ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲಿರುವ ಸಂಭಾವ್ಯ ಭಾರತೀಯ ತಂಡ ಹೀಗಿದೆ!

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ಹಣಾಹಣಿ ನಡೆಸುತ್ತಿರುವಂತೆಯೇ ಮುಂಬರುವ ಮಹತ್ವದ ಟೂರ್ನಿಯ ಆಯ್ಕೆಯ ಸಿದ್ಧತೆಗಳು ನಡೆಯುತ್ತಿದೆ. ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಅಂತ್ಯವಾದ ಬಳಿಕ ಟಿ20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ತಿಂಗಳು ಯುಎಇನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ.

ಮೂಲಗಳ ಮಾಹಿತಿಯ ಪ್ರಕಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿ ನಾಲ್ಕನೇ ಟೆಸ್ಟ್‌ನ ಆರಂಭಕ್ಕೂ ಮುನ್ನವೇ ವರ್ಚುವಲ್ ವೇದಿಕೆಯಲ್ಲಿ ಮಾತುಕತೆಯನ್ನು ನಡೆಸಿದೆ ಎನ್ನಲಾಗಿದೆ. ಹೀಗಾಗಿ ತಮಡದ ಸದಸ್ಯರ ಆಯ್ಕೆಯ ನಿರ್ಣಯ ಈ ಸಭೆಯಲ್ಲಿಯೇ ತೆಗೆದುಕೊಂಡಿರುವ ಸಾಧ್ಯತೆಯಿದೆ. ಇನ್ನು ಕೆಲ ಮೂಲಗಳ ಮಾಹಿತಿಯ ಪ್ರಕಾರ ಈ ಚರ್ಚೆಯಲ್ಲಿ ಕೆಲ ಸ್ಥಾನಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಮಾತ್ರವೇ ನಡೆದಿದೆ ಎನ್ನಲಾಗಿದೆ. ಹೀಗಾಗಿ ಕೆಲ ಸಂಭಾವ್ಯ ಆಟಗಾರರ ಸೇರ್ಪಡೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ4ನೇ ಟೆಸ್ಟ್: ಭಾರತ ನೀಡಿರುವ ಗುರಿ ಮುಟ್ಟುವುದು ಸುಲಭದ ಮಾತಲ್ಲ ಎಂದ ಇಂಗ್ಲೆಂಡ್ ಆಟಗಾರ

ಅಂತಿಮ ಘೋಷಣೆ ಮಾತ್ರ ಬಾಕಿ?

ಅಂತಿಮ ಘೋಷಣೆ ಮಾತ್ರ ಬಾಕಿ?

"ನಾವು ಈಗಾಗಲೇ ಸಿದ್ಧಪಡಿಸಿದ ಸ್ಕ್ವಾಡ್ ಹೊಂದಿದ್ದೇವೆ. ಇನ್ನು ಕೆಲವೇ ಆಟಗಾರರ ಸ್ಥಾನಗಳ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಆ ಬಗ್ಗೆಯೂ ತಂಡದ ಮ್ಯಾನೇಜ್‌ಮೆಂಟ್ ಈಗಾಗಲೇ ಆಯ್ಕೆಗಾರರ ಜೊತೆಗೆ ಚರ್ಚಿಸಿದೆ. ಅಂತಿಮ ಘೋಷಣೆಯನ್ನು ಮಾತ್ರವೇ ನಾವು ಮಾಡಬೇಕಿದೆ" ಎಂದು ಮೂಲಗಳು ಮಾಹಿತಿ ನೀಡಿದೆ. ಇನ್ನು ಟೀಮ್ ಇಂಡಿಯಾ ಈ ಟಿ20 ವಿಶ್ವಕಪ್‌ಗಾಗಿ ಕೆಲ ಹೆಚ್ಚುವರಿ ಆಟಗಾರರನ್ನು ಕೂಡ ತಂಡದೊಂದಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಗಾಯ ಹಾಗೂ ಕೊರೊನಾವೈರಸ್‌ನ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕೆಲ ಪ್ರಮುಖ ಚರ್ಚೆಗಳು ಸಾಧ್ಯತೆ

ಕೆಲ ಪ್ರಮುಖ ಚರ್ಚೆಗಳು ಸಾಧ್ಯತೆ

ಇನ್ನು ಈ ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ಕೆಲ ಮಹತ್ವದ ಚರ್ಚೆಗಳನ್ನು ಆಯ್ಕೆಗಾರರು ನಡೆಸಲಿದ್ದಾರೆ. ಕೆಲ ಆಟಗಾರ ಸೇರ್ಪಡೆಯ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಮುಖವಾಗಿ ಹಿರಿಯ ಆಟಗಾರ ಶಿಖರ್ ಧವನ್‌ಗೆ ಈ ತಂಡದಲ್ಲಿ ಸ್ಥಾನ ನೀಡಬೇಕಾ ಎಂಬುದು ಈ ಮಹತ್ವದ ಚರ್ಚೆಗಳಲ್ಲಿ ಒಂದಾಗಿರಲಿದೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಫಾರ್ಮ್ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವುದು ಕೂಡ ಈ ಚರ್ಚೆಯ ವಿಷಯವಾಗಿರಲಿದೆ.

ಮೀಸಲು ಆಟಗಾರರ ಬಗ್ಗೆ ನಿರ್ಧಾರ

ಮೀಸಲು ಆಟಗಾರರ ಬಗ್ಗೆ ನಿರ್ಧಾರ

ಇನ್ನು ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಕೈಬೆರಳಿಗೆ ಗಾಯಮಾಡಿಕೊಂಡು ಸರಣಿಯಿಂದ ಹೊರಗುಳಿದಿದ್ದ ವಾಶಿಂಗ್ಟನ್ ಸುಂದರ್ ವಿಚಾರವಾಗಿಯೂ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಸುಂದರ್ ಐಪಿಎಲ್‌ನಿಂದ ಹೊರಗುಳಿದಿದ್ದು ವಿಶ್ವಕಪ್‌ಗೆ ಲಭ್ಯವಾಗುವ ಬಗ್ಗೆ ಸ್ಪಷ್ಟತೆಯಿಲ್ಲ. ಇನ್ನು ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಾಹರ್ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕೂಡ ಆಯ್ಕೆಗಾರರಿಗೆ ಸವಾಲಾಗಲಿದೆ. ಇಬ್ಬರು ಕೂಡ ಅದ್ಭುತವಾದ ಫಾರ್ಮ್‌ನಲ್ಲಿದ್ದು ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನಿರ್ಣಾಯಕ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇವುಗಳ ಜೊತೆಗೆ ಎಷ್ಟು ಮೀಸಲು ಆಟಗಾರರನ್ನು ತಂಡದೊಂದೊಗೆ ಕರೆದೊಯ್ಯಬೇಕಾಗಬಹುದು ಎಂಬುದು ಕೂಡ ಈ ಚರ್ಚೆಯ ಮುಖ್ಯ ವಿಷಯವಾಗಲಿದೆ.

ಟೀಮ್ ಇಂಡಿಯಾ ಸಂಭಾವ್ಯ ತಂಡ

ಟೀಮ್ ಇಂಡಿಯಾ ಸಂಭಾವ್ಯ ತಂಡ

ಕೆಎಲ್ ರಾಹುಲ್, ರೋಹಿತ್ ಶರ್ಮಾ (ಉಪ ನಾಯಕ), ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಶಿಖರ್ ಧವನ್

ಸಂಭಾವ್ಯ ಮೀಸಲು ಆಟಗಾರರು: ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಪೃಥ್ವಿ ಶಾ, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ

For Quick Alerts
ALLOW NOTIFICATIONS
For Daily Alerts
Story first published: Monday, September 6, 2021, 19:50 [IST]
Other articles published on Sep 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X