ಟಿ20 ವಿಶ್ವಕಪ್: IND vs PAK ನಡುವೆ ಗೆಲ್ಲುವ ತಂಡವನ್ನು ಹೆಸರಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

2022ರ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳನ್ನು ಮುಗಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಸೆಣಸಾಟಕ್ಕೆ ಸಿದ್ಧವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಪಂದ್ಯ ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಈ ಬಾರಿ ಭಾರತ ತಂಡ ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

IND vs PAK: ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸಂಭಾವ್ಯ ಆಡುವ 11ರ ಬಳಗ ಹೆಸರಿಸಿದ ಗಂಭೀರ್!IND vs PAK: ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸಂಭಾವ್ಯ ಆಡುವ 11ರ ಬಳಗ ಹೆಸರಿಸಿದ ಗಂಭೀರ್!

ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ)ದಲ್ಲಿ ಭಾನುವಾರ, ಅಕ್ಟೋಬರ್ 23ರಂದು ನಡೆಯಲಿರುವ ಟಿ20 ವಿಶ್ವಕಪ್ 2022ರ ಸೂಪರ್ 12 ಪಂದ್ಯದಲ್ಲಿ ಭಾರತ ತಂಡವು ಫೇವರಿಟ್ ಆಗಿದೆಯೇ ಎಂಬ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೂತನ ಅಧ್ಯಕ್ಷ ರೋಜರ್ ಬಿನ್ನಿ ಪ್ರತಿಕ್ರಿಯಿಸಿದ್ದಾರೆ.

2007ರಿಂದ 2016 ರವರೆಗಿನ ಟಿ20 ವಿಶ್ವಕಪ್‌ಗಳಲ್ಲಿ ಅಜೇಯವಾಗಿತ್ತು

2007ರಿಂದ 2016 ರವರೆಗಿನ ಟಿ20 ವಿಶ್ವಕಪ್‌ಗಳಲ್ಲಿ ಅಜೇಯವಾಗಿತ್ತು

ಭಾರತ ತಂಡವು 2007ರಿಂದ 2016 ರವರೆಗಿನ ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯವಾಗಿತ್ತು. ಆದರೆ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ, ಕಳೆದ ವರ್ಷ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿ ತಮ್ಮ ಗೆಲುವಿನ ಖಾತೆಯನ್ನು ತೆರೆದರು.

ಆದಾಗ್ಯೂ, 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದ ರೋಜರ್ ಬಿನ್ನಿ, ಮುಂಬರುವ ಪಂದ್ಯದಲ್ಲಿ ಭಾರತವೇ ಮೆಚ್ಚಿನ ತಂಡವಾಗಿರುತ್ತದೆ ಎಂದು ಎಣಿಸಿದ್ದಾರೆ.

ಪ್ರತಿಯೊಂದು ಪಂದ್ಯದಲ್ಲೂ ಭಾರತ ಮೆಚ್ಚಿನ ತಂಡವಾಗಿರುತ್ತದೆ

ಪ್ರತಿಯೊಂದು ಪಂದ್ಯದಲ್ಲೂ ಭಾರತ ಮೆಚ್ಚಿನ ತಂಡವಾಗಿರುತ್ತದೆ

"ಭಾರತವು ಇನ್ನು ಮುಂದೆ ಅಂಡರ್‌ಡಾಗ್ ಟ್ಯಾಗ್ ಅನ್ನು ಹೊಂದಿಲ್ಲ. ಈಗ ಅವರು ಆಡುವ ಪ್ರತಿಯೊಂದು ಪಂದ್ಯದಲ್ಲೂ ಭಾರತ ಮೆಚ್ಚಿನ ತಂಡವಾಗಿರುತ್ತದೆ ಮತ್ತು ಟಿ20 ಪಂದ್ಯದ ಆ ಕ್ಷಣದಲ್ಲಿ ನೀವು ಹೇಗೆ ಆಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದುಬೈನಲ್ಲಿ ಮತ್ತು ಹಿಂದಿನಂತೆ ಟಾಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಪಿಚ್‌ಗಳು ಉತ್ತಮವಾಗಿರಲಿವೆ ಮತ್ತು ಅದನ್ನು ವೀಕ್ಷಿಸಲು ಉತ್ತಮ ಆಟವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾನು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಎದುರು ನೋಡುತ್ತಿದ್ದೇನೆ," ಎಂದು ರೋಜರ್ ಬಿನ್ನಿ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯೆಷ್ಟೇ ಸೌರವ್ ಗಂಗೂಲಿ ಅವರ ಬದಲಾಗಿ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅಯ್ಕೆಯಾಗಿದ್ದು, ಆಟಗಾರರು ಒತ್ತಡ ಮತ್ತು ಸಾರ್ವಜನಿಕರಿಂದ ಉಂಟಾಗುವ ಪ್ರಚೋದನೆಯಿಂದ ಗೊಂದಲಕ್ಕೊಳಗಾಗುವುದಿಲ್ಲ ಎಂದು ಹೇಳಿದರು.

ಇನ್ನೊಂದು ಪಂದ್ಯದಂತೆ ಆಡುತ್ತೇವೆ

ಇನ್ನೊಂದು ಪಂದ್ಯದಂತೆ ಆಡುತ್ತೇವೆ

"ಒಮ್ಮೆ ಆಟಗಾರರು ಮೈದಾನಕ್ಕೆ ಬಂದರೆ, ಯಾವುದೇ ಒತ್ತಡವಿರಲ್ಲ. ನಾವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಇನ್ನೊಂದು ಪಂದ್ಯದಂತೆ ಆಡುತ್ತೇವೆ. ಆಟಗಾರರು ಮೂಲಭೂತವಾಗಿ ಆದೇಶಗಳನ್ನು ಅನುಸರಿಸುತ್ತಾರೆ," ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.

"ಒತ್ತಡವು ಮೈದಾನದ ಹೊರಗೆ ನಿರ್ಮಿಸಲ್ಪಟ್ಟಿದೆ ಮತ್ತು ತಂಡವು ನಿಜವಾಗಿಯೂ ಅದರಿಂದ ಬಳಲುತ್ತಿಲ್ಲ. ಸಾರ್ವಜನಿಕರು ಆಟಗಾರರಿಗಿಂತ ಹೆಚ್ಚು ಉದ್ವಿಗ್ನರಾಗಿರುವುದರಿಂದ ಒತ್ತಡವನ್ನು ನಿರ್ಮಿಸುತ್ತಾರೆ," ಎಂದು ಬಿನ್ನಿ ಅಭಿಪ್ರಾಯಪಟ್ಟರು.

ಭಾರತ ಮತ್ತು ಪಾಕಿಸ್ತಾನ ಇತ್ತೀಚೆಗೆ ಏಷ್ಯಾ ಕಪ್ 2022ರಲ್ಲಿ ಮುಖಾಮುಖಿಯಾಗಿದ್ದವು. ಭಾರತವು ಮೊದಲ ಪಂದ್ಯವನ್ನು ಗೆದ್ದರೆ, ಪಾಕಿಸ್ತಾನವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು ಮತ್ತು ಇದರಿಂದ ಭಾರತ ತಂಡವು ಫೈನಲ್ ತಲುಪಲು ಸಾಧ್ಯವಾಗಲಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, October 20, 2022, 23:51 [IST]
Other articles published on Oct 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X