IND vs NZ: ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 5ನೇ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಟಿಮ್ ಸೌಥಿ ಇದೀಗ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿಯನ್ನು ದಾಟಿದ್ದು, ಈ ಸಾಧನೆ ಮಾಡಿದ ಕಿವೀಸ್‌ನ ಐದನೇ ಬೌಲರ್ ಆಗಿದ್ದಾರೆ. ಆಕ್ಲೆಂಡ್‌ನಲ್ಲಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಈ ಮೈಲಿಗಲ್ಲನ್ನು ತಲುಪಿದರು.

ಮೊದಲ ಏಕದಿನ ಪಂದ್ಯದಲ್ಲಿ ಟಿಮ್ ಸೌಥಿ ಭಾರತ ವಿರುದ್ಧ 10 ಓವರ್‌ಗಳಲ್ಲಿ 73 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಅವರು 7.30ರ ಎಕಾನಮಿ ದರದಲ್ಲಿ ರನ್ ನೀಡಿದರು. ಭಾರತ ತಂಡದ ನಾಯಕ ಶಿಖರ್ ಧವನ್ (72) ಮತ್ತು ಶ್ರೇಯಸ್ ಅಯ್ಯರ್ (80) ಅವರ ಎರಡು ನಿರ್ಣಾಯಕ ವಿಕೆಟ್‌ ಮತ್ತು ಶಾರ್ದೂಲ್ ಠಾಕೂರ್ (1) ಅವರನ್ನು ಸಹ ಪೆವಿಲಿಯನ್‌ಗೆ ಕಳಿಸಿದರು.

IND vs NZ 2nd ODI: ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ?; ಸಂಭಾವ್ಯ ತಂಡಗಳುIND vs NZ 2nd ODI: ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ?; ಸಂಭಾವ್ಯ ತಂಡಗಳು

149 ಏಕದಿನ ಪಂದ್ಯಗಳಲ್ಲಿ ಟಿಮ್ ಸೌಥಿ 202 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಸರಾಸರಿ 33.83 ಮತ್ತು 33.83ರ ಎಕಾನಮಿ ದರದಲ್ಲಿ ವಿಕೆಟ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ 33 ರನ್‌ಗೆ 7 ವಿಕೆಟ್ ಆಗಿದೆ.

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 306 ರನ್

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 306 ರನ್

ಕ್ರಿಸ್ ಹ್ಯಾರಿಸ್ (203), ಕೈಲ್ ಮಿಲ್ಸ್ (240) ಮತ್ತು ಮಾಜಿ ಆಲ್‌ರೌಂಡರ್ ಡೇನಿಯಲ್ ವೆಟ್ಟೋರಿ (297) ವಿಕೆಟ್ ಟೇಕರ್ ಪಟ್ಟಿಯಲ್ಲಿ ಅವರಿಗಿಂತ ಮೇಲಿರುವ ನ್ಯೂಜಿಲೆಂಡ್ ಬೌಲರ್‌ಗಳಾಗಿದ್ದಾರೆ. ಕ್ರಿಸ್ ಕೇರ್ನ್ಸ್ ಸಹ ಏಕದಿನ ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದಾರೆ.

ಇನ್ನು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯದ ಅಂಕಿಅಂಶ ನೋಡುವುದಾದರೆ, ಶಿಖರ್ ಧವನ್ (72), ಶುಭಮನ್ ಗಿಲ್ (50) ಮತ್ತು ಶ್ರೇಯಸ್ ಅಯ್ಯರ್ (80) ಅವರ ಅರ್ಧಶತಕಗಳ ಜೊತೆಗೆ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ 37 ರನ್‌ಗಳ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 306 ರನ್ ಗಳಿಸಿತು.

ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ ಅಜೇಯ 145 ರನ್

ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ ಅಜೇಯ 145 ರನ್

ನ್ಯೂಜಿಲೆಂಡ್ ಪರ ಬೌಲಿಂಗ್‌ನಲ್ಲಿ ವೇಗಿ ಲ್ಯೂಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಇನ್ನು ಆಡಮ್ ಮಿಲ್ನೆ ಕೂಡ ಒಂದು ವಿಕೆಟ್ ಹಾರಿಸಿದರು.

307 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆತಿಥೇಯ ನ್ಯೂಜಿಲೆಂಡ್ 19.5 ಓವರ್‌ಗಳಲ್ಲಿ 88 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ ಅಜೇಯ 145 ರನ್ ಮತ್ತು ನಾಯಕ ಕೇನ್ ವಿಲಿಯಮ್ಸನ್ 98 ಎಸೆತಗಳಲ್ಲಿ ಔಟಾಗದೇ 94 ರನ್ ನೆರವಿನಿಂದ 221 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟವು ನ್ಯೂಜಿಲೆಂಡ್ ಗೆಲುವಿನ ಗಡಿ ದಾಟಲು ಕಾರಣವಾಯಿತು.

ಉಮ್ರಾನ್ ಮಲಿಕ್ 66 ರನ್ ನೀಡಿ 2 ವಿಕೆಟ್

ಉಮ್ರಾನ್ ಮಲಿಕ್ 66 ರನ್ ನೀಡಿ 2 ವಿಕೆಟ್

ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ ಉಮ್ರಾನ್ ಮಲಿಕ್ 66 ರನ್ ನೀಡಿ 2 ವಿಕೆಟ್ ಪಡೆದು ಭಾರತದ ಪರ ಮಿಂಚಿದರು. ಇನ್ನು ಶಾರ್ದೂಲ್ ಠಾಕೂರ್ ಕೂಡ ಒಂದು ವಿಕೆಟ್ ಪಡೆದರು. ಟಾಮ್ ಲ್ಯಾಥಮ್ ಅವರ ಸೊಗಸಾದ ಶತಕದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಭಾನುವಾರ, ನವೆಂಬರ್ 27ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ ಮತ್ತು ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್/ದೀಪಕ್ ಚಹಾರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

For Quick Alerts
ALLOW NOTIFICATIONS
For Daily Alerts
Story first published: Saturday, November 26, 2022, 18:35 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X