ ಕ್ರಿಕೆಟ್ ಜನರಲ್ ಮ್ಯಾನೇಜರ್) ಒಳಗೊಂಡಿರುವ ಆಯ್ಕೆ ಸಮಿತಿಯು ಈ ತಂಡವನ್ನು ಆಯ್ಕೆ ಮಾಡಿದೆ.

ಐಸಿಸಿ ಮೌಲ್ಯಯುತ ತಂಡ

ಐಸಿಸಿ ಮೌಲ್ಯಯುತ ತಂಡ

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್), ಜೋಸ್ ಬಟ್ಲರ್ (ಇಂಗ್ಲೆಂಡ್) ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಾಜಾ (ಜಿಂಬಾಬ್ವೆ), ಶಾದಾಬ್ ಖಾನ್ (ಪಾಕಿಸ್ತಾನ). ಸ್ಯಾಮ್ ಕರನ್ (ಇಂಗ್ಲೆಂಡ್), ಆನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ), ಮಾರ್ಕ್ ವುಡ್ (ಇಂಗ್ಲೆಂಡ್) ಶಾಹೀನ್ ಅಫ್ರಿದಿ (ಪಾಕಿಸ್ತಾನ).

12ನೇ ಆಟಗಾರನಾಗಿ ಭಾರತದ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯರನ್ನು ಹೆಸರಿಸಲಾಗಿದೆ.

Story first published: Monday, November 14, 2022, 12:54 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X