ಟಿ20 ವಿಶ್ವಕಪ್: ಕೊಹ್ಲಿಗಿಂತ ಈ ಆಟಗಾರನೇ ಅಪಾಯಕಾರಿ; ಪಾಕಿಸ್ತಾನ ತಂಡಕ್ಕೆ ಎಚ್ಚರಿಸಿದ ಮಾಜಿ ಆಟಗಾರ

ಐಪಿಎಲ್ ಅಂತ್ಯವಾಗುತ್ತಿದ್ದಂತೆಯೇ ಟಿ20 ವಿಶ್ವಕಪ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣವನ್ನು ನೀಡಲಿದೆ. ಈ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಕುತೂಹಲಕಾರಿಯಾದ ಪಂದ್ಯವೆಂದರೆ ಅದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕದನ. ಬದ್ಧ ಎದುರಾಳಿ ಎನಿಸಿಕೊಂಡಿರುವ ಈ ಎರಡು ತಂಡಗಳ ಮಧ್ಯೆ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲವಾದ ಕಾರಣದಿಂದಾಗಿ ವಿಶ್ವಕಪ್‌ನಂತಾ ವೇದಿಕೆಗಳಲ್ಲಿ ಮಾತ್ರವೇ ಈ ತಂಡಗಳು ಮುಖಾಮುಖಿಯಾಗುತ್ತಿದೆ. ಅದರಲ್ಲೂ ಭಾರತ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ ಸಾಧನೆ ಮಾಡಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಈ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ.

ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುದಾಸ್ಸರ್ ನಜರ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ವಿರಾಟ್ ಕೊಹ್ಲಿಗಿಂತಲೂ ಈ ಆಟಗಾರ ತುಂಬಾ ಅಪಾಯಕಾರಿ ಎಂದಿದ್ದಾರೆ.

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್

ಪಾಕಿಸ್ತಾನದ ಪಾಕಿ ಕ್ರಿಕೆಟಿಗ ಮುದಾಸ್ಸರ್ ನಜರ್ ಭಾರತದ ಯಾವ ಆಟಗಾರನನ್ನು ಉದ್ದೇಶಿಸಿ ಮಾತನಾಡಿದ್ದಾರೆ? ಮುಂದೆ ಓದಿ..

ದುಬೈನಲ್ಲಿ ಮುಖಾಮುಖಿಯಾಗಲಿದೆ ಭಾರತ- ಪಾಕಿಸ್ತಾನ

ದುಬೈನಲ್ಲಿ ಮುಖಾಮುಖಿಯಾಗಲಿದೆ ಭಾರತ- ಪಾಕಿಸ್ತಾನ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 12 ಹಂತದಲ್ಲಿ ಒಂದೇ ಗುಂಪಿನಲ್ಲಿದೆ. ಈ ಬದ್ಧ ಎದುರಾಳಿಗಳು ತಮ್ಮ ಮೊದಲ ಪಂದ್ಯದಲ್ಲಿಯೇ ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಎರಡು ತಂಡಗಳು 2019ರ ಏಕದಿನ ವಿಶ್ವಕಪ್‌ನ ನಂತರ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. 2019ರ ಜೂನ್ 16ರಂದು ಭಾರತ ಹಾಗೂ ಪಾಕಿಸ್ತಾನ ಕೊನೆಯ ಬಾರಿಗೆ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದು ಬೀಗಿತ್ತು.

ಟಿ20 ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಪಾಕಿಸ್ತಾನಕ್ಕಿಂತ ಭಾರತವೇ ಬಲಿಷ್ಠ ಎಂದ ನಜರ್

ಪಾಕಿಸ್ತಾನಕ್ಕಿಂತ ಭಾರತವೇ ಬಲಿಷ್ಠ ಎಂದ ನಜರ್

ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುದಾಸ್ಸರ್ ನಜರ್ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಹೋಲಿಕೆ ಮಾಡಿದರೆ ಖಂಡಿತವಾಗಿಯೂ ಭಾರತ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿದೆ ಎಂದಿದ್ದಾರೆ. "ಸಾಮರ್ಥ್ಯವನ್ನು ಗಮನಿಸಿ ಹೇಳುವುದಾದರೆ ಅವರು(ಭಾರತ) ನಮಗಿಂತ ಮುಂದಿದ್ದಾರೆ. ಆದರೆ ನೀವು ಚಾಂಫಿಯನ್ಸ್ ಟ್ರೋಫಿಯತ್ತ ಗಮನಹರಿಸಿದರೆ ಪಾಕಿಸ್ತಾನ ಅದನ್ನು ಗೆದ್ದಿತ್ತು. ಅಲ್ಲೂ ಕೂಡ ಭಾರತದ ವಿರುದ್ಧದ ಮೊದಲ ಪಂದ್ಯವನ್ನು ಪಾಕಿಸ್ತಾನ ಸೋತಿತ್ತು. ಆದರೆ ಆ ದಿನ ಫೈನಲ್ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು. ಈ ಭಾರಿ ಭಾರತವನ್ನು ಪಾಕಿಸ್ತಾನ ಸೋಲಿಸಲು ಸಾಧ್ಯದರೆ ಅದು ಅವಿಸ್ಮರಣೀಯ ಕ್ಷಣವಾಗಲಿದೆ" ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುದಾಸ್ಸರ್ ನಜರ್ ಹೇಳಿಕೆ ನೀಡಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಅಜೇಯ ಸಾಧನೆ

ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಅಜೇಯ ಸಾಧನೆ

ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನ ಸೋಲಿಸಿದ ದೃಷ್ಟಾಂತವಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಭಾರತ 7-0 ಅಂತರದ ದಾಖಲೆ ಹೊಂದಿದ್ದರೆ ಟಿ20 ವಿಶ್ವಕಪ್‌ನಲ್ಲಿ 5-0 ಅಂತರದಿಂದ ಭಾರತ ಗೆಲುವ ಸಾಧಿಸಿ ಅಜೇಯವಾಗುಳಿದಿದೆ. ಆದರೆ ಈ ಬಾರಿಯ ಟಿ೨೦ ವಿಶ್ವಕಪ್‌ಗೆ ಮುನ್ನ ಭಾರತದ ಬ್ಯಾಟಿಂಗ್ ವಿಭಾಗ ಉತ್ತಮ ಲಯದಲ್ಲಿಲ್ಲ ಎಂಬ ಭಾವನೆಯನ್ನು ನಜರ್ ವ್ಯಕ್ತಪಡಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ಹೊಂದಿರುವ ಭಾರತ ತಂಡ ಯಾವಾಗಲೂ ಬಲಿಷ್ಠ ಎಂದಿದ್ದಾರೆ ನಜರ್. ಇದೇ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿಗಿಂತಲೂ ಪಾಕಿಸ್ತಾನಕ್ಕೆ ಅಪಾಯಕಾರಿಯಾದ ಆಟಗಾರನನ್ನು ಹೆಸರಿಸಿದ್ದಾರೆ.

ವಿರಾಟ್ ಕೊಹ್ಲಿಗಿಂತ ಅಪಾಯಕಾರಿ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿಗಿಂತ ಅಪಾಯಕಾರಿ ರೋಹಿತ್ ಶರ್ಮಾ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುದಾಸ್ಸರ್ ನಜರ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ವಿರಾಟ್ ಕೊಹ್ಲಿಗಿಂತಲೂ ಅಪಾಯಯಾಗಬಲ್ಲ ಆಟಗಾರ ಎಂದು ರೋಹಿತ್ ಶರ್ಮಾರನ್ನು ಹೆಸಿಸಿದ್ದಾರೆ. ಪಾಕ್ ಬೌಲರ್‌ಗಳು ರೋಹಿರ್ ಶರ್ಮಾ ಮೇಲೆ ಹೆಚ್ಚಿನ ಕಣ್ಣಿಡಬೇಕೆಂದು ಅವರು ಎಚ್ಚರಿಸಿದ್ದಾರೆ. "ಭಾರತ ತಂಡದ ಆಟಗಾರರು ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಹೇಳಿಕೊಳ್ಳುವಂತಾ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಎರಡ್ಮೂರು ವರ್ಷದ ಹಿಂದೆ ಶತಕದ ಮೇಲೆ ಶತಕವನ್ನು ಗಳಿಸುತ್ತಿದ್ದ ವಿರಾಟ್ ಕೊಹ್ಲಿ ಕೂಡ ಹೆಚ್ಚಿನ ರನ್‌ಗಳಿಸುತ್ತಿಲ್ಲ. ಈಗ ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಅಪಾಯವಿರುವುದು ರೋಹಿತ್ ಶರ್ಮಾರಿಂದ" ಎಂದು ಮುದಸ್ಸಾರ್ ಪಾಕಿಸ್ತಾನ ತಂಡಕ್ಕೆ ಎಚ್ಚರಿಸಿದ್ದಾರೆ.

ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದು ತಂಡದ ಇತರರನ್ನು ತುಳಿಯುವುದಕ್ಕಾ?; ಬಿಸಿಸಿಐ ಹೇಳಿದ್ದಿಷ್ಟು

ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಂಪೂರ್ಣ ಸ್ಕ್ವಾಡ್

ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಂಪೂರ್ಣ ಸ್ಕ್ವಾಡ್

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ

ಮೀಸಲು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್

ಮಾರ್ಗದರ್ಶಕ: ಎಂಎಸ್ ಧೋನಿ

ವೇಳಾಪಟ್ಟಿ: 24 ಅಕ್ಟೋಬರ್‌ vs ಪಾಕಿಸ್ತಾನ, 31 ಅಕ್ಟೋಬರ್‌ vs ನ್ಯೂಜಿಲೆಂಡ್, 3 ನವೆಂಬರ್‌ vs ಅಫ್ಘಾನಿಸ್ತಾನ, 5 ನವೆಂಬರ್‌ vs ಬಿ1, 8 ನವೆಂಬರ್‌ vs ಎ2.

ಪಾಕಿಸ್ತಾನ ತಂಡ: ಬಾಬರ್ ಅಝಾಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಸೊಹೈಬ್ ಮಕ್ಸೂದ್

ವೇಳಾಪಟ್ಟಿ: 24 ಅಕ್ಟೋಬರ್‌ vs ಭಾರತ, 26 ಅಕ್ಟೋಬರ್‌ vs ನ್ಯೂಜಿಲೆಂಡ್, 29 ಅಕ್ಟೋಬರ್‌ vs ಅಫ್ಘಾನಿಸ್ತಾನ, 2 ನವೆಂಬರ್‌ vs ಎ2, 7 ನವೆಂಬರ್ vs ಬಿ1

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 13 - October 23 2021, 03:30 PM
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 30, 2021, 17:12 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X