ಟಿ20 ವಿಶ್ವಕಪ್: ಮತ್ತೊಂದು ಸೇಡಿನ ಕದನಕ್ಕೆ ಸಜ್ಜಾಯ್ತು ಪಾಕಿಸ್ತಾನ: ಕಟ್ಟಿ ಹಾಕಲು ಯಶಸ್ವಿಯಾಗುತ್ತಾ ಕಿವೀಸ್ ಪಡೆ?

ಭಾರತದ ವಿರುದ್ಧ ಭಾರೀ ಗೆಲುವಿನ ಆತ್ಮ ವಿಶ್ವಾಸದಲ್ಲಿರುವ ಪಾಕಿಸ್ತಾನ ಈಗ ಮತ್ತೊಂದು ಕದನಕ್ಕೆ ಸಜ್ಜಾಗಿದೆ. ಇಂದು (ಮಂಗಳವಾರ) ಪಾಕಿಸ್ತಾನ ನ್ಯೂಜಿಲೆಂಡ್ ತಂಡದ ವಿರುದ್ಧ ತನ್ನ ಸೆಣೆಸಾಟವನ್ನು ನಡೆಸಲು ಸಜ್ಜಾಗಿದೆ. ಈ ಮೂಲಕ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಬಾಬರ್ ಅಜಂ ಪಡೆ ಹವಣಿಸುತ್ತಿದೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇದು ಮತ್ತೊಂದು ಸೇಡಿನ ಪಂದ್ಯ ಎಂಬುದು ಕೂಡ ಗಮನಾರ್ಹ ಸಂಗತಿ. ಶಾರ್ಜಾ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಸವಾಲನ್ನು ಕೇನ್ ವಿಲಿಯಮ್ಸನ್ ಪಡೆ ಹೇಗೆ ಎದುರಿಸಲಿದೆ ಎಂಬುದು ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

ಯುಎಇನ ಪಿಚ್‌ಗಳೆಂದರೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ತವರಿನ ಪಿಚ್‌ಗಳಷ್ಟೇ ಪರಿಚಿತ. ಪಾಕಿಸ್ತಾನದಲ್ಲಿ ಬಹುತೇಕ ತಂಡಗಳು ಸರಣಿಯನ್ನಾಡಲು ಹಿಣದಕ್ಕೆ ಸರಿಯುತ್ತಿರುವ ಕಾರಣದಿಂದಾಗಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪಾಕಿಸ್ತಾನ ತವರಿನ ಸರಣಿಯಗಳನ್ನು ಯುಎಇನಲ್ಲಿ ಆಯೋಜಿಸುತ್ತಿದೆ. ಇದೀಗ ವಿಶ್ವಕಪ್ ಕೂಡ ದುಬೈನಲದಲ್ಲಿ ಆಯೋಜನೆಯಾಗುತ್ತಿರುವುದು ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಅನುಕೂಲ ಒದಗಿಸಿದೆ. ಇದರ ಸಂಪೂರ್ಣ ಲಾಭವನ್ನು ಪಡೆಯಲು ಪಾಕ್ ಆಟಗಾರರು ಈಗಾಗಲೇ ಮೊದಲ ಪಂದ್ಯದಲ್ಲಿ ಯಶಸ್ವಿಯೂ ಆಗಿದ್ದರು ಎಂಬುದು ಗಮನಾರ್ಹ.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್

ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಪಾಕಿಸ್ತಾನ: ಇನ್ನು ಕೇನ್ ವಿಲಿಯಮ್ಸನ್ ವಿರುದ್ಧದ ನ್ಯೂಜಿಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ತನ್ನ ಸೇಡು ತೋರಿಸಿಕೊಳ್ಳಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ನೆಲದಲ್ಲಿ ಆಡಬೇಕಿದ್ದ ನ್ಯೂಜಿಲೆಂಡ್ ತಂಡ ಕೊನೇಯ ಕ್ಷಣದಲ್ಲಿ ಸರಣಿಯಿಂದ ಹಿಂದಕ್ಕೆ ಸರಿಯುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಮುಖಭಂಗವುಂಟು ಮಾಡಿತ್ತು. ಇದೆ ಸೇಡನ್ನು ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಎದುರಾಗುವಾಗ ಸೋಲಿಸುವ ಮೂಲಕ ತೀರಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೇ ಬಹುರಂಗ ಹೇಳಿಕೆಯನ್ನು ಕೂಡ ನೀಡಿದ್ದರು. ಇದೀಗ ಆ ಅವಕಾಶ ಪಾಕಿಸ್ತಾನ ತಂಡಕ್ಕಿದ್ದು ಉದರಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳುಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳು

ಪಾಕ್ ಆಟಗಾರರಿಗೆ ಎಚ್ಚರಿಸಿದ್ದ ನಾಯಕ ಬಾಬರ್: ಇನ್ನು ಭಾರತದ ವಿರುದ್ಧ ಗೆಲುವಿನ ನಂತರ ಪಾಕಿಸ್ತಾನ ತಮಡದ ನಾಯಕ ಬಾಬರ್ ಅಜಂ ಪಾಕಿಸ್ತಾನದ ಸಹ ಆಟಗಾರರನ್ನು ಎಚ್ಚರಿಸಿದ್ದಾರೆ. ನಾವು ಈ ವಿಶ್ವಕಪ್‌ಗೆ ಭಾರತವನ್ನು ಸೋಲಿಸುವ ಸಲುವಾಗಿ ಮಾತ್ರ ಬಂದಿಲ್ಲ. ನಾವು ಬಂದಿರುವುದು ವಿಶ್ವಕಪ್ ಗೆಲ್ಲಲು. ಅದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಗೆದ್ದ ಖುಷಿಯಲ್ಲಿ ಏಕಾಗ್ರತೆ ಕಳೆದುಕೊಳ್ಳದಿರಿ. ನಾವು ಪ್ರತಿ ಬಾರಿಯೂ ಅದನ್ನು ಮಾಡುತ್ತೇವೆ, ಆದರೆ ಈ ಬಾರಿ ಏಕಾಗ್ರತೆ ಕಳೆದುಕೊಳ್ಳದಂತೆ ಗೆಲುವಿನ ಕಡೆಗೆ ಗಮನಹರಿಸಬೇಕಿದೆ" ಎಂದು ಬಾಬರ್ ಅಜಂ ತಂಡದ ಆಟಗಾರರಿಗೆ ಸಲಹೆ ನೀಡಿದ್ದಾರೆ.

ಪಾಕ್ ಸವಾಲು ಎದುರಿಸಲು ಕೇನ್ ಪಡೆ ಸಜ್ಜು: ಇನ್ನು ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಸರಣಿಯನ್ನು ಆಡಲು ಕೊನೇಯ ಕ್ಷಣದಲ್ಲಿ ನಿರಾಕರಿಸಿದ ಬಳಿಕ ಇದೀಗ ವಿಶ್ವಕಪ್ ವೇದಿಕೆಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪಾಕಿಸ್ತಾನದ ವಿರುದ್ಧ ಪಾಕ್ ನೆಲದಲ್ಲಿ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆ

ನ್ಯೂಜಿಲೆಂಡ್ ತಂಡದ ಸಂಪೂರ್ಣ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮೀಸನ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಟಿಫರ್ಟ್ (ವಿಕೆಟ್ ಕೀಪರ್). ಮೀಸಲು ಆಟಗಾರ: ಆ್ಯಡಮ್ ಮಿಲ್ನೆ.

Shoaib Mailk ಅವರನ್ನು ಬಾರತೀಯ ಅಭಿಮಾನಿಗಳು ಏನೆಂದು ಕರೆದರು ? | Oneindia Kannada

ಪಾಕಿಸ್ತಾನ ತಂಡದ ಸಂಪೂರ್ಣ ಸ್ಕ್ವಾಡ್: ಬಾಬರ್ ಅಜಂ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಶೋಯೆಬ್ ಮಲಿಕ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, October 26, 2021, 9:29 [IST]
Other articles published on Oct 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X