ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಶ್ಚರ್ಯವೆಂದರೂ ಇದು ಸತ್ಯ: ಈ ತಂಡಗಳು ಇದುವರೆಗೂ ಒಂದೇ ಒಂದು ಟಿ20 ಪಂದ್ಯದಲ್ಲೂ ಎದುರಾಗಿಲ್ಲ!

T20 World Cup 2021: England and Bangladesh are going to face each other for the first time in a T20 match

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ಹಲವಾರು ಮೊದಲುಗಳಿಗೆ ವೇದಿಕೆಯಾಗುತ್ತಿದೆ. ಇತ್ತೀಚೆಗಷ್ಟೇ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು ಹಾಗೂ ಇದೇ ರೀತಿ ಪಾಕಿಸ್ತಾನ ಭಾರತ ತಂಡವನ್ನು ಮಣಿಸಿತು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹಿಂದೆಂದೂ ಆಗದೇ ಇರುವಂತಹ ಹಲವಾರು ಗೆಲುವುಗಳು ಸಂಭವಿಸಿವೆ.

ಅದೇ ರೀತಿ ಇದೀಗ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಮುಖಾಮುಖಿಯಾಗದಿದ್ದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು ಈ ಪಂದ್ಯ ಸಾಕಷ್ಟು ಕುತೂಹಲ ಮತ್ತು ಆಶ್ಚರ್ಯಕ್ಕೆ ಕಾರಣವಾಗಿದೆ.

ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!

ಹೌದು, ಪ್ರತಿ ಪಂದ್ಯಗಳು ನಡೆಯುವ ಮುನ್ನ ಆ ಎರಡೂ ತಂಡಗಳ ನಡುವಿನ ಹಿಂದಿನ ಪಂದ್ಯಗಳ ಹಣಾಹಣಿ ಮತ್ತು ಆ ಪಂದ್ಯಗಳಲ್ಲಿ ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಯಾರು ಕಡಿಮೆ ಪಂದ್ಯಗಳನ್ನು ಗೆದ್ದಿದ್ದಾರೆ ಎನ್ನುವುದನ್ನು ಪರಿಶೀಲಿಸಿಕೊಂಡು ಯಾವ ತಂಡ ಬಲಿಷ್ಠವಾಗಿದೆ ಮತ್ತು ಯಾವ ತಂಡ ಸಾಮಾನ್ಯವಾಗಿದೆ ಎಂಬುದನ್ನು ನಿರ್ಧರಿಸುತ್ತೇವೆ. ಆದರೆ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಡುವೆ ಇಂದು ( ಅಕ್ಟೋಬರ್ 27 ) ನಡೆಯಲಿರುವ ಪಂದ್ಯದ ಕುರಿತಾಗಿ ಎರಡೂ ತಂಡಗಳ ಮುಖಾಮುಖಿ ಕುರಿತು ಚರ್ಚಿಸಲು ಅಥವಾ ತಿಳಿದುಕೊಳ್ಳಲು ನಮಗೆ ಯಾವುದೇ ರೀತಿಯ ಅಂಕಿ ಅಂಶಗಳು ಕೂಡ ಸಿಗುವುದಿಲ್ಲ. ಯಾಕೆಂದರೆ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯಗಳಲ್ಲಿಯೂ ಈ ಎರಡೂ ತಂಡಗಳು ಮುಖಾ ಮುಖಿಯಾಗಿರುವ ಉದಾಹರಣೆಗಳೇ ಇಲ್ಲ. ಹೀಗಾಗಿ ಇಂದು ಈ ತಂಡಗಳ ನಡುವೆ ನಡೆಯಲಿರುವ ಪಂದ್ಯ ಎರಡೂ ತಂಡಗಳ ನಡುವಿನ ಮುಖಾಮುಖಿಯ ಚೊಚ್ಚಲ ಟಿ20 ಪಂದ್ಯವಾಗಿರಲಿದೆ.

ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

ಇಂಗ್ಲೆಂಡ್‌ - ಬಾಂಗ್ಲಾದೇಶ ಮುಖಾಮುಖಿ ಫಲಿತಾಂಶ

ಇಂಗ್ಲೆಂಡ್‌ - ಬಾಂಗ್ಲಾದೇಶ ಮುಖಾಮುಖಿ ಫಲಿತಾಂಶ

ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ ಯಾವುದೇ ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿಲ್ಲ ಆದರೆ 31 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸೆಣಸಾಟ ನಡೆಸಿವೆ. ಈ ಮುಖಾಮುಖಿಯಲ್ಲಿ ಇಂಗ್ಲೆಂಡ್ 26 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಬಾಂಗ್ಲಾದೇಶ ಕೇವಲ 5 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಒಟ್ಟಾರೆ ಮುಖಾಮುಖಿಯಲ್ಲಿ ಇಂಗ್ಲೆಂಡ್ ಸ್ಪಷ್ಟ ಮೇಲುಗೈ ಸಾಧಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಏಕದಿನ ವಿಶ್ವಕಪ್ ಮುಖಾಮುಖಿಯಲ್ಲಿ ಬಾಂಗ್ಲಾದೇಶ ಇಂಗ್ಲೆಂಡ್ ತಂಡವನ್ನು 2 ಬಾರಿ ಮಣಿಸಿದೆ.

ಪಂದ್ಯದ ವಿವರ:

ಪಂದ್ಯದ ವಿವರ:

ಇನ್ನು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ಇಂದು ( ಅಕ್ಟೋಬರ್ 27 ) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಪ್ರಸಕ್ತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 20ನೇ ಪಂದ್ಯವಾಗಿದೆ.

ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಇಂಗ್ಲೆಂಡ್ ಸಂಭಾವ್ಯ ತಂಡ: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಟೈಮಲ್ ಮಿಲ್ಸ್ / ಮಾರ್ಕ್ ವುಡ್


ಬಾಂಗ್ಲಾದೇಶ ಸಂಭಾವ್ಯ ತಂಡ: ಮೊಹಮ್ಮದ್ ನಯಿಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ (ನಾಯಕ), ಅಫೀಫ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

Story first published: Wednesday, October 27, 2021, 16:54 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X