'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್

ಬ್ಲಾಕ್ ಲೈವ್ಸ್ ಮ್ಯಾಟರ್ ಅಭಿಯಾನದ ಅಂಗವಾಗಿ ಮೊಣಕಾಲೂರಿ ಬೆಂಬಲ ಸೂಚಿಸಲು ಲ್ಷಿಕೆಟ್ ದಕ್ಷಿಣ ಆಫ್ರಿಕಾ ಕರೆ ನೀಡಿತ್ತು. ಆದರೆ ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾದ ಈ ಕರೆಗೆ ಸ್ಪಂದಿಸದೇ ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದಿಂದ ಹಿಂದೆ ಸರಿದಿದ್ದರು.

'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಹೌದು, ಕಪ್ಪು ವರ್ಣದ ಜನರ ಬದುಕಿಗಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು ಪಂದ್ಯಕ್ಕೂ ಮುನ್ನ ಮಂಡಿಯೂರುವ ಅಭಿಯಾನವನ್ನು ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ಇಂಗ್ಲೆಂಡ್, ಭಾರತ ಸೇರಿದಂತೆ ಹಲವಾರು ತಂಡಗಳು ಕೂಡ ಬೆಂಬಲವನ್ನು ಸೂಚಿಸಿದ್ದವು. ಆದರೆ ಬಿಳಿವರ್ಣ ಮತ್ತು ಕಪ್ಪು ವರ್ಣ ಎರಡೂ ರೀತಿಯ ಜನರು ವಾಸವಿರುವ ದಕ್ಷಿಣ ಆಫ್ರಿಕಾ ಮೂಲದ ಆಟಗಾರನಾದ ಕ್ವಿಂಟನ್ ಡಿ ಕಾಕ್ ಮಾತ್ರ ಕಪ್ಪು ವರ್ಣ ಜನರ ಬದುಕಿಗಾಗಿ ಮೈದಾನದಲ್ಲಿ ಮಂಡಿಯೂರಲು ನಿರಾಕರಿಸಿ ಇತ್ತೀಚೆಗಷ್ಟೇ ನಡೆದ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

ಈ ಕುರಿತು ಸಾಕಷ್ಟು ಗೊಂದಲಗಳು ಮತ್ತು ವಿವಾದಗಳು ಕೂಡ ಹುಟ್ಟಿಕೊಂಡಿದ್ದವು. ಕ್ವಿಂಟನ್ ಡಿ ಕಾಕ್ ಅವರಿಗೆ ಕಪ್ಪು ವರ್ಣದ ಜನರೆಂದರೆ ಕಾಳಜಿ ಇಲ್ಲ ಎಂದು ಕ್ವಿಂಟನ್ ಡಿಕಾಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೆ ಈ ಅಭಿಯಾನದಲ್ಲಿ ಪಾಲ್ಗೊಳ್ಳದೇ ಹಿಂದುಳಿದ ಕ್ವಿಂಟನ್ ಡಿ ಕಾಕ್ ಅವರನ್ನು ಸೌತ್ಆಫ್ರಿಕಾ ಕ್ರಿಕೆಟ್ ತಮ್ಮ ತಂಡದಿಂದ ಹೊರಡಲಿದ್ದು ಈಗಾಗಲೇ ಕ್ವಿಂಟನ್ ಡಿ ಕಾಕ್ ತಮ್ಮ ತವರಿಗೆ ಪಯಣ ಬೆಳೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಈ ರೀತಿಯ ಎಲ್ಲ ಸುದ್ದಿಗಳಿಗೂ ತೆರೆ ಎಳೆದಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕ್ವಿಂಟನ್ ಡಿ ಕಾಕ್ ಮುಂದಿನ ಪಂದ್ಯಗಳನ್ನು ಆಡಲಿದ್ದಾರೆ, ಅವರು ತವರು ದೇಶಕ್ಕೆ ಮರಳಲು ಯತ್ನವನ್ನು ಕೂಡ ಮಾಡಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿತ್ತು. ಹೀಗೆ ಕ್ವಿಂಟನ್ ಡಿ ಕಾಕ್ ಕಪ್ಪು ವರ್ಣದ ಜನರಿಗೋಸ್ಕರ ಮೈದಾನದಲ್ಲಿ ಮಂಡಿಯೂರಲು ನಿರಾಕರಿಸಿದ ಕಾರಣದಿಂದಾಗಿ ಸಾಕಷ್ಟು ವಾದ ವಿವಾದಗಳು ಹುಟ್ಟಿಕೊಂಡಿದ್ದವು. ಇದೀಗ ಈ ವಾದ ವಿವಾದಗಳಿಗೆಲ್ಲ ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಬ್ರೇಕ್ ಹಾಕಿದ್ದು ಕ್ವಿಂಟನ್ ಡಿ ಕಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಬರೆದಿರುವ ಬಹಿರಂಗ ಪತ್ರವೊಂದನ್ನು ಶೇರ್ ಮಾಡಿದೆ.

ಕ್ಷಮೆಯಾಚಿಸಿದ ಡಿ ಕಾಕ್

ಕ್ಷಮೆಯಾಚಿಸಿದ ಡಿ ಕಾಕ್

ಕ್ವಿಂಟನ್ ಡಿಕಾಕ್ ಅಭಿಮಾನಿಗಳಿಗೆ ಬರೆದಿರುವ ಈ ವಿಶೇಷ ಪತ್ರದಲ್ಲಿ ಮೊದಲಿಗೆ ತನ್ನ ತಂಡದ ಸಹ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ. ನಾನು ವಿವಾದವನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಮಂಡಿಯೂರಲು ನಿರಾಕರಿಸಿ ಹಿಂದೆ ಸರಿಯಲಿಲ್ಲ. ಕ್ರಿಕೆಟ್ ಆಟಗಾರರಾಗಿ ನಾವು ಕಪ್ಪು ವರ್ಣದ ಜನರ ಬದುಕಿಗಾಗಿ ಮಂಡಿಯೂರುವುದು ಎಷ್ಟು ಮಹತ್ವದ ಕಾರ್ಯ ಮತ್ತು ಉತ್ತಮ ಉದಾಹರಣೆ ಎಂಬುದು ತಿಳಿದಿದೆ. ನಾನು ಮಂಡಿಯೂರಿ ಅಭಿಯಾನದಲ್ಲಿ ಪಾಲ್ಗೊಳ್ಳುವುದರಿಂದ ಇತರರಿಗೆ ಕಪ್ಪು ವರ್ಣದ ಜನರನ್ನು ಸಮಾನವಾಗಿ ಕಾಣಬೇಕೆಂಬ ಪಾಠವಾಗಲಿದೆ ಎಂದರೆ ಖಂಡಿತವಾಗಿಯೂ ನಾನು ಖುಷಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಕ್ವಿಂಟನ್ ಡಿ ಕಾಕ್ ಬರೆದುಕೊಂಡಿದ್ದಾರೆ.

ನನ್ನ ಕುಟುಂಬದಲ್ಲೂ ಕಪ್ಪು ವರ್ಣದ ಸದಸ್ಯರಿದ್ದಾರೆ

ನನ್ನ ಕುಟುಂಬದಲ್ಲೂ ಕಪ್ಪು ವರ್ಣದ ಸದಸ್ಯರಿದ್ದಾರೆ

ಇನ್ನೂ ಮುಂದುವರೆದು ಬರೆದುಕೊಂಡಿರುವ ಕ್ವಿಂಟನ್ ಡಿ ಕಾಕ್ ನಾನು ಮಿಶ್ರ ವರ್ಣದ ಸದಸ್ಯರು ಇರುವಂತಹ ಕುಟುಂಬದಿಂದ ಬಂದಿರುವವನು. ನನಗೆ ಕಪ್ಪು ವರ್ಣದ ಜನರ ಬದುಕಿನ ಮೇಲೆ ಕಾಳಜಿ ಇಲ್ಲ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಆದರೆ ನನ್ನ ಮಲತಾಯಿ ಕಪ್ಪು ವರ್ಣದವರು ಮತ್ತು ನನ್ನ ಸೋದರಿಯರು ಬಿಳಿ ವರ್ಣದವರು. ಹೀಗಾಗಿ ನಾನು ನನ್ನ ಬಾಲ್ಯದಿಂದಲೂ ಸಹ ಕಪ್ಪು ವರ್ಣದ ಜನರ ಬದುಕಿನೊಂದಿಗೆ ಬೆಳೆದು ಬಂದವನು. ಹೀಗಿರುವಾಗ ನಾನೇಕೆ ಕಪ್ಪು ವರ್ಣದ ಜನರ ಬದುಕಿಗೆ ಬೆಂಬಲ ನೀಡುವುದಿಲ್ಲ ಎಂದು ಕ್ವಿಂಟನ್ ಡಿಕಾಕ್ ಬರೆದುಕೊಂಡಿದ್ದಾರೆ.

ನನ್ನ ಗರ್ಭಿಣಿ ಪತ್ನಿಗೆ ನೋವಾಗಿದೆ

ನನ್ನ ಗರ್ಭಿಣಿ ಪತ್ನಿಗೆ ನೋವಾಗಿದೆ

ಇನ್ನು ಕ್ವಿಂಟನ್ ಡಿ ಕಾಕ್ ಮಂಡಿಯೂರಲು ಹಿಂದೆ ಸರಿದಿದ್ದ ಕಾರಣದಿಂದಾಗಿ ಅವರನ್ನು ಹಲವಾರು ಮಂದಿ ವರ್ಣಭೇದ ಮಾಡುವವನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದರು. ಈ ಕುರಿತಾಗಿ ಮಾತನಾಡಿರುವ ಕ್ವಿಂಟನ್ ಡಿ ಕಾಕ್ ನಾನೋರ್ವ ವರ್ಣ ಭೇದ ಮಾಡುವಂತ ವ್ಯಕ್ತಿಯಾಗಿದ್ದರೆ ಮಂಡಿಯೂರುವ ನಾಟಕ ಮಾಡುತ್ತಿದ್ದೆ. ಕಪ್ಪು ವರ್ಣದ ಜನರ ಜತೆ ಬೆಳೆದು ಬಂದ ನನಗೆ ಆ ರೀತಿಯ ಕೆಲಸ ಮಾಡುವ ಅಗತ್ಯವಿಲ್ಲ. ವಿಷಯ ತಿಳಿಯದೇ ಹಲವಾರು ಮಂದಿ ನನ್ನ ವಿರುದ್ಧ ನಿಂದನೆ ಮಾಡಿದರು, ನನ್ನನ್ನು ವರ್ಣಭೇದ ಮಾಡುವವ ಎಂದರು. ಈ ವಿಷಯದಿಂದ ನನ್ನ ಕುಟುಂಬಕ್ಕೆ ನೋವಾಗಿದೆ ಮತ್ತು ಗರ್ಭಿಣಿಯಾದ ನನ್ನ ಪತ್ನಿಗೆ ನೋವುಂಟಾಗಿದೆ. ನಾನು ವರ್ಣ ಭೇದ ಮಾಡುವ ವ್ಯಕ್ತಿಯಲ್ಲ ಎಂಬುದು ನನ್ನ ಮನಸ್ಸಿಗೆ ಗೊತ್ತಿದೆ ಮತ್ತು ನನ್ನನ್ನು ಚೆನ್ನಾಗಿ ಅರಿತವರಿಗೆ ತಿಳಿದಿದೆ ಎಂದು ಕ್ವಿಂಟನ್ ಡಿ ಕಾಕ್ ತಾವು ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಅಭಿಯಾನದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ ಎಂದೂ ಸಹ ಕ್ವಿಂಟನ್ ಡಿ ಕಾಕ್ ಭರವಸೆ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, October 28, 2021, 15:48 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X