ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಗೆಲುವಿನಿಂದ ಬೀಗುತ್ತಿರುವ ಪಾಕಿಸ್ತಾನಕ್ಕೆ ತಡೆಯೊಡ್ಡುತ್ತಾ ಅಫ್ಘಾನಿಸ್ತಾನ

T20 World Cup: The potent spin attack of Afghanistan will put Pakistans high-flying position to test

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅದ್ಭುತ ಫಾರ್ಮ್‌ನಲ್ಲಿದೆ. ಸೂಪರ್ 12 ಹಂತದಲ್ಲಿ ಮೊದಲಿಗೆ ಭಾರತದ ವಿರುದ್ಧ ಅಮೋಘ ಗೆಲುವು ಸಾಧಿಸಿರುವ ಪಾಕಿಸ್ತಾನ ನಂತರ ನ್ಯೂಜಿಲೆಂಡ್ ತಂಡದ ವಿರುದ್ಧವೂ ಅದ್ಭುತ ಗೆಲುವು ಸಾಧಿಸಿದೆ. ಹೀಗೆ ಸತತ ಎರಡು ಗೆಲುವು ಪಡೆದು ಬೀಗುತ್ತಿರುವ ಬಾಬರ್ ಅಜಂ ಪಡೆ ಇದೀಗ ಮೂರನೇ ಸೆಣೆಸಾಟಕ್ಕೆ ಸಜ್ಜಾಗಿದೆ. ಈ ಕದನದಲ್ಲಿ ಪಾಕಿಸ್ತಾನಕ್ಕೆ ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನ ತಂಡ. ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ಅಫ್ಘಾನಿಸ್ತಾನ ತಂಡ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಪಾಕಿಸ್ತಾನಕ್ಕೆ ಯಾವ ರೀತಿಯ ಸವಾಲೊಡ್ಡಲಿದೆ ಎಂಬುದು ಈಗ ಕುತೂಹಲ ಹೆಚ್ಚಿಸಿದೆ.

ಸತತ ಎರಡು ಗೆಲುವುಗಳನ್ನು ಸಾಧಿಸಿರುವ ಪಾಕಿಸ್ತಾನ ಇದೀಗ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಟೂರ್ನಿಯ ಫೆವರೀಟ್ ತಂಡ ಎನಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ವಿರುದ್ಧ ಸಾಧಿಸಿದ ಗೆಲುವು ಪಾಕಿಸ್ತಾನ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ. ಆದರೆ ಅಫ್ಘಾನಿಸ್ತಾನ ತಂಡವನ್ನು ಪಾಕಿಸ್ತಾನ ಯಾವ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ವಿಶ್ವದರ್ಜೆಯ ಸ್ಪಿನ್ನರ್‌ಗಳ ಪಡೆಯೊಂದುಗೆ ಉತ್ತಮ ದಾಮಡಿಗರನ್ನು ಕೂಡಿರುವ ಅಫ್ಘಾನಿಸ್ತಾನ ಪಾಕಿಸ್ತಾನ ತಂಡಕ್ಕೆ ಎದುರೇಟು ನೀಡುವ ವಿಶ್ವಾಸದಲ್ಲಿದೆ.

ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ: ಕಂಬನಿ ಮಿಡಿದ ಕ್ರೀಡಾ ಜಗತ್ತುನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ: ಕಂಬನಿ ಮಿಡಿದ ಕ್ರೀಡಾ ಜಗತ್ತು

ಪಾಕಿಸ್ತಾನ ತಂಡ ತನ್ನ ವೇಗದ ಬೌಲಿಂಗ್ ದಾಳಿಯ ಮೂಲಕ ಈಗ ಎದುರಾಳಿಗಳಿಗೆ ಆತಂಕವನ್ನುಂಟು ಮಾಡಿದೆ. ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಹ್ಯಾರೀಸ್ ರವೂಫ್ ಅವರಂತಾ ಬೌಲರ್‌ಗಳ ಜೊತೆಗೆ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಕೂಡ ಎದುರಾಳಿಗೆ ಆಘಾತ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಇಮದ್ ವಾಸಿಂ ಹಾಗೂ ಶದಬ್ ಖಾನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಅಫ್ಘಾನಿಸ್ತಾನದ ಸ್ಪಿನ್ ದಾಳಿಯ ಬಗ್ಗೆ ಪಾಕ್ ಎಚ್ಚರಿಕೆ: ಇನ್ನು ಅಫ್ಘಾನಿಸ್ತಾನದ ಸ್ಪಿನ್ ಬೌಲಿಂಗ್ ವಿಭಾಗ ಎಷ್ಟು ಅಪಾಯಕಾರಿ ಎಂಬುದು ಪಾಕಿಸ್ತಾನ ತಂಡಕ್ಕೂ ಚೆನ್ನಾಗಿ ಅರಿವಿದೆ. ರಶೀದ್ ಖಾನ್ ತಂಡದಲ್ಲಿರುವುದು ಅಫ್ಘಾನಿಸ್ತಾನ ತಂಡವನ್ನು ಟಿ20 ಮಾದರಿಯಲ್ಲಿ ಅಪಾಯಕಾರಿ ತಂಡ ಎನಿಸುವಂತೆ ಮಾಡಿದೆ. ಅಲ್ಲದೆ ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್ ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ. ರಶೀದ್ ಖಾನ್ ಇತ್ತೀಚೆಗೆ ಅಂತ್ಯವಾದ ಐಪಿಎಲ್‌ನಲ್ಲಿಯೂ ಅತ್ಯಂತ ಎಕನಾಮಿಕಲ್ ಬೌಲರ್ ಎನಿಸಿದ್ದಾರೆ. ನಬಿ ಹಾಗೂ ಮುಜೀಬ್ ಉರ್ ರಹ್ಮಾನ್ ಕೂಡ ಯುಎಇ ಅಂಗಳದಲ್ಲಿ ಆಡಿದ ಉತ್ತಮ ಅನುಭವ ಹೊಂದಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಲೆಗ್‌ಸ್ಪಿನ್ ದಾಳಿಯ ಮೂಲಕ ಅತ್ಯಂತ ಪರಿಣಾಮಕಾರಿ ಎನಿಸಿದ್ದಾರೆ. ಉತ್ತಮ ವೇಗವೂ ರಶೀದ್ ಬೌಲಿಂಗ್‌ನಲ್ಲಿದ್ದು ಅದ್ಭುತವಾದ ನಿಯಂತ್ರಣ ಹೊಂದಿದ್ದಾರೆ. ಅಲ್ಲದೆ ಗೂಗ್ಲಿ ಎಸೆತಗಳ ಮೂಲಕ ಎದುರಾಳಿಯನ್ನು ಸುಲಭವಾಗಿ ಕೆಡವುವ ಸಾಮರ್ಥ್ಯ ಹೊಂದಿದ್ದಾರೆ.

ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!

ಇನ್ನು ಅಫ್ಘಾನಿಸ್ತಾ ತಂಡ ಈ ಪಂದ್ಯಕ್ಕೆ ಸ್ಕಾಟ್ಲೆಂಡ್ ತಂಡದ ವಿರುದ್ಧ ಸಾಧಿಸಿದ 130 ರನ್‌ಗಳ ಅಮೋಘ ಗೆಲುವಿನ ಮೂಲಕ ಕಣಕ್ಕಿಳಿಯುತ್ತಿದೆ. ಆದರೆ ಅಫ್ಘಾನಿಸ್ತಾನ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿಲ್ಲ. ಈ ಎರಡು ತಂಡಗಳು ಈವರೆಗೆ ಒಂದು ಬಾರಿ ಮಾತ್ರ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ ಪಾಕಿಸ್ತಾನ ತಂಡ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ಅಫ್ಘಾನಿಸ್ತಾನ ಸಂಪೂರ್ಣ ತಂಡ: ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಝಾಯ್, ಉಸ್ಮಾನ್ ಘನಿ, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಹಷ್ಮತುಲ್ಲಾ ಶಾಹಿದಿ, ಮೊಹಮ್ಮದ್ ಶಹಜಾದ್, ಮುಜೀಬ್ ಉರ್ ರಹಮಾನ್, ಕರೀಮ್ ಜನತ್, ಗುಲ್ಬದಿನ್ ನಾಯಬ್, ನವೀನ್ ಉಲ್ ಹಕ್, ಹಮೀದ್ ಹಸನ್, ಶರಫುದ್ದೀನ್ ಅಶ್ರಫ್, ದೌಲತ್ ಝದ್ರನ್, ಶಪೂರ್ ಝದ್ರಾನ್, ಕೈಸ್ ಅಹ್ಮದ್
ಮೀಸಲು ಆಟಗಾರರು: ಅಫ್ಸರ್ ಝಝಾಯಿ, ಫರೀದ್ ಅಹ್ಮದ್ ಮಲಿಕ್.

ಪಾಕಿಸ್ತಾನ ಸಂಪೂರ್ಣ ತಂಡ: ಬಾಬರ್ ಅಝಾಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಶೋಯೆಬ್ ಮಲಿಕ್

Story first published: Friday, October 29, 2021, 16:42 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X