ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಎರಡು ಅಭ್ಯಾಸ ಪಂದ್ಯ ಅಂತ್ಯ, ವಿರಾಟ್ ಕೊಹ್ಲಿಗೆ ತಲೆನೋವಾಗಿದೆ 3 ಸ್ಥಾನಗಳು!

T20 World Cup: After two warm-up matches, Indian skipper Virat Kohli is still unclear on 3 spots

ಟಿ20 ವಿಶ್ವಕಪ್‌ನಲ್ಲಿ ಭಾರತದ ಮೊದಲ ಕಾದಾಟದ ದಿನ ಸಮೀಪಿಸುತ್ತಾ ಬಂದಿದೆ. ಸೂಪರ್ 12 ಹಂತದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಿದ್ದು ಎರಡು ಪಂದ್ಯಗಳಲ್ಲಿಯೂ ಭರ್ಜರಿ ಪ್ರದರ್ಶನ ನೀಡಿ ಅದ್ಭುತವಾದ ಗೆಲುವು ಸಾಧಿಸಿದೆ.

ಟೀಮ್ ಇಂಡಿಯಾದ ಈ ಎರಡು ಅಭ್ಯಾಸ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಲ್ಲಾ ಆಟಗಾರರು ಕೂಡ ಫಾರ್ಮ್‌ನಲ್ಲಿರುವುದು ಈ ಎರಡು ಪಂದ್ಯದ ಪ್ರದರ್ಶನದಿಂದ ಖಚಿತವಾಗಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮೂರು ಸ್ಥಾನಗಳು ಹೆಚ್ಚು ತಲೆನೋವಾಗಿ ಕಾಡಲು ಆರಂಭಿಸಿದೆ. ಫಾರ್ಮ್‌ನಲ್ಲಿರುವ ಆಟಗಾರರಲ್ಲಿ ಹೊರಗಿಡುವುದು ಯಾರನ್ನು ಎಂಬುದು ಮ್ಯಾನೇಜ್‌ಮೆಂಟ್‌ಗೆ ಕಾಡುತ್ತಿರುವುದು ಸುಳ್ಳಲ್ಲ.

ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!ಟಿ20 ವಿಶ್ವಕಪ್: ಸೂಪರ್ 12 ಸುತ್ತಿಗೆ ಲಗ್ಗೆಯಿಟ್ಟ ಮೊದಲನೇ ತಂಡ ಶ್ರೀಲಂಕಾ; ಅತ್ತ ಸೋತ ಪಾಕಿಸ್ತಾನ!

ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್

ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್

ಟೀಮ್ ಇಂಡಿಯಾದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಅನುಮಾನವಿಲ್ಲ. ಇಬ್ಬರು ಕೂಡ ಉತ್ತಮ ಫಾರ್ಮ್‌ನಲ್ಲಿರುವುದು ತಂಡಕ್ಕೆ ಸಕಾರಾತ್ಮಕ ಸಂಗತಿ. ಮೂರನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ವಿರಾಟ್ ಫಾರ್ಮ್ ಕಳೆಗಿಂದಿದಂತಿದ್ದರೂ ಕೊಹ್ಲಿ ಆದಷ್ಟು ಶೀಘ್ರವಾಗಿ ಫಾರ್ಮ್ ಕಂಡುಕೊಳ್ಳುವ ನಿರೀಕ್ಷೆಯಿದೆ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಇಶಾನ್ ಕಿಶನ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಐಪಿಎಲ್‌ನ ಅಂತಿಮ ಹಂತದಲ್ಲಿ ಇಶಾನ್ ಕಿಶನ್ ನೀಡಿದ ಪ್ರದರ್ಶನ ಹಾಗೂ ಮೊದಲ ಅಭ್ಯಾಸ ಪಂದ್ಯದಲ್ಲಿ ಆ ಫಾರ್ಮ್ ಮುಂದುವರಿಸಿದ ರೀತಿಯಿಂದಾಗಿ ಆಡುವ ಬಳಗದಿಂದ ಇಶಾನ್ ಕಿಶನ್ ಅವರನ್ನು ಹೊರಗಿಡುವ ನಿರ್ಧಾರ ಸುಲಭವಲ್ಲ. ಹೀಗಾಗಿ ಈ ಸ್ಥಾನದಲ್ಲಿ ಯಾವ ಆಟಗಾರನನ್ನು ಕಣಕ್ಕಿಳಿಸುವುದು ಎಂಬುದು ನಾಯಕ ಹಾಗೂ ಮ್ಯಾನೇಜ್‌ಮೆಂಟ್ ನಿರ್ಧಾರ ಕೈಗೊಳ್ಳಲಿದ್ದಾರೆ.

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್; ಎಷ್ಟು ರನ್ ನೀಡಿದ್ರು ಗೊತ್ತಾ?

ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್

ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್

ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ಅನುಮಾನವಾಗಿದೆ. ಅಭ್ಯಾಸ ಪಂದ್ಯಗಳಲ್ಲಿಯೂ ಹಾರ್ದಿಕ್ ಬೌಲಿಂಗ್ ದಾಳಿ ನಡೆಸದಿರುವುದು ಗಮನಾರ್ಹ ಸಂಗತಿ. ಹೀಗಾಗಿ ಹಾರ್ದಿಕ್ ಬೌಲಿಂಗ್ ನಡೆಸದಿದ್ದರೆ ತಂಡದ ಸಂಯೋಜನೆಯಲ್ಲಿ ಏರುಪೇರಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಹಾರ್ದಿಕ್ ಪಾಂಡ್ಯ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ಆಲ್‌ರೌಂಡರ್ ಆಗಿ ಆಡಿಸಬೇಕು ಎಂಬ ಅಭಿಪ್ರಾಯಗಳು ಇದೆ. ಈ ಸ್ಥಾಮ ಕೂಡ ಟೀಮ್ ಇಂಡಿಯಾ ನಾಯಕನಿಗೆ ಹೆಚ್ಚು ಕಾಡಲು ಆರಂಭಿಸಿದೆ.

ಈ ಕಾರಣದಿಂದಲೇ ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೂ ಸೋಲಿಸಲು ಆಗಿಲ್ಲ: ಕಪಿಲ್ ದೇವ್

ಸ್ಪಿನ್ನರ್ ಆಗಿ ಕಣಕ್ಕಿಳಿಯುವುದು ಯಾರು?

ಸ್ಪಿನ್ನರ್ ಆಗಿ ಕಣಕ್ಕಿಳಿಯುವುದು ಯಾರು?

ಇನ್ನು ಟೀಮ್ ಇಂಡಿಯಾ ಪರವಾಗಿ ಆಲ್‌ರೌಂಡರ್ ಆಗಿರುವ ರವೀಂದ್ರ ಜಡೇಜಾ ಸ್ಪಿನ್ನರ್ ಆಗಿ ಕಣಕ್ಕಿಳಿಯುವುದು ಖಚಿತ. ಆದರೆ ಇನ್ನೊಂದು ಸ್ಪಿನ್ನರ್‌ನ ಸ್ಥಾನದಲ್ಲಿ ಯಾರನ್ನು ಆಡಿಸಬೇಕೆಂಬುದು ಈಗ ಇರುವ ಪ್ರಶ್ನೆಯಾಗಿದೆ. ಅನುಭವಿ ಆರ್ ಅಶ್ವಿನ್ ಮೊದಲ ಅಭ್ಯಾಸ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ದರೂ ಅದ್ಭುತವಾಗಿ ನಿಯಂತ್ರಣ ಸಾಧಿಸಿದ್ದರು. ಎರಡನೇ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲಿಯೇ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಮತ್ತೊಂದೆಡೆ ರಾಹುಲ್ ಚಹರ್ ಕೂಡ ಎರಡು ಪಂದ್ಯಗಳಲ್ಲಿಯೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವರುಣ್ ಚಕ್ರವರ್ತಿ ಆಸ್ಟ್ರೇಲಿಯಾ ವಿರುದ್ಧಧ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡು ದುಬಾರಿಯೆನಿಸಿದರೂ ಐಪಿಎಲ್‌ನಲ್ಲಿ ತೋರಿದ ಪ್ರದರ್ಶನ ಕಡೆಗಣನೆ ಮಾಡುವಂತಿಲ್ಲ. ಹೀಗಾಗಿ ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಭಾರತ ಸಂಪೂರ್ಣ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ

Pakistan ವಿರುದ್ಧ ಆಡುವ 11 ಆಟಗಾರರು ಯಾರು ? | Oneindia Kannada

Story first published: Thursday, October 21, 2021, 15:23 [IST]
Other articles published on Oct 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X