ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ಸಚಿನ್ ಮಾತ್ರವಲ್ಲ, ಕೋಚ್ ದ್ರಾವಿಡ್ ದಾಖಲೆಯನ್ನೂ ಪುಡಿಪುಡಿ ಮಾಡಿದ ವಿರಾಟ್ ಕೊಹ್ಲಿ

T20 World Cup 2022: Virat Kohli Surpasses Rahul Dravids Big Record In International Cricket

ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಕೊನೆಯ ಮೂರು ಓವರ್‌ಗಳನ್ನು ದೇಶದ ಪ್ರಮುಖ ರಾಜಕಾರಣಿಗಳಿಂದ ಹಿಡಿದು ಉದ್ಯಮಿಗಳವರೆಗೆ ಮತ್ತು ಭಾರತದ ಕೋಟ್ಯಂತರ ಜನಸಾಮಾನ್ಯರು ತಮ್ಮ ಉಸಿರು ಬಿಗಿ ಹಿಡಿದು ಪಂದ್ಯ ವೀಕ್ಷಿಸಿದರು.

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ರೋಚಕ ಸಾಧಿಸಿತು ಮತ್ತು ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿತು.

ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!

ವಿರಾಟ್ ಕೊಹ್ಲಿ ಭಾನುವಾರ ಭಾರತದ ಲೆಜೆಂಡ್ ಬ್ಯಾಟ್ಸ್‌ಮನ್ ಹಾಗೂ ಹಾಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ 24 ಅರ್ಧಶತಕ ಗಳಿಸುವ ಮೂಲಕ, ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 23 ಅರ್ಧಶತಕಗಳ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ 24 ಅರ್ಧಶತಕ

ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ 24 ಅರ್ಧಶತಕ

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಹೆಗ್ಗುರುತನ್ನು ಸಾಧಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಗಳಿಸುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮರು ಪರಿಚಯಿಸಿದರು. ಅವರ ಅದ್ಭುತ ಪ್ರದರ್ಶನವು ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸ್ಮರಣೀಯ ಗೆಲುವು ಸಾಧಿಸಲು ಸಹಾಯ ಮಾಡಿತು.

ವಿರಾಟ್ ಕೊಹ್ಲಿ 528 ಪಂದ್ಯಗಳಲ್ಲಿ 24,212 ರನ್

ವಿರಾಟ್ ಕೊಹ್ಲಿ 528 ಪಂದ್ಯಗಳಲ್ಲಿ 24,212 ರನ್

ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದು, 528 ಪಂದ್ಯಗಳಲ್ಲಿ 53.80ರ ಸರಾಸರಿಯಲ್ಲಿ 24,212 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟ್‌ನಿಂದ 71 ಶತಕಗಳು ಮತ್ತು 126 ಅರ್ಧ ಶತಕಗಳು ಸಿಡಿದಿವೆ, ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ 254* ಅತ್ಯುತ್ತಮ ಸ್ಕೋರ್ ಆಗಿದೆ.

ಮತ್ತೊಂದೆಡೆ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇದೀಗ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. 509 ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ 45.41 ಸರಾಸರಿಯಲ್ಲಿ 24,208 ರನ್ ಗಳಿಸಿದ್ದಾರೆ. 48 ಶತಕಗಳು ಮತ್ತು 146 ಅರ್ಧ ಶತಕಗಳನ್ನು ಬ್ಯಾಟಿಂಗ್ ಶ್ರೇಷ್ಠ ಗಳಿಸಿದ್ದಾರೆ, ಅತ್ಯುತ್ತಮ ವೈಯಕ್ತಿಕ ಸ್ಕೋರ್ 270 ಆಗಿದೆ.

ಭಾರತ ಎರಡು ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನ

ಭಾರತ ಎರಡು ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (34,357), ಶ್ರೀಲಂಕಾದ ಕೀಪರ್-ಬ್ಯಾಟ್ಸ್‌ಮನ್ ಕುಮಾರ ಸಂಗಕರ (28,016), ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ ರಿಕಿ ಪಾಂಟಿಂಗ್ (27,483), ಶ್ರೀಲಂಕಾದ ಲೆಜೆಂಡ್ ಮಹೇಲಾ ಜಯವರ್ಧನೆ (25,957) ಮತ್ತು ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟರ್ ಜಾಕ್ವೆಸ್ ಕಾಲಿಸ್ (25,534) ರನ್ ಗಳಿಸಿದ್ದಾರೆ.

ಇನ್ನು ಟಿ20 ವಿಶ್ವಕಪ್ ಸೂಪರ್ 12ನ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಬರುವುದಾದರೆ, ಈ ಗೆಲುವಿನೊಂದಿಗೆ ಭಾರತ ಎರಡು ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತನ್ನ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಕಲೆ ಹಾಕಿತು. ಶಾನ್ ಮಸೂದ್ (52) ಮತ್ತು ಇಫ್ತಿಕರ್ ಅಹ್ಮದ್ (51) ಅರ್ಧಶತಕಗಳನ್ನು ಗಳಿಸಿದರು. ಇನ್ನೊಂದೆಡೆ ಪಾಕಿಸ್ತಾನ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಮಸೂದ್ ಮತ್ತು ಅಹ್ಮದ್ ನಡುವಿನ 76 ರನ್‌ಗಳ ಜೊತೆಯಾಟವು ಪಾಕಿಸ್ತಾನದ ದೊಡ್ಡ ಜೊತೆಯಾಟವಾಗಿತ್ತು.

ಬೌಲಿಂಗ್‌ನಲ್ಲಿ ಭಾರತದ ಪರ ಮಿಂಚಿದ ಪಾಂಡ್ಯ, ಅರ್ಶ್‌ದೀಪ್

ಬೌಲಿಂಗ್‌ನಲ್ಲಿ ಭಾರತದ ಪರ ಮಿಂಚಿದ ಪಾಂಡ್ಯ, ಅರ್ಶ್‌ದೀಪ್

ಹಾರ್ದಿಕ್ ಪಾಂಡ್ಯ (3/30) ಮತ್ತು ಅರ್ಶ್‌ದೀಪ್ ಸಿಂಗ್ (3/32) ಬೌಲಿಂಗ್‌ನಲ್ಲಿ ಭಾರತದ ಪರ ಮಿಂಚಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.

160 ರನ್ ಬೆನ್ನಟ್ಟಿದ ಭಾರತ ಏಳು ಓವರ್‌ಗಳಲ್ಲಿ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿತ್ತು. ಅಲ್ಲಿಂದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 113 ರನ್‌ಗಳ ಜೊತೆಯಾಟದೊಂದಿಗೆ ಪಂದ್ಯವನ್ನು ಭಾರತದ ತೆಕ್ಕೆಗೆ ತೆಗೆದುಕೊಂಡರು. ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಔಟಾದರು, ಆದರೆ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಗಳಿಸಿ ಭಾರತ ತಂಡ ನಾಲ್ಕು ವಿಕೆಟ್‌ಗಳ ಗೆಲುವಿಗೆ ಕಾರಣರಾದರು.

Story first published: Tuesday, October 25, 2022, 5:35 [IST]
Other articles published on Oct 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X