ಭಾರತ vs ಪಾಕಿಸ್ತಾನ: ವಿಕೆಟ್ ಪಡೆಯಬೇಕಿದ್ದರೆ ಈತನನ್ನು ಆಡಿಸಿ: ಅನುಭವಿಯ ಪರ ಚೋಪ್ರ ಬ್ಯಾಟಿಂಗ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಎಷ್ಟು ಕುತೂಹಲದ ಪ್ರಶ್ನೆಯೋ ಈ ಪಂದ್ಯದಲ್ಲಿ ಯಾರೆಲ್ಲಾ ಆಡಲಿದ್ದಾರೆ ಎಂಬುದು ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಟೀಮ್ ಇಂಡಿಯಾ ಸ್ಕ್ವಾಡ್‌ನ 15 ಆಟಗಾರರ ಪೈಕಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿರುವ 11 ಆಟಗಾರರು ಯಾರು ಎಂಬುದು ಪ್ರಶ್ನೆಯಾಗಿದೆ. ಪಿಚ್, ತಂಡದ ಸಂಯೋಜನೆ, ಎದುರಾಳಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ಕೈಗೊಳ್ಳಲಿದ್ದು ಟಾಸ್ ಸಂದರ್ಭದಲ್ಲಿ ತಂಡದ ಆಡುವ ಬಳಗ ಅಧಿಕೃತವಾಗಿ ಘೋಷಣೆಯಾಗಲಿದೆ.

ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ಅದ್ಭುತ ಯಶಸ್ಸು ಪಡೆಯಲಿದ್ದಾರೆ ಎಂಬುದು ಈ ಹಿಂದಿನ ಪಂದ್ಯದಲ್ಲಿಯೂ ಖಚಿತವಾಗಿದೆ. ಐಪಿಎಲ್ ಸಂದರ್ಭದಲ್ಲಿಯೂ ದುಬೈ ಪಿಚ್‌ನಲ್ಲಿ ಬ್ಯಾಟರ್‌ಗಳು ಸ್ಪಿನ್ ಬೌಲಿಂಗ್‌ನ ಎದುರು ಎಷ್ಟು ತಿಣುಕಾಡಿದ್ದರು ಎಂಬುದನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಮೇಲೆ ಇಂದಿನ ಪಂದ್ಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಆಡುವ ಬಳಗದಲ್ಲಿ ಯಾರೆಲ್ಲಾ ಸ್ಪಿನ್ನರ್‌ಗಳಿಗೆ ಅವಕಾಶ ನೀಡಬೇಕು ಎಂಬುದು ಕುತೂಹಲ ಮೂಡಿಸಿದೆ.

ಈ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪೊಡಿಸಿದ್ದಾರೆ. ಸ್ಪಿನ್ನರ್‌ಗಳ ಪೈಕಿ ಇಂದಿನ ಪಂದ್ಯದ ಆಡುವ ಬಳಗದಲ್ಲಿ ವರುಣ್ ಚಕ್ರವರ್ತಿಯನ್ನು ಆಡಿಸುವ ನಿರ್ಧಾರದ ಬದಲಿಗೆ ಅನುಭವಿ ಆರ್ ಅಶ್ವಿನ್ ಅವರನ್ನು ಆಡಿಸಬೇಕು ಎಂದಿದ್ದಾರೆ ಆಕಾಶ್ ಚೋಪ್ರ. ಆರ್ ಅಶ್ವಿನ್ ವಿಕೆಟ್ ಟೇಕರ್ ಆಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದ್ದಾರೆ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಕಾಶ್ ಚೋಪ್ರ ಆಸ್ಟ್ರೇಲಿಯಾ ವಿರುದ್ಧ ಅಶ್ವಿನ್ ಬೌಲಿಂಗ್ ದಾಳಿಯನ್ನು ಉಲ್ಲೇಖಿಸಿ ಬೆಂಬಲವನ್ನು ನೀಡಿದ್ದಾರೆ. "ಆರ್ ಅಶ್ವಿನ್ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಪಡೆಯುವುದು ಬಹಳ ಮುಖ್ಯವಾಗಿರುವ ಕಾರಣದಿಂದಾಗಿ ನೀವು ಎಷ್ಟು ಎಕನಾಮಿಕಲ್ ಆಗಿ ಬೌಲಿಂಗ್ ನಡೆಸಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ. ನೀವು ಬೌಲಿಂಗ್ ನಡೆಸುತ್ತಿದ್ದೀರಿ ಎಂದರೆ ವಿಕೆಟ್ ಪಡೆಯಬೇಕಿದೆ. ಹಾಗಾದಾಗ ಮಾತ್ರವೇ ನೀವು ಒತ್ತಡವನ್ನು ಹೇರಲು ಸಾಧ್ಯವಿದೆ. ವಿಕೆಟ್ ಪಡೆಯದೆ ನೀವು ರನ್ ನಿಯಂತ್ರಣ ಮಾಡಿದರೂ ಸೆಟ್ ಬ್ಯಾಟ್ಸ್‌ಮನ್ ಓರ್ವ ಕ್ರೀಸ್‌ನಲ್ಲಿದ್ದರೆ ಅಂತಿ ಐದು ಓವರ್‌ಗಳಲ್ಲಿ 70 ರನ್‌ಗಳನ್ನು ಕೂಡ ಎದುರಾಳಿ ಗಳಿಸಬಹುದು" ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.

ಅನುಭವಿ ಆರ್ ಅಶ್ವಿನ್ ಈ ಬಾರಿಯ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. 7.41ರ ಸರಾಸರಿಯಲ್ಲಿ ರನ್‌ ನೀಡಿರುವ ಆರ್ ಅಶ್ವಿನ್ 13 ಪಂದ್ಯಗಳ ಪೈಕಿ 7 ವಿಕೆಟ್ ಮಾತ್ರವೇ ಪಡೆದುಕೊಂಡಿದ್ದಾರೆ. ಆದರೆ ಅಭ್ಯಾಸ ಪಂದ್ಯದಲ್ಲಿ ಆರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಯಕ್ಕೆ ಮರಳಿರುವುದನ್ನು ಸಾಬೀತುಪಡಿಸಿದ್ದಾರೆ.

ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!

ಇನ್ನು ಭಾರತ ಹೆಚ್ಚುವರಿ ಸ್ಪಿನ್ನರ್‌ನನ್ನು ಕಣಕ್ಕಿಳಿಸಲು ಬಯಸಿದರೆ ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ಮಧ್ಯೆ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಕೂಡ ಆಕಾಶ್ ಚೋಪ್ರ ಹೆಸರಿಸಿದ್ದಾರೆ. ವರುಣ್ ಚಕ್ರವರ್ತಿ ಆಡಲು ಸಮರ್ಥರಾಗಿದ್ದರೆ ರವೀಂದ್ರ ಜಡೇಜಾ ಜೊತೆಗೆ ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುವುದು ಸೂಕ್ತ ಎಂದಿದ್ದಾರೆ ಆಕಾಶ್ ಚೋಪ್ರ.

ಭಾರತ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್

Virat Kohli ಪಾಕಿಸ್ತಾನದ ಪಂದ್ಯ ಮುಗಿದಾದ ನಂತರ Rohit ಬಗ್ಗೆ ಹೇಳಿದ್ದೇನು | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, October 24, 2021, 14:29 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X