ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಶಿವಂ ದುಬೆ ಆಲ್‌ರೌಂಡ್ ಆಟ; ನಾಕೌಟ್‌ಗೆ ಹತ್ತಿರವಾದ ಮುಂಬೈ

Syed Mushtaq Ali Trophy: Shivam Dubes All-rounder Show; Mumbai Wins Against Vidarbha

ಪೃಥ್ವಿ ಶಾ ಅಪರೂಪದ ಕಡಿಮೆ ರನ್ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ, ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ ಮುಂಬೈಗೆ 15 ರನ್‌ಗಳ ಜಯ ಗಳಿಸಿತು. ಇದರಲ್ಲಿ ಆಲ್‌ರೌಂಡ್ ಪ್ರದರ್ಶನದ ನೀಡಿದ ಶಿವಂ ದುಬೆ ಮುಂಬೈ ಪರ ಮಿಂಚಿದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಶಿವಂ ದುಬೆ ಅವರ 40 ಎಸೆತಗಳಲ್ಲಿ 41 ಮತ್ತು ಸರ್ಫರಾಜ್ ಖಾನ್ ಅವರ 20 ಎಸೆತಗಳಲ್ಲಿ 26 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಗಳಿಸಿ ಟೂರ್ನಿಯ ನೆಚ್ಚಿನ ತಂಡವನ್ನು 150 ರನ್ ಗಡಿ ದಾಟಿಸಲು ಸಾಧ್ಯವಾಯಿತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮಿಂಚಿದ ಶಹಬಾಜ್ ಅಹ್ಮದ್; ತಮಿಳುನಾಡು ವಿರುದ್ಧ ಬಂಗಾಳಕ್ಕೆ ಜಯಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮಿಂಚಿದ ಶಹಬಾಜ್ ಅಹ್ಮದ್; ತಮಿಳುನಾಡು ವಿರುದ್ಧ ಬಂಗಾಳಕ್ಕೆ ಜಯ

ಇದಕ್ಕೆ ಪ್ರತ್ಯುತ್ತರವಾಗಿ ವಿದರ್ಭ ತಂಡವು ಫಾರ್ಮ್‌ನಲ್ಲಿರುವ ಎಡಗೈ ಸ್ಪಿನ್ನರ್ ಶಾಮ್ಸ್ ಮುಲಾನಿ (4 ಓವರ್‌ಗಳಲ್ಲಿ 3/21) ಮತ್ತು ದುಬೆ (3 ಓವರ್‌ಗಳಲ್ಲಿ 2/20) ರನ್‌ಗಳ ಕಡಿವಾಣಕ್ಕೆ ಆರು ವಿಕೆಟ್‌ಗೆ 140 ರನ್‌ಗಳಿಗೆ ಸೀಮಿತವಾಯಿತು ಮತ್ತು ಮುಂಬೈ 15 ರನ್‌ಗಳ ಜಯ ಸಾಧಿಸಿತು.

ಇದಕ್ಕೂ ಮೊದಲು, ಕೊನೆಯ ಪಂದ್ಯದಲ್ಲಿ 61 ಎಸೆತಗಳಲ್ಲಿ 134 ರನ್ ಗಳಿಸಿದ್ದ ಪೃಥ್ವಿ ಶಾ (13 ಎಸೆತಗಳಲ್ಲಿ 19 ರನ್), ಭಾರತದ ಅಂತಾರಾಷ್ಟ್ರೀಯ ಬೌಲರ್ ಉಮೇಶ್ ಯಾದವ್ (2/38) ಎಸೆತದಲ್ಲಿ ಔಟಾಗುವ ಮುನ್ನ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು.

ಅದಾಗ್ಯೂ, ಮಧ್ಯಮ ಓವರ್‌ಗಳಲ್ಲಿ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ (3/28) ಮುಂಬೈಗೆ ಬ್ರೇಕ್ ಹಾಕಿದರು ಮತ್ತು ಶಿವಂ ದುಬೆ ಅವರಂತಹ ದೊಡ್ಡ ಹಿಟ್ಟರ್ ಕೂಡ ನಿಧಾನಗತಿ ಆಟವನ್ನು ಆಡಬೇಕಾಯಿತು.

ಚೇಸಿಂಗ್ ಮಾಡುವಾಗ, ವಿದರ್ಭ ತಂಡವು ಪವರ್‌ಪ್ಲೇನಲ್ಲಿ ಸಂಕಷ್ಟಕ್ಕೆ ಸಿಲುಕಿತು ಮತ್ತು ಒಂಬತ್ತನೇ ಓವರ್‌ನಲ್ಲಿ 4 ವಿಕೆಟ್‌ಗೆ 50 ರನ್ ಗಳಿಸಿತು. ಏಕೆಂದರೆ ಅವರ ಟಿ20 ಸ್ಪೆಷಲಿಸ್ಟ್ ಬಿಗ್-ಹಿಟ್ಟರ್ ಜಿತೇಶ್ ಶರ್ಮಾ ದುಬೆ ಬೌಲಿಂಗ್‌ನಲ್ಲಿ ಕೀಪರ್ ಹಾರ್ದಿಕ್ ತಮೋರ್‌ಗೆ ಕ್ಯಾಚ್ ನೀಡಿದ್ದರು.

ಕೆಳ ಮಧ್ಯಮ ಕ್ರಮಾಂಕವು ತನ್ನ ಪ್ರಯತ್ನವನ್ನು ಮಾಡಿತು, ಆದರೆ ಆ ಹೊತ್ತಿಗೆ ಮುಂಬೈ ತಂಡ ಗೆಲುವಿನ ಗಡಿ ತಲುಪಿತ್ತು. ಮುಂಬೈ ನಾಲ್ಕು ಪಂದ್ಯಗಳಿಂದ 16 ಅಂಕಗಳೊಂದಿಗೆ A ಗುಂಪಿನ ಪಾಯಿಂಟ್‌ಗಳ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ ಮತ್ತು ಕ್ವಾರ್ಟರ್-ಫೈನಲ್‌ಗೆ ನೇರ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಅವರ ಮುಂದಿನ ಮೂರು ಪಂದ್ಯಗಳಲ್ಲಿ ಕೇವಲ ಎರಡನ್ನು ಗೆಲ್ಲಬೇಕಾಗಿದೆ.

ಸಂಕ್ಷಿಪ್ತ ಸ್ಕೋರ್‌ಗಳು:
ಮುಂಬೈ 155/8 (ಶಿವಂ ದುಬೆ 41, ಪೃಥ್ವಿ ಶಾ 19, ಆದಿತ್ಯ ಸರ್ವಾಟೆ 3/28, ಉಮೇಶ್ ಯಾದವ್ 2/38).

ವಿದರ್ಭ 140/6 (ಅಕ್ಷಯ್ ಕರ್ನೆವರ್ 27, ಶಮ್ಸ್ ಮುಲಾನಿ 3/21, ಶಿವಂ ದುಬೆ 2/21).

ಫಲಿತಾಂಶ: ಮುಂಬೈ 15 ರನ್‌ಗಳ ಜಯ ಸಾಧಿಸಿತು.

Story first published: Sunday, October 16, 2022, 20:38 [IST]
Other articles published on Oct 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X