ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕೈಕ ಟಿ20ಯಲ್ಲಿ ಟೀಂ ಇಂಡಿಯಾ, ಕೊಹ್ಲಿ ಬರೆದ ದಾಖಲೆಗಳಿವು!

ಲಂಕಾ ವಿರುದ್ಧದ ಟಿ20 ಪಂದ್ಯ ಗೆದ್ದು ಹಲವು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ. ಈ ಬಾರಿಯ ಲಂಕಾ ಪ್ರವಾಸವನ್ನು 9-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾದಿಂದಲೂ ದಾಖಲೆ.

ಕೊಲಂಬೊ, ಸೆಪ್ಟೆಂಬರ್ 7: ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಭರ್ಜರಿ 82 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಹಲವಾರು ದಾಖಲೆಗಳ ಸರದಾರನೆನಿಸಿದ್ದಾರೆ. ಅಂದಹಾಗೆ, ಇದು ಅವರ 50ನೇ ಟಿ20 ಪಂದ್ಯವೂ ಹೌದು.

ಇನ್ನು, ಈ ಪಂದ್ಯದಲ್ಲಿನ ಗೆಲುವಿನ ಮೂಲಕ ಟೀಂ ಇಂಡಿಯಾವೂ ಒಂದು ದಾಖಲೆ ಬರೆದಿದೆ. ಅದೇನೆಂದು ನೀವೇ ಓದಿ.

ಏಕೈಕ ಟಿ20 ಗೆದ್ದು ಶ್ರೀಲಂಕಾ ವಿರುದ್ಧ 9-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತಏಕೈಕ ಟಿ20 ಗೆದ್ದು ಶ್ರೀಲಂಕಾ ವಿರುದ್ಧ 9-0 ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

ಕೊಲಂಬೋದಲ್ಲಿ ಬುಧವಾರ ಸಂಜೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಕೊಹ್ಲಿ, ಮೊದಲಿಗೆ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ್ದರು. ಅದರಂತೆ ಬ್ಯಾಟಿಂಗ್ ಗೆ ಇಳಿದ ಲಂಕಾ ಪಡೆ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 19.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ ಗೆಲವು ಸಾಧಿಸಿತ್ತು.

ನಾಯಕ ವಿರಾಟ್ ಕೊಹ್ಲಿ (82 ರನ್, 54 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಮನೀಶ್ ಪಾಂಡೆ (51 ರನ್, 36 ಎಸೆತ, 4 ಬೌಂಡರಿ, 1 ಸಿಕ್ಸರ್) ಅವರ ಈ ಜೋಡಿ 3ನೇ ವಿಕೆಟ್ ಗೆ ಪೇರಿಸಿದ 119 ರನ್ ಜತೆಯಾಟ ಭಾರತದ ಜಯವನ್ನು ನನಸಾಗಿಸಿತು.

ಈ ಪಂದ್ಯದಲ್ಲಿ ಕೊಹ್ಲಿ, ಭಾರತ ತಂಡದ ಸಾಧನೆಗಳು ಇಂತಿವೆ.

ಬ್ರೆಂಡಾನ್, ದಿಲ್ಶಾನ್ ನಂತರದ ಸ್ಥಾನ

ಬ್ರೆಂಡಾನ್, ದಿಲ್ಶಾನ್ ನಂತರದ ಸ್ಥಾನ

ಇದೀಗ ವಿರಾಟ್ ಕೊಹ್ಲಿ ಅವರು, ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಪೇರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಈವರೆಗೆ ಅವರು, 1830 ರನ್ ಪೇರಿಸಿದ್ದು, ಈ ಮೂಲಕ ಅವರು ಈ ಪಟ್ಟಿಯ 3ನೇ ಸ್ಥಾನಕ್ಕೇರಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ನ್ಯೂಜಿಲೆಂಡ್ ನ ಬ್ರೆಂಡಾನ್ ಮೆಕಲಂ (71 ಪಂದ್ಯ, 2140 ರನ್), ತಿಲಕರತ್ನೆ ದಿಲ್ಶಾನ್ (80 ಪಂದ್ಯ, 1889 ರನ್) ಗಳಿಸಿದ್ದಾರೆ.

ಚೇಸಿಂಗ್ ನಲ್ಲಿ 10000 ರನ್!

ಚೇಸಿಂಗ್ ನಲ್ಲಿ 10000 ರನ್!

ಕೊಹ್ಲಿ ಅವರು, 71 ರನ್ ಗಳಿಸಿದ್ದಾಗಲೇ ಅವರು ಟಿ20 ಚೇಸಿಂಗ್ ವೇಳೆ ವೈಯಕ್ತಿಕವಾಗಿ 1000 ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ 50ನೇ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆಟಗಾರರ ಪೈಕಿ ಕೊಹ್ಲಿ 4ನೇ ಆಟಗಾರ ಎಂದೆನಿಸಿದರು.

ರೈನಾ ದಾಖಲೆ ಹಿಂದಿಕ್ಕಿದ ಕೊಹ್ಲಿ

ರೈನಾ ದಾಖಲೆ ಹಿಂದಿಕ್ಕಿದ ಕೊಹ್ಲಿ

ಕೊಹ್ಲಿ ದಾಖಳಿಲಿಸಿದ ವೈಯಕ್ತಿಕ 82 ರನ್, ಚೇಸಿಂಗ್ ವೇಳೆ ಭಾರತೀಯ ನಾಯಕನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಈ ಹಿಂದೆ, ಸುರೇಶ ರೈನಾ ಅವರು ತಂಡದ ನಾಯಕರಾಗಿದ್ದಾಗ 2010ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ 72 ರನ್ ಗಳಿಸಿದ್ದರು. ಅದು ಈವರೆಗನ ದಾಖಲೆಯಾಗಿತ್ತು.

ಆಸೀಸ್ ಸಾಧನೆ ಸಮ

ಆಸೀಸ್ ಸಾಧನೆ ಸಮ

ಇದೀಗ, ಟೀಂ ಇಂಡಿಯಾದ ದಾಖಲೆಯೇನು ಎಂಬುದನ್ನು ನೋಡೋಣ. ಈ ಬಾರಿಯ ಶ್ರೀಲಂಕಾ ಸರಣಿಯಲ್ಲಿ ಭಾರತ ತಂಡ ಮೂರು ಟೆಸ್ಟ್, ಐದು ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದು ಲಂಕಾ ವಿರುದ್ಧ 9-0 ಅಂತರದ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಅದು, ಆಸ್ಟ್ರೇಲಿಯಾ ತಂಡವು 2010ರಲ್ಲಿ ಪಾಕಿಸ್ತಾನ ವಿರುದ್ಧ ಸಾಧಿಸಿದ್ದ 9-0 ಅಂತರದ ಕ್ಲೀನ್ ಸ್ವಾಪ್ ಸಾಧನೆಗೆ ಸರಿಸಮನಾದ ಸಾಧನೆ ಮಾಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X