ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WI vs ZIM: ವೆಸ್ಟ್ ಇಂಡೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ, 31 ರನ್‌ಗಳ ಜಯ ಸಾಧಿಸಿದ ಕೆರಿಬಿಯನ್ ದೈತ್ಯರು

T20 World Cup 2022: Alzarri Joseph And Holder Bowling Help West indies To Beat Zimbabwe By 31 Runs

ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ವೆಸ್ಟ್ ಇಂಡೀಸ್ ಜಿಂಬಾಬ್ವೆ ವಿರುದ್ಧ 31 ರನ್‌ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸುವ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ.

ಟಿ20 ವಿಶ್ವಕಪ್ 2022: IND vs PAK ಪಂದ್ಯಕ್ಕೂ ಮುನ್ನ ತಮ್ಮದೇ ತಂಡವನ್ನು ಟೀಕಿಸಿದ ಮಿಸ್ಬಾ-ಉಲ್-ಹಕ್ಟಿ20 ವಿಶ್ವಕಪ್ 2022: IND vs PAK ಪಂದ್ಯಕ್ಕೂ ಮುನ್ನ ತಮ್ಮದೇ ತಂಡವನ್ನು ಟೀಕಿಸಿದ ಮಿಸ್ಬಾ-ಉಲ್-ಹಕ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್, ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಜಾನ್ಸನ್ ಚಾರ್ಲ್ಸ್, ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್ ಉಳಿದ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾದರು.

ಜಾನ್ಸನ್ ಚಾರ್ಲ್ಸ್ 36 ಎಸೆತಗಳಲ್ಲಿ 45 ರನ್ ಗಳಿಸಿದರು. ರೋವ್‌ಮನ್ ಪೊವೆಲ್ 21 ಎಸೆತಗಳಲ್ಲಿ 28 ರನ್ ಗಳಿಸಿದರು, ಅಂತಿಮವಾಗಿ ಅಕೇಲ್ ಹೊಸೈನ್ 18 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಉತ್ತಮ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ವೆಸ್ಟ್ ಇಂಡೀಸ್ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು.

T20 World Cup 2022: Alzarri Joseph And Holder Bowling Help West indies To Beat Zimbabwe By 31 Runs

153 ರನ್ ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ವೆಸ್ಲಿ ಮಾಧೆವೆರೆ 19 ಎಸೆತಗಳಲ್ಲಿ 27 ರನ್ ಗಳಿಸಿ ಉತ್ತಮ ಆರಂಭ ನೀಡಿದರು. 2.2 ಓವರ್ ಗಳಲ್ಲಿ 29 ರನ್ ಗಳಿಸಿದ್ದ ಜಿಂಬಾಬ್ವೆಗೆ ಅಲ್ಜಾರಿ ಜೋಸೆಫ್ ಶಾಕ್ ನೀಡಿದರು. 9 ಎಸೆತಗಳಲ್ಲಿ 13 ರನ್ ಗಳಿಸಿದ್ದ ಜಿಂಬಾಬ್ವೆ ನಾಯಕ ರೆಗಿಸ್ ಚಕಬ್ವಾ ಅವರನ್ನು ಬೌಲ್ಡ್ ಮಾಡಿದರು.

ನಂತರ ವೆಸ್ಟ್ ಇಂಡೀಸ್ ತಂಡದ ಮಾರಕ ಬೌಲಿಂಗ್ ದಾಳಿಗೆ ಜಿಂಬಾಬ್ವೆ ತತ್ತರಿಸಿತು. 122 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 31 ರನ್‌ಗಳ ಸೋಲೊಪ್ಪಿಕೊಂಡಿತು.

Story first published: Wednesday, October 19, 2022, 17:10 [IST]
Other articles published on Oct 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X