ಟಿ20 ವಿಶ್ವಕಪ್: ಭಾರತವನ್ನು ಸೋಲಿಸಿದರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದ ಪಾಕ್ ನಟಿ

ಗುರುವಾರ, ನವೆಂಬರ್ 3ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ನಾಟಕೀಯ ಮಳೆ-ಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 33 ರನ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತನ್ನ ಟಿ20 ವಿಶ್ವಕಪ್ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಈ ಗೆಲುವಿನ ಅರ್ಥ ಮುಂದಿನ ಪಾಕಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಗೆದ್ದರೆ ಮತ್ತು ಇತರ ಫಲಿತಾಂಶಗಳು ಅವರಂದುಕೊಂಡಂತೆ ನಡೆದರೆ, ವಿಶ್ವಕಪ್ ಸೆಮಿಫೈನಲ್ ತಲುಪಬಹುದು. ಆದರೆ ಪಾಕಿಸ್ತಾನ ತಂಡವು ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳ ಸೋಲನ್ನು ಬಯಸುತ್ತಿದೆ.

ICC ತಿಂಗಳ ಆಟಗಾರ ಪ್ರಶಸ್ತಿಗೆ ಮೊದಲ ಬಾರಿ ನಾಮನಿರ್ದೇಶನಗೊಂಡ ಕೊಹ್ಲಿ; ಮಹಿಳೆಯರಲ್ಲಿ ಜೆಮಿಮಾ, ದೀಪ್ತಿICC ತಿಂಗಳ ಆಟಗಾರ ಪ್ರಶಸ್ತಿಗೆ ಮೊದಲ ಬಾರಿ ನಾಮನಿರ್ದೇಶನಗೊಂಡ ಕೊಹ್ಲಿ; ಮಹಿಳೆಯರಲ್ಲಿ ಜೆಮಿಮಾ, ದೀಪ್ತಿ

ಭಾರತ ತಂಡವು 2022ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅವರು ಆ ಪಂದ್ಯದಲ್ಲಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ನವೆಂಬರ್ 6ರಂದು (ಭಾನುವಾರ) ಪಂದ್ಯವಿದ್ದರೂ, ಈಗಿನಿಂದಲೇ ನಿರೀಕ್ಷೆ ಹೆಚ್ಚಿದೆ. ಏಕೆಂದರೆ ಆ ಪಂದ್ಯದ ಮೇಲೆ ಪಾಕಿಸ್ತಾನ ತಂಡದ ಸೆಮಿಫೈನಲ್ ಭವಿಷ್ಯ ನಿಂತಿದೆ.

ಜಿಂಬಾಬ್ವೆಯ ಹುಡುಗನನ್ನು ಮದುವೆಯಾಗುವುದಾಗಿ ನಟಿ ಟ್ವೀಟ್

ಇದೀಗ ಪಾಕಿಸ್ತಾನದ ನಟಿಯೊಬ್ಬರು ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಸುದ್ದಿಯಾಗಿದ್ದಾರೆ. ಅದರಲ್ಲಿ ಅವರು ಭಾನುವಾರದ ಪಂದ್ಯದಲ್ಲಿ, ಒಂದು ವೇಳೆ ಭಾರತವನ್ನು ಜಿಂಬಾಬ್ವೆ ಸೋಲಿಸಿದರೆ ಜಿಂಬಾಬ್ವೆಯ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ನಟಿಯ ಹೆಸರು ಸೆಹರ್ ಶಿನ್ವಾರಿ ಮತ್ತು ಅವರು ಕ್ರಿಕೆಟ್‌ನಲ್ಲಿ ಇಂತಹ ದೊಡ್ಡ ಹೇಳಿಕೆಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ.

ಈ ಟ್ವೀಟ್ ಮಾಡುವ ವಿಷಯ ಏನೆಂದರೆ, ಪಾಕಿಸ್ತಾನ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದರೆ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದಾರೆ. ಮುಂದಿನ ಪಂದ್ಯ ಬಾಂಗ್ಲಾದೇಶ ವಿರುದ್ಧ ಇದೆ.

ಬಾಂಗ್ಲಾದೇಶ ವಿರುದ್ಧ ಪಾಕ್ ಗೆಲ್ಲುವ ಸಾಧ್ಯತೆ

ಬಾಂಗ್ಲಾದೇಶ ವಿರುದ್ಧ ಪಾಕ್ ಗೆಲ್ಲುವ ಸಾಧ್ಯತೆ

ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಸಾಧ್ಯತೆಯೂ ದಟ್ಟವಾಗಿದೆ ಮತ್ತು ಆ ಅವಕಾಶವನ್ನು ಹೊಂದಿದ್ದಾರೆ. ಮುಂದಿನ ಪಂದ್ಯ ಗೆದ್ದರೆ ಅಂಕ ಮತ್ತು ನೆಟ್‌ ರನ್‌ರೇಟ್ ಕೂಡ ಉತ್ತಮವಾಗುತ್ತದೆ. ದಕ್ಷಿಣ ಆಫ್ರಿಕಾ ತಂಡ ಗುರುವಾರ ಪಾಕಿಸ್ತಾನ ವಿರುದ್ಧ ಸೋತರೂ ಅರ್ಹತೆ ಪಡೆಯಬಹುದು.

ನೆದರ್ಲ್ಯಾಂಡ್ಸ್ ವಿರುದ್ಧದ ದಕ್ಷಿಣ ಆಫ್ರಿಕಾ ಪಂದ್ಯ ಮಳೆಯಿಂದ ರದ್ದಾದರೂ, ಪಂದ್ಯದ ಒಂದು ಅಂಕವು ಅವರನ್ನು 6 ಅಂಕಗಳಿಗೆ ಕೊಂಡೊಯ್ಯುತ್ತದೆ. ಆ ಸಂದರ್ಭದಲ್ಲಿ ಭಾರತವನ್ನು ಹೊರತುಪಡಿಸಿ ಯಾವುದೇ ತಂಡವು 6 ಅಂಕಗಳಿಗಿಂತ ಹೆಚ್ಚು ನೆಗೆಯುವುದಿಲ್ಲ ಮತ್ತು ನೆಟ್‌ ರನ್‌ರೇಟ್ ಇತರ ಸೆಮಿಫೈನಲಿಸ್ಟ್ ತಂಡವನ್ನು ನಿರ್ಧರಿಸುತ್ತದೆ.

ಭಾರತ ಇದುವರೆಗೆ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದೆ

ಭಾರತ ಇದುವರೆಗೆ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದೆ

ಭಾರತ ಇದುವರೆಗೆ ಉತ್ತಮ ಪಂದ್ಯಾವಳಿಯನ್ನು ಹೊಂದಿದ್ದು, ಇದುವರೆಗೆ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿದೆ. ಅವರ ಏಕೈಕ ಸೋಲು ದಕ್ಷಿಣ ಆಫ್ರಿಕಾ ವಿರುದ್ಧ ಬಂದಿದೆ. ಆದರೆ ಭಾರತ ತಮ್ಮದೇ ಶೈಲಿಯಲ್ಲಿ ಪುಟಿದೇಳುವ ಮೂಲಕ ಬಾಂಗ್ಲಾದೇಶವನ್ನು 5 ರನ್‌ಗಳಿಂದ ಸೋಲಿಸಿದರು ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಬಲಪಡಿಸಿದರು.

ಈ ವಿಶ್ವಕಪ್‌ನಲ್ಲಿ ಭಾರತದ ಮುಖ್ಯ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದೀಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಒಬ್ಬರಾಗಿದ್ದಾರೆ. ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ ಮತ್ತು ಜಿಂಬಾಬ್ವೆ ವಿರುದ್ಧ ತಂಡವನ್ನು ಗೆಲ್ಲಿಸಲು ಇದೇ ಫಾರ್ಮ್ ಮುಂದುವರೆಸಲು ಎದುರು ನೋಡುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, November 3, 2022, 20:05 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X