ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿಲ್ಲ ಈ ಐವರು ದಿಗ್ಗಜ ಆಟಗಾರರು

ಐಪಿಎಲ್ 14ನೇ ಆವೃತ್ತಿ ಈಗ ಅಂತಿಮ ಹಂತಕ್ಕೆ ಬರುತ್ತಿದ್ದು ಅದಾದ ಬಳಿಕ ಟಿ20 ವಿಶ್ವಕಪ್ ಆರಂಭವಾಗಲಿದೆ. 16 ತಂಡಗಳು ಭಾಗಿಯಾಗಲಿರುವ ಈ ಟಿ20 ವಿಶ್ವಕಪ್ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಯಾಗಲಿದೆ. ಅಕ್ಟೋಬರ್ 17ರಿಂದ ಈ ವಿಶ್ವಕಪ್ ಆರಂಭವಾಗಲಿದ್ದು ನವೆಂಬರ್ 14ರಂದು ಈ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಈ ಮೂಲಕ ಟಿ20 ಮಾದರಿಯ ಚಾಂಪಿಯನ್ ಯಾರಾಗಲಿದ್ದಾರೆ ಎಂಬುದು ಅಂದು ಅಧಿಕೃತವಾಗಲಿದೆ.

ಈ ಟಿ20 ವಿಶ್ವಕಪ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ರಶೀದ್ ಖಾನ್, ಕಿರಾನ್ ಪೊಲಾರ್ಡ್, ಇಯಾನ್ ಮಾರ್ಗನ್, ಕೇನ್ ವಿಲಿಯಮ್ಸನ್, ಬಾಬರ್ ಅಜಮ್‌ರಂತಾ ಪ್ರಮುಖ ಆಟಗಾರರು ಭಾಗಿಯಾಗಲಿದ್ದಾರೆ. ಈ ಮೂಲಕ ಎಲ್ಲಾ ತಂಡಗಳು ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದು ಜಿದ್ದಾಜಿದ್ದಿನ ಕದನದಲ್ಲಿ ಗೆದ್ದು ಬೀಗಲು ಹಾತೊರೆಯುತ್ತಿವೆ. ಅಭಿಮಾನಿಗಳು ಕೂಡ ಈ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳುವ ಜೊತೆಗೆ ರೋಚಕ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?

ಆದರೆ ಟಿ20 ವಿಶ್ವಕಪ್‌ 2007ರಲ್ಲಿ ಆರಂಭವಾದ ನಂತರ ಈ ಹಿಂದಿನ 2016ರ ವಿಶ್ವಕಪ್‌ವರೆಗೆ ಪ್ರತಿ ಟಿ20 ವಿಶ್ವಕಪ್ ಆವೃತ್ತಿಯಲ್ಲಿಯೂ ಸೂಪರ್ ಸ್ಟಾರ್‌ಗಳಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಐದು ಶ್ರೇಷ್ಠ ಆಟಗಾರರು ಈ ಬಾರಿಯ ಟಿ29 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿಲ್ಲ. ಆ ಐದು ಶ್ರೇಷ್ಠ ಆಟಗಾರರು ಯಾರು? ಮುಂದೆ ಓದಿ..

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯ ಹೀರೋ ಭಾರತ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಯುವರಾಜ್ ಸಿಂಗ್ 2021ರ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಭಾರತದ ಪರವಾಗಿ ಈವರೆಗೆ 31 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 593 ರನ್‌ಗಳಿಸಿರುವ ಅವರು 12 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಒಂದು ಓವರ್‌ನ ಎಲ್ಲಾ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದಾರೆ. ಈ ಬಾರಿಯ ವಿರ್ಶವಕಪ್‌ನಲ್ಲಿ ಯಾರಾದರೂ ಆಟಗಾರ ಈ ಸಾಧನೆಯನ್ನು ಮಾಡಲಿದ್ದಾರಾ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಎಂಎಸ್ ಧೋನಿ

ಎಂಎಸ್ ಧೋನಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 2007ರ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದು ಬೋಗಿತ್ತು. ಅದಾದ ಬಳಿಕ ಭಾರತ ಚುಟುಕು ಮಾದರಿಯಲ್ಲಿ ಈ ಸಾಧನೆ ಮಾಡಲು ಈವರೆಗೆ ಸಾಧ್ಯವಾಗಿಲ್ಲ. 2016ರ ಟಿ20 ವಿಶ್ವಕಪ್‌ನ ವರೆಗೂ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಎಂಎಸ್ ಧೋನಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಎಂಎಸ್ ಧೋನಿ ತಂಡದ ಮೆಂಟರ್ ಆಗಿ ಭಾರತದ ತಂಡದ ಜೊತೆ ಇರಲಿದ್ದಾರೆ.

ಶಾಹಿದ್ ಅಫ್ರಿದಿ

ಶಾಹಿದ್ ಅಫ್ರಿದಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ತನ್ನ ರಾಷ್ಟ್ರದ ಪರವಾಗಿ ಟಿ20 ವಿಶ್ವಕಪ್‌ನಲ್ಲಿ ಈವರೆಗೆ 34 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 18.83ರ ಸರಾಸರಿಯಲ್ಲಿ ಅಫ್ರಿದಿ 546 ರನ್‌ಗಳಿಸಿದ್ದಾರೆ. ಅಲ್ಲದೆ 23.26r ಸರಾಸರಿಯಲ್ಲಿ 39 ವಿಕೆಟ್ ಪಡೆದು ಮಿಂಚಿದ್ದಾರೆ. ಶಾಹಿದ್ ಅಫ್ರಿದಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಿಂದಲೂ ನಿವೃತಗ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲ ಲೀಗ್ ಕ್ರಿಕೆಟ್‌ನಲ್ಲಿ ಅಫ್ರಿದಿ ಸಕ್ರಿಯವಾಗಿದ್ದಾರೆ.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಕೇವಲ ಲೀಗ್ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ಆಟಗಾರ. ಈ ಬಲಗೈ ಸ್ಪೋಟಕ ಆಟಗಾರ ಕೂಡ ಟಿ20 ವಿಶ್ವಕಪ್‌ನ ಈ ಹಿಂದಿನ ಎಲ್ಲಾ ಆವೃತ್ತಿಗಳಲ್ಲಿಯೂ ಪಾಲ್ಗೊಂಡಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ಗೂ ಮುನ್ನ ನಿವೃತ್ತಿಯನ್ನು ವಾಪಾಸ್ ಪಡೆದು ಎಬಿ ಡಿವಿಲಿಯರ್ಸ್ ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಅದಕ್ಕೆ ಪೂರಕವಾಗಿ ಸಾಕಷ್ಟು ಬೆಳವಣಿಗೆಗಳು ಕೂಡ ನಡೆದಿತ್ತು. ಒಂದು ಹಂತದಲ್ಲಿ ಸ್ವತಃ ಡಿವಿಲಿಯರ್ಸ್ ಕೂಡ ಈ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದರು. ಆದರೆ ನಂತರ ನಿವೃತ್ತಿ ವಾಪಸ್ ಪಡೆಯದಿರಲು ನಿರ್ಧರಿಸಿದ್ದಾರೆ.

ತಿಲಕರತ್ನೆ ದಿಲ್ಶನ್

ತಿಲಕರತ್ನೆ ದಿಲ್ಶನ್

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಶ್ರೀಲಂಕಾದ ಮಾಜಿ ಆಟಗಾರ ದಿಲ್ಶನ್ ಈ ಹಿಂದಿನ ಎಲ್ಲಾ ಟಿ20 ವಿಶ್ವಕಪ್‌ನಲ್ಲಿಯೂ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದು ಶ್ರೀಲಂಕಾ ತಂಡದ ಪ್ರಮುಖ ಸದಸ್ಯನಾಗಿದ್ದರು ದಿಲ್ಶನ್. ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ಪರವಾಗಿ 35 ಪಂದ್ಯಗಳನ್ನು ಆಡಿರುವ ದಿಲ್ಶನ್ 897 ರನ್‌ಗಳನ್ನು ಗಳಿಸಿದ್ದಾರೆ. ಅಜೇಯ 96 ರನ್ ದಿಲ್ಶನ್ ಸಿಡಿಸಿದ ಹೈಯೆಸ್ಟ್ ಸ್ಕೋರ್. ಸದ್ಯ ಇವರು ಕೂಡ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 8, 2021, 17:51 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X