ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ರಾಂತಿ ಬೇಕಾದರೆ ಐಪಿಎಲ್ ಆಡಬೇಡಿ, ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗನ ಸಲಹೆ

Team India Skipper Rohit Sharma Wants To Take Rest, Can Take In Indian Premeir League - Aakash Chopra

2023ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ, ಟೀಂ ಇಂಡಿಯಾ ನಾಯಕ ಸ್ಥಿರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕು. ರೋಹಿತ್ ಶರ್ಮಾಗೆ ವಿಶ್ರಾಂತಿ ಅಗತ್ಯವಿದ್ದರೆ ಐಪಿಎಲ್‌ನಿಂದ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಟೀಂ ಇಂಡಿಯಾ ಸದ್ಯ ಟಿ20 ಮತ್ತು ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ ಟಿ20 ತಂಡಕ್ಕೆ ನಾಯಕರಾಗಿದ್ದರೆ, ಶಿಖರ್ ಧವನ್ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡಿಸೆಂಬರ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರೆಯಲಿದ್ದಾರೆ.

ಉಮ್ರಾನ್ ಮಲಿಕ್‌ನ ಭವಿಷ್ಯ ಈ ಮಾದರಿಯಲ್ಲಿದೆ ಎಂದ ವಾಸಿಮ್ ಜಾಫರ್ಉಮ್ರಾನ್ ಮಲಿಕ್‌ನ ಭವಿಷ್ಯ ಈ ಮಾದರಿಯಲ್ಲಿದೆ ಎಂದ ವಾಸಿಮ್ ಜಾಫರ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಕಾಶ್ ಚೋಪ್ರಾ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತ ತಂಡಕ್ಕೆ ಹಲವು ನಾಯಕರು ನೇಮಕಗೊಂಡಿದ್ದಾರೆ, ಈ ಬಗ್ಗೆ ಮಾತನಾಡಿರುವ ಚೋಪ್ರಾ, ಇತರೆ ದೇಶಗಳಲ್ಲಿ ಈ ರೀತಿಯಿಲ್ಲ ಎಂದು ಹೇಳಿದ್ದಾರೆ.

ಭಾರತ ತಂಡ ಪ್ರಯೋಗ ಮಾಡುವ ಸಮಯ ಮುಗಿದಿದೆ ಎಂದು ಹೇಳಿರುವ ಆಕಾಶ್ ಚೋಪ್ರಾ. ಇನ್ನು ರೋಹಿತ್ ಶರ್ಮಾ ವಿಶ್ರಾಂತಿ ಪಡೆಯದೆ ಸತತವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಬೇಕು ಎಂದು ಹೇಳಿದ್ದಾರೆ.

ವಿಶ್ರಾಂತಿ ಬೇಕೆನಿಸದರೆ ಐಪಿಎಲ್ ಆಡಬೇಡಿ

ವಿಶ್ರಾಂತಿ ಬೇಕೆನಿಸದರೆ ಐಪಿಎಲ್ ಆಡಬೇಡಿ

2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಭಾರತ ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಬೇಕಿದೆ. ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಮುಗಿಯುವವರೆಗೆ ತಂಡದ ನಾಯಕರಾಗಿ ಇರಲಿದ್ದಾರೆ. ಅವರು ಈ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಬಾರದು. ಒಂದು ವೇಳೆ ವಿಶ್ರಾಂತಿ ಬೇಕೆಂದರೆ ಐಪಿಎಲ್‌ನಲ್ಲಿ ಆಡುವುದನ್ನು ಬಿಡಲಿ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಆದರೆ, ದೇಶಕ್ಕಾಗಿ ಆಡುವಾಗ ಐಪಿಎಲ್‌ ಮುಖ್ಯವಾಗಬಾರದು ಎಂದು ಹೇಳಿದ್ದಾರೆ.

IND vs NZ: ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 5ನೇ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ

ವಿವಿಧ ತಂಡಗಳ ಉದಾಹರಣೆ

ವಿವಿಧ ತಂಡಗಳ ಉದಾಹರಣೆ

ಇತ್ತಿಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್‌ ಮುಕ್ತಾಯದ ನಂತರ ನಡೆದ ಸರಣಿಯಲ್ಲಿ ನಿಯಮಿತ ನಾಯಕರೇ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ ಎಂದು ಆಕಾಶ್ ಚೋಪ್ರಾ ಉದಾಹರಣೆ ನೀಡಿದರು.

"ವಿಶ್ವಕಪ್ ಮುಗಿಯುತ್ತಿದ್ದಂತೆ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯನ್ನು ಆಡಿತು ಅಲ್ಲಿ ಜೋಸ್ ಬಟ್ಲರ್ ಅವರೇ ತಂಡದ ನಾಯಕರಾಗಿದ್ದರು. ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮ್ಮಿನ್ಸ್ ಮುಂದುವರೆಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡದ ನಾಯಕರು ಒಂದು ಪಂದ್ಯದಲ್ಲಿ ಮಾತ್ರ ವಿಶ್ರಾಂತಿ ಪಡೆದಿದ್ದರು.

ಶ್ರೀಲಂಕಾ ಕೂಡ ಸದ್ಯ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದೆ. ವಿಶ್ವಕಪ್‌ನಲ್ಲಿ ನಾಯಕನಾಗಿದ್ದ ದಸುನ್ ಶನಕ ಅವರೇ ತಂಡದ ನಾಯಕರಾಗಿದ್ದಾರೆ. ಇದೇ ರೀತಿ ರೋಹಿತ್ ಶರ್ಮಾ ಕೂಡ ಹೆಚ್ಚಿನ ವಿಶ್ರಾಂತಿ ಪಡೆಯದೆ ಆಡಬೇಕು ಎಂದು ಹೇಳಿದರು.

ಕೋಚ್ ಮತ್ತು ನಾಯಕ ಜವಾಬ್ದಾರಿ ತೆಗೆದುಕೊಳ್ಳಬೇಕು

ಕೋಚ್ ಮತ್ತು ನಾಯಕ ಜವಾಬ್ದಾರಿ ತೆಗೆದುಕೊಳ್ಳಬೇಕು

ಒಂದು ತಂಡವನ್ನು ಸಿದ್ಧಪಡಿಸುವ ಜವಾಬ್ದಾರಿ ನಾಯಕ ಮತ್ತು ಕೋಚ್ ಮೇಲಿರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಆಟಗಾರರ ಜೊತೆ ಹೆಚ್ಚಿನ ಸಮಯ ಕಳೆದಾಗ ಮಾತ್ರ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಅವರ ಬಗ್ಗೆ ತಿಳಿದುಕೊಂಡಾಗ ಮಾತ್ರ ತಂಡವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸತತ ನಾಲ್ಕು ಸರಣಿಗಳಲ್ಲಿ ಧವನ್ ಅವರಂತಹ ಸ್ಟ್ಯಾಂಡ್-ಇನ್ ನಾಯಕರು ತಂಡವನ್ನು ಮುನ್ನಡೆಸುವುದು ಸೂಕ್ತವಲ್ಲ ಎಂದು ಹೇಳಿದರು. "ಶಿಖರ್ ಧವನ್ ವೆಸ್ಟ್ ಇಂಡೀಸ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನಾಯಕರಾಗಿದ್ದರು. ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಅವರು ನಾಯಕರಾಗಿದ್ದಾರೆ. ಆದರೆ, ಬಾಂಗ್ಲಾದೇಶದ ಸರಣಿಗೆ ಅವರು ನಾಯಕ ಸ್ಥಾನವನ್ನು ಬಿಡಬೇಕಾಗುತ್ತದೆ. ಈ ರೀತಿಯ ಬದಲಾವಣೆಗಳು ತಂಡದ ಮೇಲೆ ಪರಿಣಾಮ ಬೀರುತ್ತದೆ" ಎಂದು ಆಕಾಶ್ ಚೋಪ್ರಾ ಹೇಳಿದರು.

Story first published: Saturday, November 26, 2022, 18:54 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X