ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಪಾಕಿಸ್ತಾನ vs ಅಫ್ಘಾನಿಸ್ತಾನ, ಟಾಸ್ ರಿಪೋರ್ಟ್, Live ಸ್ಕೋರ್

T20 world cup: 24th Match, Afghanistan vs Pakistan, Live score and Playing XI

ಟಿ20 ವಿಶ್ವಕಪ್‌ನಲ್ಲಿ ಇಂದು ಮತ್ತೊಂದು ಪ್ರಮುಖ ಪಂದ್ಯ ನಡೆಯುತ್ತಿದ್ದು ಇದರಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪಾಕಿಸ್ತಾನ ತಂಡ ಬೌಲಿಂಗ್ ದಾಳಿಗೆ ಇಳಿದಿದೆ

ಎರಡು ಪಂದ್ಯಗಳನ್ನು ಗೆದ್ದು ಅತ್ಯುತ್ಸಾಹದಲ್ಲಿರುವ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಮತ್ತೊಂದು ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳಂತಾ ಬಲಿಷ್ಠ ಎದುರಾಳಿಗಳನ್ನು ಮಣಿಸಿರುವ ಪಾಕಿಸ್ತಾನ ಸದ್ಯ ಟೂರ್ನಿಯಲ್ಲಿ ಫೇವರೀಟ್ ತಂಡ ಎನಿಸಿದೆ. ಆದರೆ ಅಫ್ಘಾನಿಸ್ತಾನ ತಂಡ ತನ್ನ ವಿಶ್ವದರ್ಜೆಯ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗೆ ಸಂಕಷ್ಟ ನೀಡುವ ಉತ್ಸಾಹದಲ್ಲಿದೆ.

ಇನ್ನು ಅಫ್ಘಾನಿಸ್ತಾನದ ಸ್ಪಿನ್ ಬೌಲಿಂಗ್ ವಿಭಾಗ ಎಷ್ಟು ಅಪಾಯಕಾರಿ ಎಂಬುದು ಪಾಕಿಸ್ತಾನ ತಂಡಕ್ಕೂ ಚೆನ್ನಾಗಿ ಅರಿವಿದೆ. ರಶೀದ್ ಖಾನ್ ತಂಡದಲ್ಲಿರುವುದು ಅಫ್ಘಾನಿಸ್ತಾನ ತಂಡವನ್ನು ಟಿ20 ಮಾದರಿಯಲ್ಲಿ ಅಪಾಯಕಾರಿ ತಂಡ ಎನಿಸುವಂತೆ ಮಾಡಿದೆ. ಅಲ್ಲದೆ ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ. ರಶೀದ್ ಖಾನ್ ಇತ್ತೀಚೆಗೆ ಅಂತ್ಯವಾದ ಐಪಿಎಲ್‌ನಲ್ಲಿಯೂ ಅತ್ಯಂತ ಎಕನಾಮಿಕಲ್ ಬೌಲರ್ ಎನಿಸಿದ್ದಾರೆ. ನಬಿ ಹಾಗೂ ಮುಜೀಬ್ ಉರ್ ರಹ್ಮಾನ್ ಕೂಡ ಯುಎಇ ಅಂಗಳದಲ್ಲಿ ಆಡಿದ ಉತ್ತಮ ಅನುಭವ ಹೊಂದಿದ್ದಾರೆ.

Live ಸ್ಕೋರ್ ಕಾರ್ಡ್ ಹೀಗಿದೆ:

1
51687

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಲೆಗ್‌ಸ್ಪಿನ್ ದಾಳಿಯ ಮೂಲಕ ಅತ್ಯಂತ ಪರಿಣಾಮಕಾರಿ ಎನಿಸಿದ್ದಾರೆ. ಉತ್ತಮ ವೇಗವೂ ರಶೀದ್ ಬೌಲಿಂಗ್‌ನಲ್ಲಿದ್ದು ಅದ್ಭುತವಾದ ನಿಯಂತ್ರಣ ಹೊಂದಿದ್ದಾರೆ. ಅಲ್ಲದೆ ಗೂಗ್ಲಿ ಎಸೆತಗಳ ಮೂಲಕ ಎದುರಾಳಿಯನ್ನು ಸುಲಭವಾಗಿ ಕೆಡವುವ ಸಾಮರ್ಥ್ಯ ಹೊಂದಿದ್ದಾರೆ.

ಈ ರೋಚಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ತಾನ ಭರ್ಜರಿಯಾಗಿ ಗೆದ್ದು ಬೀಗಿದೆ. ರೋಚಕ ಹಂತಕ್ಕೆ ತಲುಪಿದ ಪಂದ್ಯದ 19ನೇ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಇನ್ನೂ ಒಂದು ಓವರ್ ಉಳಿದಿರುವಂತೆಯೇ ಪಾಕಿಸ್ತಾನದ ಗೆಲುವನ್ನು ಸಾರಿದರು. ಅಫ್ಘಾನಿಸ್ತಾನ ಅದ್ಭುತ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಕೂಡ ಆರಂಭಿಕ ಆಘಾತವನ್ನು ಅನುಭವಿಸಿತು. 12 ರನ್‌ಗಳಿದ್ದಾಗ ಮೊಹಮ್ಮದ್ ರಿಜ್ವಾನ್ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಬಾಬರ್ ಅಜಂ ಹಾಗೂ ಫಕರ್ ಜಮಾನ್ 63 ರನ್‌ಗಳ ಜೊತೆಯಾಟವನ್ನು ನೀಡಿದರು. ಅದಾದ ನಂತರ 97 ರನ್‌ಗಳಿಸಿದ್ದಾಗ ಮೊಹಮ್ಮದ್ ಹಫೀಜ್ ವಿಕೆಟ್ ಕಳೆದುಕೊಂಡರು. ನಂತರ ಅರ್ಥ ಶತಕ ಗಳಿಸಿದ್ದ ನಾಯಕ ಬಾಬರ್ ಅಜಂ ಕೂಡ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅನುಭವಿ ಶೋಯೆಬ್ ಮಲಿಕ್ ನವೀನ್ ಉಲ್ ಹಕ್ ಎಸೆತಕ್ಕೆ ಔಟಾದರು.

ಈ ಮೂಲಕ ಪಾಕಿಸ್ತಾನ 124 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಅಂತಿಮ 12 ಎಸೆತಗಳಲ್ಲಿ ಅಫ್ಘಾನಿಸ್ತಾನ ತಂಡಕ್ಕೆ 24 ರನ್‌ಗಳ ಅವಶ್ಯಕತೆಯಿತ್ತು. ಕರೀಮ್ ಜನತ್ ಎಸೆದ ಈ 19ನೇ ಓವರ್‌ಅನ್ನು ಆಸಿಫ್ ಅಲಿ ಎದುರಿಸಿದರು. ಈ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವನ್ನು ತಂದಿತ್ತರು. ರೋಚಕ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಪಾಕಿಸ್ತಾನ ಪ್ಲೇಯಿಂಗ್ XI : ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

ಅಫ್ಘಾನಿಸ್ತಾನ ಪ್ಲೇಯಿಂಗ್ XI : ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಸ್ಗರ್ ಅಫ್ಘಾನ್, ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಮ್ ಜನತ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹ್ಮಾನ್

Story first published: Friday, October 29, 2021, 23:37 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X