ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NED: ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡದ ಮೂರು ಬದಲಾವಣೆ; ರಿಷಭ್ ಪಂತ್‌ಗೆ ಸ್ಥಾನ?

T20 World Cup 2022: 3 Changes In Team India Against Netherlands Match; A Place For Rishabh Pant?

ಭಾರತ ತಂಡವು ತನ್ನ ಟಿ20 ವಿಶ್ವಕಪ್ 2022 ಅಭಿಯಾನವನ್ನು ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವಿನೊಂದಿಗೆ ಪ್ರಾರಂಭಿಸಿತು.

ವಿರಾಟ್ ಕೊಹ್ಲಿಯ ಅತ್ಯುತ್ತಮ ಪ್ರದರ್ಶನದ ಸಹಾಯದಿಂದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ರೋಚಕ ಗೆಲುವಿನ ನಂತರ, ಭಾರತ ಇದೀಗ ಅಕ್ಟೋಬರ್ 27ರಂದು ಗುರುವಾರ ಸಿಡ್ನಿಯಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಟಿ20 ವಿಶ್ವಕಪ್ 2022: ಮುಂದಿನ ಪಂದ್ಯದಲ್ಲಿ ಈವರನ್ನು ಕೈಬಿಡುವುದು ಸರಿಯಲ್ಲ; ಅನಿಲ್ ಕುಂಬ್ಳೆಟಿ20 ವಿಶ್ವಕಪ್ 2022: ಮುಂದಿನ ಪಂದ್ಯದಲ್ಲಿ ಈವರನ್ನು ಕೈಬಿಡುವುದು ಸರಿಯಲ್ಲ; ಅನಿಲ್ ಕುಂಬ್ಳೆ

ಈ ಪಂದ್ಯಕ್ಕೆ ಮುಂಚಿತವಾಗಿ ಭಾರತದ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಮಾತುಗಳು ಕೇಳಿಬರುತ್ತಿವೆ. ಯಾವುದೇ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಬಾರದು ಕಾರಣಕ್ಕೆ ವಿಶ್ರಾಂತಿ ನೀಡಬಯಸುತ್ತಿದೆ. ಏಕೆಂದರೆ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳು ಬರಲಿರುವ ಕಾರಣ, ತಮ್ಮ ತಂಡವನ್ನು ತಾಜಾವಾಗಿರಿಸಿಕೊಳ್ಳಲು ನೋಡುತ್ತಿದೆ.

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡವು ಮಾಡಬಹುದಾದ ಮೂರು ಬದಲಾವಣೆಗಳ ಪಟ್ಟಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ ಬದಲಾಗಿ ರಿಷಭ್ ಪಂತ್ ಆಯ್ಕೆ

ಹಾರ್ದಿಕ್ ಪಾಂಡ್ಯ ಬದಲಾಗಿ ರಿಷಭ್ ಪಂತ್ ಆಯ್ಕೆ

ಪಾಕಿಸ್ತಾನ ವಿರುದ್ಧದ ಪಂದ್ಯದ ಮುನ್ನಾದಿನದಂದು, ಹಾರ್ದಿಕ್ ಪಾಂಡ್ಯ ಅವರ ಬಲ ಮೊಣಕಾಲಿನ ಮೇಲೆ ದೊಡ್ಡ ಪಟ್ಟಿಯನ್ನು ಹೊಂದಿದ್ದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಕುಂಟುತ್ತಿರುವುದನ್ನು ಗುರುತಿಸಲಾಗಿತ್ತು. ಆದರೆ, ಇದು ಕೇವಲ ಸೆಳೆತದ ಭಾಗ ಎಂದು ಹೇಳಿದರು.

ಆದಾಗ್ಯೂ, ಗುಜರಾತ್ ಟೈಟನ್ಸ್ ತಂಡದ ನಾಯಕನೂ ಆಗಿರುವ ಹಾರ್ದಿಕ್ ಪಾಂಡ್ಯ ನೆದರ್ಲ್ಯಾಂಡ್ಸ್ ವಿರುದ್ಧದ ಹೋರಾಟದ ಮೊದಲು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕಡ್ಡಾಯ ತರಬೇತಿ ಅವಧಿಯನ್ನು ತಪ್ಪಿಸಿಕೊಂಡರು. ಇದೇ ವೇಳೆ ರಿಷಭ್ ಪಂತ್ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿರುವುದು ಕಂಡುಬಂತು. ಒಂದು ವೇಳೆ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆದರೆ ಬದಲಿ ಆಟಗಾರನಾಗಿ ಅವಕಾಶ ಮಾಡುವ ನಿರೀಕ್ಷೆಯಿದೆ.

ಇದರರ್ಥ ಭಾರತವು ಹೆಚ್ಚುವರಿ ಬ್ಯಾಟ್ಸ್‌ಮನ್‌ನೊಂದಿಗೆ ಆಡುತ್ತದೆ ಮತ್ತು ಆರನೇ ಬೌಲಿಂಗ್ ಆಯ್ಕೆಯೊಂದಿಗೆ ಆಡುವುದಿಲ್ಲ. ಬಾಂಗ್ಲಾದೇಶದ ವಿರುದ್ಧ ತಮ್ಮ ಮೊದಲ ಪಂದ್ಯದಲ್ಲಿ ಸೋತ ನೆದರ್ಲ್ಯಾಂಡ್ಸ್ ವಿರುದ್ಧ ಇದು ತುಂಬಾ ದೊಡ್ಡ ಪಂದ್ಯ ಅಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಬದಲಿಗೆ ಯುಜ್ವೇಂದ್ರ ಚಹಾಲ್

ರವಿಚಂದ್ರನ್ ಅಶ್ವಿನ್ ಬದಲಿಗೆ ಯುಜ್ವೇಂದ್ರ ಚಹಾಲ್

ಪಾಕಿಸ್ತಾನದ ವಿರುದ್ಧ ಆಡುವ ಹನ್ನೊಂದರಲ್ಲಿ ಸೇರ್ಪಡೆಗೊಳ್ಳಲು ಪ್ರಮುಖ ಕಾರಣವೆಂದರೆ, ಎದುರಾಳಿ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ಗಳು. ಪ್ರಧಾನವಾಗಿ ಬಲಗೈ ಬ್ಯಾಟಿಂಗ್ ಘಟಕವಾಗಿರುವ ನೆದರ್ಲ್ಯಾಂಡ್ಸ್ ವಿರುದ್ಧ ಭಾರತವು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್‌ರನ್ನು ಆಡಿಸಬಹುದು.

ಅಕ್ಷರ್ ಪಟೇಲ್ ಪಾಕಿಸ್ತಾನದ ವಿರುದ್ಧ ಬ್ಯಾಟ್ ಮತ್ತು ಬಾಲ್‌ನಿಂದ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ, ಅಕ್ಷರ್ ಪಟೇಲ್‌ರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಎಡಗೈ ಸ್ಪಿನ್ನರ್ ಮತ್ತು ಲೆಗ್ ಸ್ಪಿನ್ನರ್ ಹೊಂದಿರುವ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಬ್ಯಾಟಿಂಗ್ ರೂಪದಲ್ಲಿ ಅಕ್ಷರ್ ಪಟೇಲ್ ಮಿಂಚಬಹುದು. ಒಂದು ವೇಳೆ ರಿಷಭ್ ಪಂತ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದಿದ್ದರೂ, ಭಾರತ ತಮ್ಮ ಲೈನ್-ಅಪ್‌ನಲ್ಲಿ ಅಕ್ಷರ್‌ನನ್ನು ಉಳಿಸಿಕೊಳ್ಳಬಹುದು.

ಹರ್ಷಲ್ ಪಟೇಲ್‌ಗೆ ಅವಕಾಶ ಸಾಧ್ಯತೆ

ಹರ್ಷಲ್ ಪಟೇಲ್‌ಗೆ ಅವಕಾಶ ಸಾಧ್ಯತೆ

ಸದ್ಯ ತಂಡದಲ್ಲಿರುವ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಅರ್ಶ್‌ದೀಪ್ ಸಿಂಗ್ ಯಾರಾದರೊಬ್ಬರು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ಪಂದ್ಯದ ಮೇಲೆ ಒಂದು ಕಣ್ಣಿಟ್ಟರೆ, ತಂಡದ ಮ್ಯಾನೇಜ್‌ಮೆಂಟ್ ತಮ್ಮ ಬೌಲರ್‌ಗಳು ಫಿಟ್ ಮತ್ತು ಫೈನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ.

ಕಳೆದ ವರ್ಷದಿಂದ ಕೇವಲ ಒಂದು ಟಿ20 ಪಂದ್ಯ ಆಡಿರುವ ಮೊಹಮ್ಮದ್ ಶಮಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವನ್ನು ಕಳೆದುಕೊಳ್ಳಬಹುದು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ತರಬೇತಿ ಪಡೆದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡರು. ಅನಂತರ ಜಸ್ಪ್ರೀತ್ ಬುಮ್ರಾ ಅವರ ಬದಲಿ ಬೌಲರ್ ಆಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು.

ಟೀಮ್ ಮ್ಯಾನೇಜ್‌ಮೆಂಟ್ ಬದಲಾವಣೆ ಮಾಡಲು ನಿರ್ಧರಿಸಿದರೆ ಅವರ ಸ್ಥಾನ ತುಂಬಲು ಹರ್ಷಲ್ ಪಟೇಲ್ ಸ್ಪಷ್ಟ ಬೌಲರ್ ಆಗಿದ್ದಾರೆ. ವೇಗಿಯು ಆರಂಭಿಕ ಓವರ್‌ಗಳಲ್ಲಿ ದುಬಾರಿಯಾಗುತ್ತಿದ್ದು, ಆದರೆ ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಉತ್ತಮ ಆಯ್ಕೆಯಾಗಿದೆ.

Story first published: Thursday, October 27, 2022, 12:06 [IST]
Other articles published on Oct 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X