ಟಿ20 ವಿಶ್ವಕಪ್: ಪಾಕಿಸ್ತಾನದ ಈ 3 ಅಪಾಯಕಾರಿ ಆಟಗಾರರ ಮೇಲೆ ಭಾರತಕ್ಕೆ ಬೇಕು ಎಚ್ಚರಿಕೆಯ ಕಣ್ಣು!

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳು ಕುತೂಹಲದಿಂದ ಈ ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ. ಎಲ್ಲಾ ರೀತೊಯಿಂದ ನೋಡಿದರೂ ಪಾಕಿಸ್ತಾನ ತಂಡಕ್ಕಿಂತ ಭಾರತ ಉತ್ತಮವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡ ಎದುರಾಳಿ ತಂಡಕ್ಕೆ ಯಾವಾಗಲೂ ಅಪಾಯಕಾರಿ ಎಂಬುದು ಕೂಡ ಅಷ್ಟೇ ನಿಜ. ಹಾಗಾಗಿ ಈ ಪಂದ್ಯದಲ್ಲಿ ಗೆಲ್ಲಲು ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶೇಷ ರಣತಂತ್ರವನ್ನು ರೂಪಿಸಿಕೊಳ್ಳುತ್ತಿದೆ.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಟಿ20 ವಿಶ್ವಕಪ್‌ನಲ್ಲಿ ಭಾನುವಾರ ಮುಖಾಮುಖಿಯಾಗುತ್ತಿದೆ. ಈ ಎರಡು ತಂಡಗಳು ಇದಕ್ಕೂ ಮುನ್ನ 2019ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕೂಡ ಭಾರತ ಗೆಲುವು ಸಾಧಿಸಿತ್ತು. ಪಾಕಿಸ್ತಾನದ ವಿರುದ್ಧ ವಿಶ್ವಕಪ್ ವೇದಿಕೆಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ದಾಖಳೆ ಹಿಂದಿರುವ ಭಾರತ ಈ ಪ್ರತಿಷ್ಠಿಯ ದಾಖಲೆಯನ್ನು ಮುಂದುವರಿಸುವ ಉತ್ಸಾಹದಲ್ಲಿದೆ.

ಟಿ20 ವಿಶ್ವಕಪ್: ಎರಡು ಅಭ್ಯಾಸ ಪಂದ್ಯ ಅಂತ್ಯ, ವಿರಾಟ್ ಕೊಹ್ಲಿಗೆ ತಲೆನೋವಾಗಿದೆ 3 ಸ್ಥಾನಗಳು!ಟಿ20 ವಿಶ್ವಕಪ್: ಎರಡು ಅಭ್ಯಾಸ ಪಂದ್ಯ ಅಂತ್ಯ, ವಿರಾಟ್ ಕೊಹ್ಲಿಗೆ ತಲೆನೋವಾಗಿದೆ 3 ಸ್ಥಾನಗಳು!

ಆದರೆ ಅಪಾಯಕಾರಿಯಾಗಿರುವ ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನ ತಂಡದಲ್ಲಿ ದಿಡ್ಡ ಪ್ರಮಾಣದಲ್ಲಿ ಮ್ಯಾಚ್‌ ವಿನ್ನರ್‌ಗಳು ಇಲ್ಲದಿದ್ದರೂ ಕೆಲ ಅದ್ಭುತ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಈ ಆಟಗಾರರಲ್ಲಿದೆ. ಅದರಲ್ಲಿ ವಿಶೇಷವಾಗಿ ಮೂವರು ಆಟಗಾರರ ವಿರುದ್ಧ ಭಾರತ ವಿಶೇಷ ಕಣ್ಣಿಡಬೇಕಾಗಿದೆ. ಆ ಮೂವರು ಆಟಗಾರರು ಯಾರು? ಮುಂದೆ ಓದಿ..

ಮೊಹಮ್ಮದ್ ರಿಜ್ವಾನ್

ಮೊಹಮ್ಮದ್ ರಿಜ್ವಾನ್

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿರುವ ಉತ್ತಮ ಬ್ಯಾಟರ್‌ಗಳ ಪೈಕಿ ಮೊಹಮ್ಮದ್ ರಿಜ್ವಾನ್ ಕೂಡ ಒಬ್ಬರು. ಅಗ್ರ ಕ್ರಮಾಂಕದಲ್ಲಿ ಪಾಕಿಸ್ತಾನ ತಂಡಕ್ಕೆ ಆಧಾರವಾಗಬಲ್ಲ ಆಟಗಾರ ರಿಜ್ವಾನ್. ಅಂತಾರಾಷ್ಟ್ರೀಯ ಟಿ20ಯಲ್ಲಿ 32 ಇನ್ನಿಂಗ್ಸ್‌ಗಳಲ್ಲಿ ಆಡಿರುವ ರಿಜ್ವಾನ್ 1065 ರನ್‌ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಪಾಕ್ ತಂಡದ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ. ಸದ್ಯ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ ರಿಜ್ವಾನ್. ಅಜೇಯ 104 ರನ್‌ ಇವರ ಹೈಯೆಸ್ಟ್ ಸ್ಕೋರ್ ಆಗಿದೆ. 48.48ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ರಿಜ್ವಾನ್ 129.09ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಪಾಕಿಸ್ತಾನ ತಂಡದ ಪರವಾಗಿ ಚುಟುಕು ಕ್ರಿಕೆಟ್‌ನಲ್ಲಿ ನಾಯಕ ಬಾಬರ್ ಅಜಂ ಜೊತೆ ಆರಂಬಿಕನಾಗಿ ಕಣಕ್ಕಿಳಿಯುವ ರಿಜ್ವಾನ್ ಪವರ್‌ಪ್ಲೇನಲ್ಲಿ ಭಾರತದ ತೀಕ್ಷ್ಣ ಬೌಲಿಂಗ್ ದಾಳಿಗೆ ಪ್ರತಿದಾಳಿ ನಡೆಸಲು ಯೋಜನೆಗಳನ್ನು ರೂಪಿಸಿರುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ರಿಜ್ವಾನ್ ಯಶಸ್ವಿಯಾದರೆ ಪಾಕಿಸ್ತಾನ ದೊಡ್ಡ ಮೊತ್ತ ದಾಖಲಿಸಲು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಟೀಮ್ ಇಂಡಿಯಾ ರಿಜ್ವಾನ್ ಮೇಲೆ ವಿಶೇಷ ನಿಗಾ ಇಡುವ ಅಗತ್ಯವಿದೆ.

ಬಾಬರ್ ಅಜಂ

ಬಾಬರ್ ಅಜಂ

ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಉತ್ತಮ ಆಟಗಾರಲ್ಲಿ ಒಬ್ಬರೆನಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಎಲ್ಲಾ ಮಾದರಿಯಲ್ಲಿಯೂ ಆಧಾರ ಸ್ಥಂಬ. ಅದರಲ್ಲೂ ಚುಟುಕು ಕ್ರಿಕೆಟ್‌ನಲ್ಲಿ ಬಾಬರ್ ಅಜಂ ಅತ್ಯುತ್ತಮ ದಾಖಲೆ ಹೊಂದಿದ್ದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಬ್ಯಾಟರ್. 56 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 46.89ರಷ್ಟು ಸರಾಸರಿ ಹಾಗೂ 130.64 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅದ್ಭುತವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಬಾಬರ್ ಅಜಂ ಪಾಕಿಸ್ತಾನ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.

ಮೊಹಮ್ಮದ್ ರಿಜ್ವಾನ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವ ಬಾಬರ್ ಅಜಂ ಭಾರತಕ್ಕೆ ಗಂಭೀರ ಅಪಾಯವನ್ನುಂಟು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ನಾಯಕನ ವಿಕೆಟ್ ಪಡೆಯಲು ವಿಶೇಷ ರಣತಂತ್ರವನ್ನು ರೂಪಿಸಿರುವುದರಲ್ಲಿ ಅನುಮಾನವಿಲ್ಲ. 27ರ ಹರೆಯದ ಪಾಕಿಸ್ತಾನ ತಂಡದ ನಾಯಕ ಭಾರತದ ಬೌಲಿಂಗ್ ದಾಳಿಯ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಈ ಮೂವರು ವಿಶ್ವದ ಅತ್ಯುತ್ತಮ ಆಟಗಾರರು ಎಂದ ಚೋಪ್ರ

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ

ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್ ಟೂರ್ನಿ ಯುಎಇನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗುವುದನ್ನು ಸಾಬೀತುಪಡಿಸಿದೆ. ಆದರೆ ಪಾಕಿಸ್ತಾನದ ಓರ್ವ ವೇಗದ ಬೌಲರ್ ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಅಪಾಯಕಾರಿಯಾಗುವ ಸಾಧ್ಯತಯಿದೆ. ಅದುವೇ ಶಾಹೀನ್ ಅಫ್ರಿದಿ. ಪಾಕಿಸ್ತಾನ ತಮಡದ ಪರವಾಗಿ ಇತ್ತೀಚೆಗೆ ಅದ್ಭುತವಾಗಿ ಪ್ರದರ್ಶನ ನಿಡುತ್ತಾ ಬಂದಿರುವ ಈ ಯುವ ವೇಗಿ ದುಬೈ ಅಂಗಳದಲ್ಲಿ ಭಾರತಕ್ಕೆ ಸಂಕಷ್ಟ ನೀಡುವ ಸಾಧ್ಯತೆಯಿದೆ.

145ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಶಾಹೀನ್ ಪಾಕಿಸ್ತಾನ ತಂಡಕ್ಕೆ ಸಾಕಷ್ಟು ಉತ್ತಮ ಯಶಸ್ಸನ್ನು ನೀಡಿದ್ದಾರೆ. ಈವರೆಗೆ 30 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿರುವ ಶಾಹೀನ್ 32 ವಿಕೆಟ್ ಸಂಪಾದಿಸಿದ್ದಾರೆ. 27.41ರ ಸರಾಸರಿಯನ್ನು ಹೊಂದಿದ್ದಾರೆ.

ಅವರ ರೀತಿಯ ಆಟಗಾರರು ತಂಡದಲ್ಲಿಲ್ಲ; ಭಾರತ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ಜೇಸನ್ ರಾಯ್

6 ಅಡಿ 6 ಇಂಚು ಎತ್ತರವಿರುವ ಈ ವೇಗಿ ಭಾರತೀಯ ಬ್ಯಾಟರ್‌ಗಳ ಪಾಲಿಗೆ ಖಂಡಿತಾ ದುಸ್ವಪ್ನವಾಗುವ ಅಪಾಯವಿದೆ. ಯುಎಇನ ನಿಧಾನಗತಿಯ ಪಿಚ್‌ಅನ್ನು ಉತ್ತಮವಾಗಿ ಬಳಸಿಕೊಂಡು ವೇಗದಲ್ಲಿ ಏರಿಳಿತ ಮಾಡುತ್ತಾ ನಿಖರ ದಾಳಿ ನಡೆಸಿದರೆ ಭಾರತದ ದಾಂಡಿಗರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಈ ಯುವ ವೇಗಿಯ ಮೇಲೆಯೂ ಭಾರತ ತಂಡ ವಿಶೇಷ ಕಣ್ಣಿಟ್ಟು ಯೋಜನೆಗಳನ್ನು ರೂಪಿಸಬೇಕಿದೆ. ಇದರಲ್ಲಿ ಯಶಸ್ವಿಯಾದರೆ ಭಾರತ ಪಾಕಿಸ್ತಾನದ ವಿರುದ್ಧ ಉತ್ತಮ ಯಶಸ್ಸು ಪಡೆಯುವುದರಲ್ಲಿ ಅನುಮಾನವಿಲ್ಲ.

ಭಾರತ ಹಾಗೂ ಪಾಕಿಸ್ತಾನದ ಸಂಪೂರ್ಣ ಸ್ಕ್ವಾಡ್

ಭಾರತ ಹಾಗೂ ಪಾಕಿಸ್ತಾನದ ಸಂಪೂರ್ಣ ಸ್ಕ್ವಾಡ್

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ

ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್

ಪಾಕಿಸ್ತಾನ ತಂಡ: ಬಾಬರ್ ಅಝಾಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಶೋಯೆಬ್ ಮಲಿಕ್

India vs Pakistan ಪಂದ್ಯದ ಬಗ್ಗೆ ಯಾರು ಏನು ಹೇಳಿದರು | Oneindia Kannada

For Quick Alerts
ALLOW NOTIFICATIONS
For Daily Alerts
Story first published: Friday, October 22, 2021, 11:08 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X