ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs NZ: ಕಿವೀಸ್‌ಗೂ ತಟ್ಟಿದ ಗಾಯದ ಬಿಸಿ; ಆಸೀಸ್ ವಿರುದ್ಧದ ಪಂದ್ಯಕ್ಕೆ ಪ್ರಮುಖ ಆಲ್‌ರೌಂಡರ್ ಔಟ್

T20 World Cup 2022: New Zealand All-rounder Daryl Mitchell Ruled Out For 1st Match Against Australia

2022ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೂಪರ್ 12 ಪಂದ್ಯದಿಂದ ನ್ಯೂಜಿಲೆಂಡ್‌ನ ಪ್ರಮುಖ ಆಲ್‌ರೌಂಡರ್ ಡೇರಿಲ್ ಮಿಚೆಲ್ ಹೊರಗುಳಿದಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಖಚಿತಪಡಿಸಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಡೇರಿಲ್ ಮಿಚೆಲ್, ಇದೀಗ ಬೆರಳಿನ ಮುರಿತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ 2022: ಭಾರತೀಯ ಕ್ರಿಕೆಟ್ ಬೆಳವಣಿಗೆ ಶ್ಲಾಘಿಸಿದ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ಟಿ20 ವಿಶ್ವಕಪ್ 2022: ಭಾರತೀಯ ಕ್ರಿಕೆಟ್ ಬೆಳವಣಿಗೆ ಶ್ಲಾಘಿಸಿದ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್

ಕಿವೀಸ್ ತಂಡದ ಪ್ರಮುಖ ಆಲ್‌ರೌಂಡರ್ ಡೇರಿಲ್ ಮಿಚೆಲ್, ಟಿ20 ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಳಗೊಂಡಿರುವ ಟಿ20 ತ್ರಿಕೋನ ಸರಣಿಯಲ್ಲಿಯೂ ತಂಡದಿಂದ ಹೊರಗುಳಿದಿದ್ದರು. 31 ವರ್ಷದ ಡೇರಿಲ್ ಮಿಚೆಲ್, ಅಕ್ಟೋಬರ್ 17ರಂದು ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯದ ಭಾಗವಾಗಿದ್ದರು, ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ.

ಡೇರಿಲ್ ಮಿಚೆಲ್ ಅಲಭ್ಯತೆಯನ್ನು ಖಚಿತಪಡಿಸಿದ ವಿಲಿಯಮ್ಸನ್

ಡೇರಿಲ್ ಮಿಚೆಲ್ ಅಲಭ್ಯತೆಯನ್ನು ಖಚಿತಪಡಿಸಿದ ವಿಲಿಯಮ್ಸನ್

ಇನ್ನು ಶನಿವಾರ, ಅಕ್ಟೋಬರ್ 22ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಮುನ್ನ ನಾಯಕ ಕೇನ್ ವಿಲಿಯಮ್ಸನ್ ಅವರು ಡೇರಿಲ್ ಮಿಚೆಲ್ ಅಲಭ್ಯತೆಯನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ತಂಡದಲ್ಲಿರುವ ಇತರ ಆಟಗಾರರು ಫಿಟ್ ಆಗಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ ಎಂದು ಕೇನ್ ವಿಲಿಯಮ್ಸನ್ ಹೇಳಿದರು.

"ಡೇರಿಲ್ ಮಿಚೆಲ್ ಇನ್ನೂ ಲಭ್ಯವಿಲ್ಲ, ನಾವು ಅವರನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಮತ್ತು ಉಳಿದವರೆಲ್ಲರೂ ಸಾಕಷ್ಟು ಫಿಟ್ ಆಗಿದ್ದಾರೆ," ಎಂದು ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯ ವಿರುದ್ಧ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ ವರ್ಷ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿತ್ತು

ಕಳೆದ ವರ್ಷ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿತ್ತು

ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಟಿ20 ವಿಶ್ವಕಪ್ ನಡೆದಾಗ ನ್ಯೂಜಿಲೆಂಡ್ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿತ್ತು ಮತ್ತು ರನ್ನರ್ ಅಪ್ ಆಗಿ ಟೂರ್ನಿ ಮುಗಿಸಿತು. ಅವರ ಉತ್ತಮ ಪ್ರದರ್ಶನಕ್ಕಾಗಿ ಆಸ್ಟ್ರೇಲಿಯ ತಂಡವನ್ನು ಶ್ಲಾಘಿಸಿದ ಕೇನ್ ವಿಲಿಯಮ್ಸನ್, ಪಂದ್ಯಾವಳಿಯ ಆರಂಭದಲ್ಲಿ ವಿಜಯ ಗಳಿಸುವ ಮೂಲಕ ಟೂರ್ನಿಯಲ್ಲಿ ಆವೇಗವನ್ನು ಪಡೆಯುವ ಬಗ್ಗೆ ಮಾತನಾಡಿದರು.

"ಇದು ಉತ್ತಮ ಆಟವಾಗಿದೆ, ಆದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ ಮತ್ತು ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮವಾಗಿತ್ತು. ಶನಿವಾರ ನಡೆಯುವ ಈ ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯವಾಗಿದೆ. ಪ್ರತಿ ತಂಡವು ಗೆಲುವಿನಿಂದ ಪ್ರಾರಂಭಿಸಲು ಮತ್ತು ಸ್ವಲ್ಪ ವೇಗವನ್ನು ಪಡೆಯಲು ಬಯಸುತ್ತದೆ. ಆದ್ದರಿಂದ, ಮೊದಲು ಆಸ್ಟ್ರೇಲಿಯಾ ವಿರುದ್ಧ ಆಡಲು ಸಂತೋಷವಾಗಿದೆ," ಎಂದು ಕೇನ್ ವಿಲಿಯಮ್ಸನ್ ತಿಳಿಸಿದರು.

2009ರಿಂದ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ

2009ರಿಂದ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ

ನ್ಯೂಜಿಲೆಂಡ್ ತಂಡವು ಆಗಸ್ಟ್ 2009ರಿಂದ ಯಾವುದೇ ಸ್ವರೂಪದಲ್ಲಿ ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು, ಕಿವೀಸ್ ತನ್ನದೇ ದೇಶದಲ್ಲಿ ಎಲ್ಲಾ ಮೂರು ಟಿ20 ಪಂದ್ಯಗಳನ್ನು ಕಳೆದುಕೊಂಡಿದೆ. ಆದರೆ ಕೇನ್ ವಿಲಿಯಮ್ಸನ್ ಹಿಂದಿನ ಅಂಕಿ-ಸಂಖ್ಯೆಗಳ ಬಗ್ಗೆ ಹೆಚ್ಚು ಗೊಂದಲಕ್ಕೊಳಗಾಗಿಲ್ಲ.

"ಇಲ್ಲ, ನಾವು ಇಂದಿನ ಪಂದ್ಯಗಳ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಬಹಳಷ್ಟು ಪ್ರಬಲ ತಂಡವಾಗಿತ್ತು, ನಾವು ಮುಂದಿನ ಪಂದ್ಯಗಳಲ್ಲಿ ಎದುರಿಸಲು ಸಿದ್ಧರಿದ್ದೇವೆ," ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಿಳಿಸಿದರು.

Story first published: Friday, October 21, 2022, 12:20 [IST]
Other articles published on Oct 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X