ಟಿ20 ವಿಶ್ವಕಪ್: ಟೀಮ್ ಇಂಡಿಯಾ ಸೆಮಿಫೈನಲ್‌ಗೇರಲು ಇನ್ನೂ ಇದೆ ಅವಕಾಶ!

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಸೋಲು ಅನುಭವಿಸಿದೆ. ಎರಡು ಪಂದ್ಯಗಳನ್ನಾಡಿದ ನಂತರವೂ ಭಾರತ ಗೆಲುವಿನ ಖಾತೆ ತೆರೆಯದೆ ಆಘಾತಕಾರಿ ಸ್ಥಿತಿಯಲ್ಲಿದೆ. ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಸೆಮಿಫೈನಲ್ ಪ್ರವೇಶಿಸಬೇಕಾದರೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯಿತ್ತು. ಆದರೆ ಈ ಪಂದ್ಯವನ್ನು ಕೂಡ ಭಾರತ ಭಾರೀ ಅಂತರದಿಂದ ಸೋಲುವ ಮೂಲಕ ಸೆಮಿಫೈನಲ್ ಕನಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ.

ಹಾಗಿದ್ದರೂ ಟೀಮ್ ಇಂಡಿಯಾದ ಸೆಮಿಫೈನಲ್ ಕನಸು ಸಂಪೂರ್ಣವಾಗಿ ಇನ್ನೂ ಮುಚ್ಚಿಲ್ಲ ಎಂಬುದು ಗಮನಾರ್ಹ ಅಂಶ. ಭಾರತ ಸೆಮಿಫೈನಲ್‌ಗೇರಲು ಇನ್ನು ಕೂಡ ಅವಕಾಶವಿದೆ. ಅದರೆ ಅದು ಸುಲಭವಲ್ಲ. ಭಾರತ ತನ್ನ ಪ್ರದರ್ಶನದ ಜೊತೆಗೆ ಇತರ ತಂಡಗಳ ಪ್ರದರ್ಶನವನ್ನು ಕೂಡ ಅವಲಂಬಿಸಬೇಕಿದೆ

ಟಿ20 ವಿಶ್ವಕಪ್: ಭಾರತಕ್ಕೆ ಸೋಲುಣಿಸಿದ ಕಿವೀಸ್ ಪಡೆ; ವಿಶ್ವಕಪ್ ಕನಸು ಬಹುತೇಕ ಭಗ್ನಟಿ20 ವಿಶ್ವಕಪ್: ಭಾರತಕ್ಕೆ ಸೋಲುಣಿಸಿದ ಕಿವೀಸ್ ಪಡೆ; ವಿಶ್ವಕಪ್ ಕನಸು ಬಹುತೇಕ ಭಗ್ನ

ಹಾಗಾದರೆ ಟೀಮ್ ಇಂಡಿಯಾ ಮುಂದಿರುವ ಅವಕಾಶಗಳು ಯಾವುದು? ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಸ ಬೇಕಾದರೆ ಮುಂದೆ ಯಾವ ರೀತಿ ಫಲಿತಾಂಶಗಳನ್ನು ಪಡೆಯಬೇಕಿದೆ? ಮುಂದೆ ಓದಿ..

ಉಳಿದ ಪಂದ್ಯಗಳ ಗೆಲುವು ಅನಿವಾರ್ಯ

ಉಳಿದ ಪಂದ್ಯಗಳ ಗೆಲುವು ಅನಿವಾರ್ಯ

ಭಾರತ ಈ ಬಾರಿಯ ಸೆಮಿಫೈನಲ್‌ನಲ್ಲಿ ತನ್ನ ಕೊನೆಯ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಬೇಕಿದ್ದರೆ ಮುಂದಿನ ಮೂರು ಪಂದ್ಯಗಳು ಕೂಡ ಗೆಲ್ಲಲೇ ಬೇಕಿದೆ. ಹಾಗಿದ್ದರೆ ಮಾತ್ರವೇ ಟೀಮ್ ಇಂಡಿಯಾದ ಕನಸು ಜೀವಂತವಾಗಿರಲು ಸಾಧ್ಯ. ಭಾರತ ತನ್ನ ಮುಂದಿನ ಮೂರು ಪಂದ್ಯಗಳನ್ನು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ ಆಡಲಿದೆ.

ಭಾರೀ ಅಂತರದ ಗೆಲುವು ಮುಖ್ಯ

ಭಾರೀ ಅಂತರದ ಗೆಲುವು ಮುಖ್ಯ

ಭಾರತ ತಂಡ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಿಂದ ಸೋಲು ಕಂಡಿದೆ. ಹೀಗಾಗಿ ಭಾರತ ನೆಟ್‌ ರನ್‌ರೇಟ್‌ನಲ್ಲಿ ಭಾರೀ ಹಿಂದಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸುವುದು ಮಾತ್ರ ಸಾಕಾಗುವುದಿಲ್ಲ. ತನ್ನ ನೆಟ್‌ರನ್‌ರೇಟ್‌ಅನ್ನು ಕೂಡ ಉತ್ತಮ ಪಡಿಸಿಕೊಳ್ಳಲೇ ಬೇಕಿದೆ. ಹೀಗಾಗಿ ದೊಡ್ಡ ಅಂತರದಿಂದ ಭಾರತ ಗೆಲುವು ಸಂಪಾದಿಸಬೇಕು. ಹಾಗಾದಲ್ಲಿ ಮಾತ್ರವೇ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿರಲು ಸಾಧ್ಯವಿದೆ.

ನ್ಯೂಜಿಲೆಂಡ್ ಒಂದು ಪಂದ್ಯ ಸೋಲಬೇಕು

ನ್ಯೂಜಿಲೆಂಡ್ ಒಂದು ಪಂದ್ಯ ಸೋಲಬೇಕು

ಭಾರತ ಸೆಮಿ ಫೈನಲ್‌ಗೇರಬೇಕಾದರೆ ತನ್ನ ಫಲಿತಾಂಶದ ಜೊತೆಗೆ ಇತರ ತಂಡಗಳ ಫಲಿತಾಂಶಗಳು ಕೂಡ ಬಹಳ ಪ್ರಮುಖವಾಗಿದೆ. ಸದ್ಯ ಅಂಕಪಟ್ಟಿಯ್ಲಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್ ಜೊತೆಗೆ ಅಫ್ಘಾನಿಸ್ತಾನ ಕೂಡ ಪೈಪೋಟಿ ನಡೆಸಲಿದೆ. ಮೂರು ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನ 2 ಗೆಲುವು ಸಾಧಿಸಿ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ತಂಡ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿ 2 ಅಂಕವನ್ನು ಹೊಂದಿದೆ. ಈ ಎರಡು ತಂಡಗಳು ಕೂಡ 6 ಅಂಕಗಳಿಗಿಂತ ಹೆಚ್ಚಿನ ಅಂಕವನ್ನು ಗಳಿಸಬಾರದು. ಅಂದರೆ ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ 1 ಸೋಲು ಕಾಣಲೇ ಬೇಕು. ಆದರೆ ನ್ಯೂಜಿಲೆಂಡ್ ತಂಡದ ಎದುರಾಳಿಗಳು ದುರ್ಬಲ ತಂಡಗಳು ಎನಿಸಿರುವ ಸ್ಕಾಟ್ಲೆಂಡ್, ನಮೀಬಿಯಾ ಹಾಗೂ ಅಫ್ಘಾನಿಸ್ತಾನ. ಅಫ್ಘಾನಿಸ್ತಾನ ಕೂಡ ತನ್ನ ಎರಡು ಪಂದ್ಯಗಳಲ್ಲಿ ಒಂದು ಗೆದ್ದು ಒಂದು ಸೋಲು ಕಾಣಬೇಕಿದೆ. ಅಫ್ಘಾನಿಸ್ತಾನ ತಂಡ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ನೆಟ್ ರನ್‌ರೇಟ್‌ನಲ್ಲಿ ಭವಿಷ್ಯ ನಿರ್ಧಾರ

ನೆಟ್ ರನ್‌ರೇಟ್‌ನಲ್ಲಿ ಭವಿಷ್ಯ ನಿರ್ಧಾರ

ಈ ಮೇಲಿನ ಲೆಕ್ಕಾಚಾರದಂತೆ ನಡೆದಾಗ ಭಾರತ, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ಫಲಿತಾಂಶ ಸಮಬಲವಾಗಲಿದೆ. ಆಗ ನೆಟ್‌ ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ ನ್ಯೂಜಿಲೆಂಡ್ ಹಾಗೂ ಅಪ್ಘಾನಿಸ್ತಾನ ತಂಡಗಳಿಗಿಂತ ಭಾರತ ಉತ್ತಮ ರನ್‌ರೇಟ್ ಹೊಂದಿರಬೇಕು. ಹೀಗಾಗಿ ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಗೆಲುವು ಮಾತ್ರವಲ್ಲ ನೆಟ್‌ರನ್‌ರೇಟ್‌ನತ್ತ ಕೂಡ ಚಿತ್ತ ಹರಿಸಬೇಕು.

For Quick Alerts
ALLOW NOTIFICATIONS
For Daily Alerts
Story first published: Monday, November 1, 2021, 13:22 [IST]
Other articles published on Nov 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X