ಸೂರ್ಯಕುಮಾರ್ ಚಿಕ್ಕವನಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಎಂದ ರಾಹುಲ್ ದ್ರಾವಿಡ್

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ಮಾಡಿದರು. 51 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ ನೆರವಿನಿಂದ ಅಜೇಯ 112 ರನ್ ಬಾರಿಸಿ ಭಾರತ 228 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.

ಸರಣಿಯ ಕೊನೆಯ ಪಂದ್ಯದಲ್ಲಿ 91 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.

Ind vs SL 3rd T20I: ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ಸೂರ್ಯ, ರೋಹಿತ್ ದಾಖಲೆ ಕೂಡ ಅಪಾಯದಲ್ಲಿ!Ind vs SL 3rd T20I: ಮ್ಯಾಕ್ಸ್‌ವೆಲ್ ದಾಖಲೆ ಸರಿಗಟ್ಟಿದ ಸೂರ್ಯ, ರೋಹಿತ್ ದಾಖಲೆ ಕೂಡ ಅಪಾಯದಲ್ಲಿ!

ಪಂದ್ಯದ ನಂತರ ರಾಹುಲ್ ದ್ರಾವಿಡ್ ಸೂರ್ಯಕುಮಾರ್ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಬಾಲ್ಯದಲ್ಲಿ ಖಂಡಿತವಾಗಿಯೂ ನನ್ನ ಬ್ಯಾಟಿಂಗ್ ನೋಡಿಲ್ಲ ಎಂದು ತಮಾಷೆ ಮಾಡಿದರು. ಆತ ನನ್ನ ಬ್ಯಾಟಿಂಗ್ ನೋಡಿ ಬೆಳೆದಿದ್ದರೆ, ಈ ರೀತಿ ಆಕ್ರಮಣಕಾರಿಯಾಗಿ ಆಡುತ್ತಿರಲಿಲ್ಲ ಎಂದು ತಮಾಷೆಯಾಗಿ ಮಾತನಾಡಿದರು.

ನಾನು ರಕ್ಷಣಾತ್ಮಕವಾಗಿ ಆಡುತ್ತಿದ್ದೆ, ಆತ ಖಂಡಿತವಾಗಿ ಬಾಲ್ಯದಲ್ಲಿ ನನ್ನ ಬ್ಯಾಟಿಂಗ್ ನೋಡಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೂರ್ಯ ಇಲ್ಲ ನಾನು ಬಾಲ್ಯದಲ್ಲಿ ನಿಮ್ಮ ಬ್ಯಾಟಿಂಗ್ ನೋಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಆತನ ಬ್ಯಾಟಿಂಗ್ ನೋಡುವುದೇ ಖುಷಿ

"ನನ್ನೊಂದಿಗೆ ಇಲ್ಲಿ ಯಾರೋ ಇದ್ದಾರೆ, ಅವರು ಚಿಕ್ಕ ಮಗುವಾಗಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಎಂದು ನನಗೆ ಖಚಿತವಾಗಿ ತಿಳಿದಿದೆ. ಸೂರ್ಯಕುಮಾರ್, ಅಸಾಧಾರಣ ಕ್ರಿಕೆಟಿಗ ನೀವು, ಪ್ರತಿ ಬಾರಿ ನಿಮ್ಮ ಬ್ಯಾಟಿಂಗ್ ನೋಡುವುದು ಸ್ವರ್ಗ ಎಂದು ಭಾಸವಾಗುತ್ತದೆ. ಇದಕ್ಕಿಂತ ಉತ್ತಮ ಟಿ20 ಇನ್ನಿಂಗ್ಸ್ ನೋಡಿಲ್ಲ, ಇದಕ್ಕಿಂತ ಉತ್ತಮ ಇನ್ನಿಂಗ್ಸ್ ಆಡುತ್ತೀರಿ" ಎಂದು ದ್ರಾವಿಡ್ ಚಾಟ್ ಮಾಡುವಾಗ ಹೇಳಿದ್ದಾರೆ.

ದ್ರಾವಿಡ್ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಸೂರ್ಯ, "ಇಲ್ಲ ನಾನು ಚಿಕ್ಕವನಿದ್ದಾಗ ನಿಮ್ಮ ಬ್ಯಾಟಿಂಗ್ ನೋಡಿದ್ದೇನೆ" ಎಂದು ಹೇಳಿದರು. ದ್ರಾವಿಡ್, "ಇಲ್ಲ, ನೀವು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ, ನೀವು ನನ್ನ ಬ್ಯಾಟಿಂಗ್ ನೋಡಿಲ್ಲ ಎಂದು ನನಗೆ ಖಚಿತವಾಗಿದೆ" ಎಂದು ಹೇಳಿದರು.

ಒತ್ತಡದಲ್ಲಿ ಆಡುವುದು ಇಷ್ಟ ಎಂದ ಸೂರ್ಯ

ಒತ್ತಡದಲ್ಲಿ ಆಡುವುದು ತನಗೆ ಇಷ್ಟ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಒತ್ತಡದಲ್ಲಿ ಆಡಲು ನೆರವಾಗಲೆಂದು ಅಭ್ಯಾಸದ ಸಮಯದಲ್ಲೇ ಒತ್ತಡದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದರು.

"ಪಂದ್ಯಕ್ಕೆ ತಯಾರಿ ನಡೆಸುವಾಗ ನಿಮ್ಮ ಮೇಲೆ ಒತ್ತಡ ಹೇರುವುದು ಮುಖ್ಯವಾಗಿದೆ. ಹೆಚ್ಚು ಒತ್ತಡವನ್ನು ಹಾಕಿದರೆ, ಉತ್ತಮವಾಗಿ ಆಡಬಹುದು. ಗುಣಮಟ್ಟದ ಅಭ್ಯಾಸ ಮಾಡುವುದರಿಂದ ಆಟವನ್ನು ಉತ್ತಮಪಡಿಸಿಕೊಳ್ಳಬಹುದು" ಎಂದು ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Sunday, January 8, 2023, 15:42 [IST]
Other articles published on Jan 8, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X