ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ; ಬದ್ಧ ಎದುರಾಳಿಗಳ ಮಹಾ ಕದನಕ್ಕೆ ವೇದಿಕೆ ಸಜ್ಜು

ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಕದನ ಇಂದು ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ನಿರೀಕ್ಷೆಯ ಪಂದ್ಯ ಇದಾಗಿರುವ ಕಾರಣದಿಂದಾಗಿ ಇನ್ನಿಲ್ಲದಷ್ಟು ಕುತೂಹಲ ಮೂಡಿಸಿದೆ ಈ ಪಂದ್ಯ. ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಸಂಪೂರ್ಣವಾಗಿ ಸ್ಥಗಿತವಾಗಿರುವ ಕಾರಣದಿಂದಾಗಿ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಈ ಎರಡು ತಮಡಗಳು ಮುಖಾಮುಖಿಯಾಗುತ್ತಿರುವ ಕಾರಣದಿಂದಾಗಿ ಈ ಎರಡು ತಂಡಗಳ ನಡುವಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇನ್ನು ಟಿ20 ತಂಡದ ನಾಯಕನಾಗಿ ಈ ಟೂರ್ನಿಯೇ ಅಂತಿಮ ಎಂದು ಈಗಾಗಲೇ ಘೋಷಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಕುತೂಹಲಕಾರಿ ಪಂದ್ಯ ಇತರ ಸಾಮಾನ್ಯ ಪಂದ್ಯಗಳಂತೆಯೇ ಮತ್ತೊಂದು ಪಂದ್ಯ ಎಂದು ಹೇಳಿದ್ದಾರೆ. ಹಾಗಿದ್ದರೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ಎಂದರೆ ವಿಭಿನ್ನವಾದ ಅನುಭವ ಎಂಬ ಮಾತನ್ನು ಕೂಡ ಆಡಿದ್ದಾರೆ ವಿರಾಟ್ ಕೊಹ್ಲಿ.

"ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ನಾನು ಇತರ ಮತ್ತೊಂದು ಪಂದ್ಯದಂತೆಯೇ ನೋಡಲು ಬಯಸುತ್ತೇನೆ. ಈ ಪಂದ್ಯದ ಮೇಲೆ ಕಷ್ಟು ನಿರೀಕ್ಷೆಗಳು ಇದೆ ಎಂಬುದು ನನಗೆ ಅರಿವಿದೆ. ಅದೇ ಕಾರಣದಿಂದಾಗಿ ಈ ಪಂದ್ಯದ ಟಿಕೆಟ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ" ಎಂದಿದ್ದರು ವಿರಾಟ್ ಕೊಹ್ಲಿ.

ಇನ್ನು ಈ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಉತ್ತಮ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳು ಮಳೆಗೆ ಆಹುತಿಯಾದರೂ ಒಂದು ಪಂದ್ಯವನ್ನು ಗೆದ್ದು ಬಂದಿದೆ ಪಾಕಿಸ್ತಾನ. ಆದರೆ ಅದಕ್ಕೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 2-1 ಅಂತರದಿಂದ ಪಾಕಿಸ್ತಾನ ಸೋಲು ಕಂಡಿತ್ತು. ನಂತರ ತವರಿನಲ್ಲಿ ನ್ಯೂಜಿಲಂಡ್ ವಿರುದ್ಧದ ಸರಣಿ ಕೊನೇಯ ಕ್ಷಣದಲ್ಲಿ ರದ್ದಾಗಿತ್ತು.

ಪಾಕಿಸ್ತಾಮ ತಂಡ ಹೆಚ್ಚಾಗಿ ನಾಯಕ ಬಾಬರ್ ಅಜಂ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಮೇಲೆ ಅವಲಂಬಿತವಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಈ ಇಬ್ಬರು ಆಟಗಾರರು ಕೂಡ ಅತ್ಯಂತ ಸ್ಥರವಾದ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಭಾರತದ ವಿರುದ್ಧದ ಈ ಹಿಂದಿನ ಸೋಲಿನ ದಾಖಲೆಯನ್ನು ತಲೆಯಲ್ಲಿ ಇಟ್ಟುಕೊಂಡು ಆಡುವುದಿಲ್ಲ ಎಂದು ಪಂದ್ಯದ ಆರಂಭಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಈ ಹಿಂದಿನ ದಾಖಳೆಗಳತತ್ತ ಗಮನಹರಿಸುತ್ತಿಲ್ಲ. ನಾವು ಈ ವಿಶ್ವಕಪ್‌ನ ಮೇಲೆ ನಮ್ಮ ಗಮನ ನೆಟ್ಟಿದ್ದೇವೆ. ನಮ್ಮ ಸಾಮರ್ಥ್ಯ, ಶಕ್ತಿಯತ್ತ ನಾವು ಚಿತ್ತ ಹರಿಸಲಿದ್ದು ಅದನ್ನು ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಲು ಪ್ರಯತ್ನಿಸಲಿದ್ದೇವೆ" ಎಂದಿದ್ದಾರೆ ಪಾಕ್ ನಾಯಕ ಬಾಬರ್ ಅಜಂ.

ಭಾರತ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಶಾರ್ದೂಲ್ ಠಾಕೂರ್ ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ; ಮಾರ್ಗದರ್ಶಕ: ಎಂಎಸ್ ಧೋನಿ

ಪಾಕಿಸ್ತಾನ ಸ್ಕ್ವಾಡ್ ಹೀಗಿದೆ : ಬಾಬರ್ ಅಝಾಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ,

ಪಾಕಿಸ್ತಾನ ಗೆದ್ದ ನಂತರ ಬಾಬರ್ ಅವರ ತಂದೆಯ ವಿಡಿಯೋ ವೈರಲ್ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, October 24, 2021, 8:42 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X