ಟಿ20 ವಿಶ್ವಕಪ್ 2021: ಶ್ರೀಲಂಕಾ vs ವೆಸ್ಟ್ ಇಂಡೀಸ್, ಟಾಸ್ ರಿಪೋರ್ಟ್, Live ಸ್ಕೋರ್

ಟಿ20 ವಿಶ್ವಕಪ್‌ನ 35ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡಿಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಶ್ರೀಲಂಕಾ ತಂಡ ಎದುರಾಳಿಗೆ ಗುರಿ ನಿಗದಿಪಡಿಸುವ ಸವಾಲು ಸ್ವೀಕರಿಸಿದೆ.

ಅರ್ಹತಾ ಸುತ್ತಿನಲ್ಲಿ ಆಡಿದ ಬಳಿಕ ಪ್ರಮುಖ ಸುತ್ತಿಗೆ ಅರ್ಹತೆ ಸಂಪಾದಿಸಿದ ಶ್ರೀಲಂಕಾ ಸೂಪರ್ 12 ಹಂತದಲ್ಲಿ ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ಹೀಗಾಗಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದನ್ನು ಮಾತ್ರವೇ ಗೆದ್ದಿರುವ ಶ್ರೀಲಂಕಾ ತಂಡ ಸೆಮಿ ಫೈನಲ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡ ಹಾಲಿ ಚಾಂಪಿಯನ್ ಆಗಿದ್ದರೂ ಅದಕ್ಕೆ ತಕ್ಕನಾದ ಪ್ರದರ್ಶನ ನೀಡಲು ವಿಫಲವಾಗಿದೆ.

ಸ್ಪೋಟಕ ಆಟಗಾರರ ದಂಡೇ ಇದ್ದರೂ ವಿಂಡೀಸ್ ಆಡಿದ ಮೂರು ಪಂದ್ಯಗಳ ಪೈಕಿ ಗೆದ್ದಿರುವುದು ಒಂದರಲ್ಲಿ ಮಾತ್ರ. ಈಗಾಗಲೇ ನೆಟ್ ರನ್‌ರೇಟ್‌ನಲ್ಲಿಯೂ ಭಾರೀ ಹಿಂದಿರುವ ವಿಂಡೀಸ್ ಸೆಮಿಫೈನಲ್‌ಗೆ ಅರ್ಹತೆ ಸಂಪಾದಿಸುವುದು ಕಷ್ಟ ಸಾಧ್ಯ. ಹಾಗಿದ್ದರೂ ಲೆಕ್ಕಾಚಾರದ ಪ್ರಕಾರ ವೆಸ್ಟ್ ಇಂಡೀಸ್‌ಗೆ ಇನ್ನೂ ಅವಕಾಶವಿರುವ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಿಂದ ಗೆಲ್ಲುವ ಲೆಕ್ಕಾಚಾರದಲ್ಲಿ ತೊಡಗಿದೆ ವೆಸ್ಟ್ ಇಂಡೀಸ್ ತಂಡ.

Live ಸ್ಕೋರ್‌ಕಾರ್ಡ್ ಹೀಗಿದೆ:

1
51698

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೋ
ಬೆಂಚ್: ಲಹಿರು ಕುಮಾರ, ಅಕಿಲ ದನಂಜಯ, ಧನಂಜಯ ಡಿ ಸಿಲ್ವಾ, ದಿನೇಶ್ ಚಂಡಿಮಲ್

ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರಿಸ್ ಗೇಲ್, ಎವಿನ್ ಲೆವಿಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ರವಿ ರಾಂಪಾಲ್
ಬೆಂಚ್: ಓಶೇನ್ ಥಾಮಸ್, ಹೇಡನ್ ವಾಲ್ಷ್, ಆಂಡ್ರೆ ಫ್ಲೆಚರ್, ಲೆಂಡ್ಲ್ ಸಿಮನ್ಸ್

Team Indiaಗೆ ಸಿಕ್ಕೇಬಿಡ್ತು ಸೆಮಿಫೈನಲ್ ಗೆ ಎಂಟ್ರಿಯಾಗೋ ಅವಕಾಶ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Thursday, November 4, 2021, 19:48 [IST]
Other articles published on Nov 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X