ಟಿ20 ವಿಶ್ವಕಪ್‌ಗೆ ಶೇ. 80-90ರಷ್ಟು ತಂಡದ ಸಂಯೋಜನೆ ಸಿದ್ಧ; ರೋಹಿತ್ ಶರ್ಮಾ ಸುಳಿವು

ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ 80ರಿಂದ 90 ಪ್ರತಿಶತದಷ್ಟು ಆಟಗಾರರು ಸಿದ್ಧರಾಗಿದ್ದಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಮೆನ್ ಇನ್ ಬ್ಲೂ ವಿಶ್ವಕಪ್‌ನ ಹಿಂದಿನ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗಿತ್ತು, ಆದರೆ ನಂತರದ ಸರಣಿಯನ್ನು ಸೋತಿಲ್ಲ.

IND vs ZIM: ಮೊದಲ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್‌ಗಿದೆ ಒಂದು ಸುವರ್ಣಾವಕಾಶ! IND vs ZIM: ಮೊದಲ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್‌ಗಿದೆ ಒಂದು ಸುವರ್ಣಾವಕಾಶ!

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸದ್ಯ ಮುಂಬರುವ 2022ರ ಏಷ್ಯಾ ಕಪ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಈ ಪ್ರತಿಷ್ಠಿತ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಆಗಸ್ಟ್ 27ರ ಶನಿವಾರದಂದು ಪ್ರಾರಂಭವಾಗಲಿದೆ. ಭಾರತದ ಏಷ್ಯಾ ಕಪ್ ಅಭಿಯಾನವು ಭಾನುವಾರ, ಆಗಸ್ಟ್ 28ರಂದು ದುಬೈನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗುತ್ತದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ದ್ವಿಪಕ್ಷೀಯ ಸರಣಿ

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ದ್ವಿಪಕ್ಷೀಯ ಸರಣಿ

ಟಿ20 ವಿಶ್ವಕಪ್‌ಗೆ ಸರಿಯಾದ ತಂಡದ ಸಂಯೋಜನೆಯನ್ನು ಕಂಡುಹಿಡಿಯಲು ಏಷ್ಯಾ ಕಪ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಒಂದೆರಡು ದ್ವಿಪಕ್ಷೀಯ ಸರಣಿಗಳು ಸಾಕು ಎಂದು ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ ವಿವರಿಸಿದ್ದಾರೆ.

"ಟಿ20 ವಿಶ್ವಕಪ್‌ಗೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದ್ದು, ಅದಕ್ಕೂ ಮೊದಲು ನಾವು ಏಷ್ಯಾ ಕಪ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ತವರಿನ ಸರಣಿಗಳನ್ನು ಹೊಂದಿದ್ದೇವೆ. ಆದ್ದರಿಂದ, ನಮ್ಮ ತಂಡವು ಹೆಚ್ಚು ಅಥವಾ ಕಡಿಮೆ 80-90 ಪ್ರತಿಶತದಷ್ಟು ಆಟಗಾರರನ್ನು ಈಗಾಗಲೇ ಹೊಂದಿಸಲಾಗಿದೆ. ಆದರೆ, ಪರಿಸ್ಥಿತಿಗಳನ್ನು ಅವಲಂಬಿಸಿ ಖಂಡಿತವಾಗಿಯೂ ಮೂರು-ನಾಲ್ಕು ಬದಲಾವಣೆಗಳಾಗಬಹುದು," ಟೀಂ ಇಂಟಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದರು.

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಸಿದ್ಧಪಡಿಸಲಾಗುತ್ತಿದೆ

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಸಿದ್ಧಪಡಿಸಲಾಗುತ್ತಿದೆ

"ಸದ್ಯ ಯುಎಇಯಲ್ಲಿ ಏಷ್ಯಾ ಕಪ್ ಆಡುತ್ತೇವೆ ಮತ್ತು ತವರಿನಲ್ಲಿ ನಾವು ದ್ವಿಪಕ್ಷೀಯ ಸರಣಿ ಆಡಲಿದ್ದೇವೆ. ಆದ್ದರಿಂದ ಆಸ್ಟ್ರೇಲಿಯಾದ ಪರಿಸ್ಥಿತಿಗಳು ವಿಭಿನ್ನವಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ನಮ್ಮ ತಂಡಕ್ಕೆ ಯಾವುದು ಮತ್ತು ಯಾರು ಸರಿಹೊಂದುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ," ಎಂದು ರೋಹಿತ್ ಶರ್ಮಾ ತಿಳಿಸಿದರು.

ಇದಲ್ಲದೆ, ಉತ್ತಮ ಬೆಂಚ್ ಸ್ಟ್ರೆಂತ್ ರಚಿಸುವ ಅಗತ್ಯತೆಯ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದರು. "ಭಾರತವು ಸ್ವಂತವಾಗಿ ಪಂದ್ಯಗಳನ್ನು ಗೆಲ್ಲುವ ಹಲವಾರು ಆಟಗಾರರನ್ನು ಹೊಂದಬೇಕೆಂದು ನಾನು ಬಯಸುತ್ತೇನೆ," ಎಂದು ರೋಹಿತ್ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯಾದ T20 ವಿಶ್ವಕಪ್ ಗೆ ರೊಹಿತ್-ರಾಹುಲ್ ಹೊಸ ತಂಡ ರೆಡಿಯಾಗ್ತಿದೆ | *Cricket | Oneindia Kannada
ಬುಮ್ರಾ, ಶಮಿ ಶಾಶ್ವತವಾಗಿ ಭಾರತೀಯ ತಂಡದೊಂದಿಗೆ ಇರುವುದಿಲ್ಲ

ಬುಮ್ರಾ, ಶಮಿ ಶಾಶ್ವತವಾಗಿ ಭಾರತೀಯ ತಂಡದೊಂದಿಗೆ ಇರುವುದಿಲ್ಲ

"ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇತರೆ ಎಲ್ಲ ವ್ಯಕ್ತಿಗಳು ಶಾಶ್ವತವಾಗಿ ಭಾರತೀಯ ತಂಡದೊಂದಿಗೆ ಇರುವುದಿಲ್ಲ. ಆದ್ದರಿಂದ ನೀವು ಇತರ ಹುಡುಗರನ್ನು ಸಿದ್ಧಪಡಿಸಲು ಪ್ರಯತ್ನಿಸಬೇಕು. ನಾನು ಮತ್ತು ಕೋಚ್ ರಾಹುಲ್ ಭಾಯ್ ನಾವು ನಮ್ಮ ಬೆಂಚ್ ಬಲವನ್ನು ಹೇಗೆ ರಚಿಸಲಿದ್ದೇವೆ ಎಂಬುದರ ಕುರಿತು ಮಾತನಾಡಿದ್ದೇವೆ. ನಾವು ಆಡುವ ಕ್ರಿಕೆಟ್ ಪ್ರಮಾಣ, ಗಾಯದ ಅಂಶಗಳು ಮತ್ತು ಎಲ್ಲವನ್ನೂ ಪರಿಗಣಿಸಿ ಬಹಳ ನಿರ್ಣಾಯಕವಾಗಿರುತ್ತದೆ," ಎಂದರು.

"ನಾವು ಎಂದಿಗೂ ಒಂದು ಅಥವಾ ಇಬ್ಬರು ವ್ಯಕ್ತಿಗಳನ್ನು ಅವಲಂಬಿಸಿರುವ ತಂಡವಾಗಲು ಬಯಸುವುದಿಲ್ಲ, ಪ್ರತಿಯೊಬ್ಬರೂ ಕೊಡುಗೆ ನೀಡುವ ಮತ್ತು ತಂಡವನ್ನು ಗೆಲ್ಲಲು ಸಹಾಯ ಮಾಡುವ ತಂಡವಾಗಲು ನಾವು ಬಯಸುತ್ತೇವೆ," ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟವಾಗಿ ಹೇಳಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 17, 2022, 23:40 [IST]
Other articles published on Aug 17, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X