ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಪಾಕಿಸ್ತಾನ ಟಿ20 ಸರಣಿ: ರೋಚಕ ಪಂದ್ಯದಲ್ಲಿ ಗೆದ್ದ ಪಾಕಿಸ್ತಾನ

T20 series: Pakistan won by 4 wickets against Bangladesh at Dhaka

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿದೆ. ಬಾಂಗ್ಲಾದೇಶದ ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಎರಡು ತಂಡಗಳ ಮಧ್ಯೆ ಸಾಕಷ್ಟು ಪೈಪೋಟಿಯ ಸೆಣೆಸಾಟ ನಡೆದರು ಕೂಡ ಅಂತಿಮವಾಗಿ ಪಾಕಿಸ್ತಾನ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 127 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಂತೆಯೇ 4 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಅತ್ಯಂತ ನೀರಸ ಆರಂಭವನ್ನು ಪಡೆದ ಬಾಂಗ್ಲಾದೇಶ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ಅಫಿಫ್ ಹುಸೈನ್, ನೂರುಲ್ ಹಸನ್ ಹಾಗೂ ಮೆಹದಿ ಹಸನ್ ಜವಾಬ್ಧಾರಿಯುವ ಬ್ಯಾಟಿಂಗ್ ಪ್ರದರ್ಶಿಸಿ ತಂಡ 127 ರನ್‌ಗಳಿಸಲು ಕಾರಣವಾದರು. ಈ ಸಂದರ್ಭದಲ್ಲಿ ಬಾಂಗ್ಲಾ ತನ್ನ 7 ವಿಕೆಟ್ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಹಸನ್ ಅಲಿ 3 ವಿಕೆಟ್ ಪಡೆದರೆ ಮೊಹಮ್ಮದ್ ವಾಸಿಂ 2 ಹಾಗೂ ಮೊಹಮಮ್ದ್ ನವಾಜ್ ಹಾಗೂ ಶದಬ್ ಖಾನ್ ತಲಾ ಒಂದು ವಿಕೆಟ್ ಕಿತ್ತರು.

ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್

ಇನ್ನು ಬಾಂಗ್ಲಾದೇಶ ನೀಡಿದ ಈ ಸ್ಕೋರ್ ಬೆನ್ನಟ್ಟಿದ ಪಾಕಿಸ್ತಾನ ಆಘಾತಕಾರಿಯ ಆರಂಭವನ್ನ ಪಡೆಯಿತು. ಟಿ20 ವಿಉಶ್ವಕಪ್‌ನಲ್ಲಿ ಮಿಂಚಿದ ಮೊಹಮ್ಮದ್ ರಿಜ್ವಾನ್, ಬಾಬರ್ ಅಜಂ, ಹೈದರ್ ಅಲಿ ಹಾಗೂ ಶೋಯೆಬ್ ಮಲಿಕ್ 24 ರನ್‌ಗಳಾಗಯವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತ 24 ರನ್‌ಗಳಿಗೆ ಈ ನಾಲ್ಕು ವಿಕೆಟ್ ಕಳೆದುಕೊಂಡಿತ್ತು ಪಾಕಿಸ್ತಾನ. ನಂತರ ಫಕಾರ್ ಜಮಾನ್ ಹಾಗೂ ಕುಶ್ದಿಲ್ ಶಾ ಉತ್ತಮ ಜೊತೆಯಾಟವನ್ನು ನಿಡುವ ಮೂಲಕ ಕುಸಿತಕ್ಕೆ ತಡೆಯಾದರು. ಈ ಇಬ್ಬರು ಕೂಡ ತಲಾ 34 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ಮತ್ತೊಮ್ಮೆ ಮೇಲುಗೈ ಸಾಧಿಸುವ ಆತ್ಮ ವಿಶ್ವಾಸ ಪಡೆದುಕೊಂಡಿತ್ತು.

96 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಸೋಲಿನ ಆತಂಕವನ್ನು ಎದುರಿಸಿತ್ತು. ಆದರೆ ನಂತರ ಬಂದ ಶದಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶಕ್ಕೆ ಮತ್ತೊಂದು ಅವಕಾಶ ನೀಡಲೇ ಇಲ್ಲ. 10 ಎಸೆತ ಎದುರಿಸಿದ ಆದಬ್ ಖಾನ್ 21 ರನ್‌ಗಳಿಸಿದರೆ ಮೊಹಮ್ಮದ್ ನವಾಜ್ 18 ರನ್‌ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ.

ಅಬುಧಾಬಿ ಟಿ10 ಲೀಗ್ 2021: ವೇಳಾಪಟ್ಟಿ, ತಂಡಗಳು, ಸ್ಟಾರ್‌ ಪ್ಲೇಯರ್ಸ್ಅಬುಧಾಬಿ ಟಿ10 ಲೀಗ್ 2021: ವೇಳಾಪಟ್ಟಿ, ತಂಡಗಳು, ಸ್ಟಾರ್‌ ಪ್ಲೇಯರ್ಸ್

ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ಸೈಫ್ ಹಸನ್, ನಜ್ಮುಲ್ ಹೊಸೈನ್ ಶಾಂತೋ, ಅಫೀಫ್ ಹೊಸೈನ್, ಮಹಮ್ಮದುಲ್ಲಾ (ನಾಯಕ), ನೂರುಲ್ ಹಸನ್ (ವಿಕೆಟ್ ಕೀಪರ್), ಅಮಿನುಲ್ ಇಸ್ಲಾಂ, ಶೋರಿಫುಲ್ ಇಸ್ಲಾಂ, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್
ಬೆಂಚ್: ಶಮೀಮ್ ಹುಸೇನ್, ನಸುಮ್ ಅಹ್ಮದ್, ಯಾಸಿರ್ ಅಲಿ, ಶಾಹಿದುಲ್ ಇಸ್ಲಾಂ, ಅಕ್ಬರ್ ಅಲಿ

ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಹೈದರ್ ಅಲಿ, ಶೋಯೆಬ್ ಮಲಿಕ್, ಶಾದಾಬ್ ಖಾನ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಹಸನ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಹರಿಸ್ ರೌಫ್
ಬೆಂಚ್: ಶಹೀನ್ ಅಫ್ರಿದಿ

Story first published: Friday, November 19, 2021, 17:54 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X