ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2025ಕ್ಕೆ ಪಾಕಿಸ್ತಾನಕ್ಕೆ ತೆರಳುವುದು ಟೀಂ ಇಂಡಿಯಾಗೆ ಸವಾಲಿನದ್ದಾಗಿದೆ: ಐಸಿಸಿ ಅಧ್ಯಕ್ಷ

ICC Chairman

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2031ರವರೆಗಿನ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನ ಪ್ರಕಟಿಸಿತು. ಯಾವ ದೇಶ ಯಾವ ಐಸಿಸಿ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ಬಹಿರಂಗಪಡಿಸಿತು. ಇದರಲ್ಲಿ ಭಾರತ ಮೂರು ಐಸಿಸಿ ಟೂರ್ನಿಗಳ ಆತಿಥ್ಯ ಪಡೆದುಕೊಂಡಿದೆ.

ಈಗ ಐಸಿಸಿಗೆ ಅಷ್ಟೇ ಅಲ್ಲದೆ ಬಿಸಿಸಿಐಗೂ ಕೂಡ ತಲೆ ನೋವಿನ ವಿಚಾರ ಆಗಿರೋದು ಪಾಕಿಸ್ತಾನದ ಆತಿಥ್ಯ. ಹೌದು 2025ರ ಐಸಿಸಿ ಚಾಂಪಿಯನ್ ಟ್ರೋಫಿ ಆತಿಥ್ಯವನ್ನ ಪಾಕಿಸ್ತಾನ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಭಾರತ ನಿಜಕ್ಕೂ ಪಾಕಿಸ್ತಾನದಲ್ಲಿ ಹೋಗಿ ಟೂರ್ನಿಯಲ್ಲಿ ಭಾಗಿಯಾಗುತ್ತಾ ಅನ್ನೋದು ಸಾಕಷ್ಟು ಪ್ರಶ್ನೆ ಮೂಡಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಸರಣಿಗಳಲ್ಲಿ ಉಭಯ ರಾಷ್ಟ್ರಗಳು ಭಾಗಿಯಾಗಿ ಎಷ್ಟೋ ವರ್ಷಗಳೇ ಉರುಳಿ ಹೋಗಿವೆ. ಹೀಗಾಗಿ ಅದೇ ಸಾಲಿನಲ್ಲಿ 2025ರಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ. ಆದ್ರೆ ಐಸಿಸಿ ನಿಜವಾಗಿಯೂ ಈ ವಿಚಾರದಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ: 'ಸಮಯ ಬಂದಾಗ ಅಂತಿಮ ನಿರ್ಧಾರ' ಎಂದ ಅನುರಾಗ್ ಠಾಕೂರ್!ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ: 'ಸಮಯ ಬಂದಾಗ ಅಂತಿಮ ನಿರ್ಧಾರ' ಎಂದ ಅನುರಾಗ್ ಠಾಕೂರ್!

ಇದರ ಜೊತೆಗೆ ಕ್ರಿಕೆಟ್‌ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಐಸಿಸಿ ಅಧ್ಯಕ್ಷರು ಹೇಳಿದ್ದಾರೆ.

"ಹೌದು, ಈ ಕೆಲಸ ಮಾಡುವುದು ನಿಜವಾಗಿಯೂ ಸವಾಲಿನ ಸಮಸ್ಯೆ ಎಂದು ನಮಗೆ ತಿಳಿದಿದೆ, ಆದರೆ ನನ್ನ ದೃಷ್ಟಿಕೋನದಿಂದ, ನಾನು ಭೌಗೋಳಿಕ ರಾಜಕೀಯ ಶಕ್ತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಕ್ರಿಕೆಟ್ ಒಂದು ಶಕ್ತಿಯಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಜನರು ಮತ್ತು ರಾಷ್ಟ್ರಗಳು ಒಗ್ಗೂಡಿಸಲು ಕ್ರೀಡೆಯು ಸಹಾಯ ಮಾಡಬಹುದು. ಸಂಬಂಧ ಸುಧಾರಿಸಲು ಅದು ಸಹಾಯ ಮಾಡಬಹುದಾದರೆ, ಅದು ಅದ್ಭುತವಾಗಿದೆ "ಎಂದು ಬಾರ್ಕ್ಲೇ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಯ ಆಕರ್ಷಣೆ ಕಡಿಮೆಯಾಗಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್, ದ್ವಿಪಕ್ಷೀಯ ಸರಣಿಗಳ ಆಕರ್ಷಣೆ ಎಂದಿಗೂ ಕಡಿಮೆಯಾಗುವುದಿಲ್ಲ ಮತ್ತು ದ್ವಿಪಕ್ಷೀಯ ಆಟಗಳ ವೇಗವನ್ನು ಉಳಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.

"ದ್ವಿಪಕ್ಷೀಯ ಕ್ರಿಕೆಟ್‌ನ ಮೋಡಿ ಹೋಗಲಿದೆ ಎಂದು ನಾನು ಭಾವಿಸುವುದಿಲ್ಲ. ನೀವು ವಿಭಿನ್ನ ಶ್ರೇಣಿಯ ಆಟಗಾರರನ್ನು ನೋಡುತ್ತೀರಿ, ನಿರ್ದಿಷ್ಟವಾಗಿ ಜನರು ಬಯೋ ಬಬಲ್ ಒಳಗೆ ಮತ್ತು ಹೊರಗೆ ಚಲಿಸುತ್ತಿರುವ ಕ್ಷಣದಲ್ಲಿ, ಆಟಗಾರರು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ಹೆಚ್ಚು ತಿರುಗುವುದನ್ನು ನೀವು ನೋಡುತ್ತೀರಿ ಆದರೆ ಇತ್ತೀಚೆಗೆ ಭಾರತದಲ್ಲಿ ಮುಕ್ತಾಯಗೊಂಡ ಸರಣಿಯ ಪ್ರತಿಕ್ರಿಯೆಯಿಂದ ನಿರ್ಣಯಿಸುವುದು, ಇದು ದ್ವಿಪಕ್ಷೀಯ ಕ್ರಿಕೆಟ್‌ನ ಆಕರ್ಷಣೆಯು ಹೆಚ್ಚು ಕಡಿಮೆಯಾಗಿದೆ ಎಂದು ತೋರುತ್ತಿಲ್ಲ" ಎಂದು ಅಲ್ಲಾರ್ಡಿಸ್ ಹೇಳಿದರು.

ಪಾಕಿಸ್ತಾನ ಮತ್ತು ಭಾರತ ಇತ್ತೀಚೆಗೆ 2021 ರ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅದರಲ್ಲಿ ಪಾಕಿಸ್ತಾನ ತಂಡವು, ವಿರಾಟ್ ಕೊಹ್ಲಿ ನೇತೃತ್ವದ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು.

ಭಾರತದಲ್ಲಿ ನಡೆಯಲಿದೆ ಮೂರು ಐಸಿಸಿ ಟೂರ್ನಮೆಂಟ್
ಭಾರತವು ಮುಂಬರುವ ವರ್ಷಗಳಲ್ಲಿ ಶ್ರೀಲಂಕಾದೊಂದಿಗೆ 2026ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆತಿಥ್ಯವಹಿಸಲಿದೆ. ಇದರ ನಂತರದಲ್ಲಿ ಬಾಂಗ್ಲಾದೇಶದೊಂದಿಗೆ 2029ರಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿ ಮತ್ತು 2031ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ ನಡೆಸಿಕೊಡಲಿದೆ. ಇದಕ್ಕೂ ಮುನ್ನ 2023ರಲ್ಲಿ ಮುಂಬರುವ ಐಸಿಸಿ 50 ಓವರ್‌ಗಳ ವಿಶ್ವಕಪ್‌ಗೆ ಭಾರತವೇ ಆತಿಥ್ಯ ವಹಿಸಲಿದ್ದು, 2011ರ ಬಳಿಕ ಐಸಿಸಿ 50 ಓವರ್‌ಗಳ ವಿಶ್ವಕಪ್ ಆತಿಥ್ಯ ಪಡೆಯಲಿದೆ.

ಇತರೆ ಐಸಿಸಿ ಟೂರ್ನಿಗಳ ಆತಿಥ್ಯ

ಆಡಮ್ ಝಂಪಾ ತಮ್ಮ ಹ್ಯಾಟ್ರಿಕ್ ತಪ್ಪಿಸಿದ್ದಕ್ಕೆ ಕಾಲೆಳದದ್ದು ಹೀಗೆ | Oneindia Kannada

2024ರ ಟಿ20 ವಿಶ್ವಕಪ್ ಯುಎಸ್‌ಎ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿದ್ದು, ಜೂನ್ ತಿಂಗಳಿನಲ್ಲಿ ಟೂರ್ನಮೆಂಟ್ ನಡೆಯಲಿದೆ. ಇನ್ನು 2027ರಲ್ಲಿ ಐಸಿಸಿ 50 ಓವರ್‌ಗಳ ವಿಶ್ವಕಪ್‌ ಆತಿಥ್ಯವನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ವಹಿಸಿಕೊಂಡಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 2028ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯವಹಿಸಿಕೊಂಡಿದೆ. ಇನ್ನು ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜೂನ್‌ನಲ್ಲಿ 2030ರ ಟಿ20 ವಿಶ್ವಕಪ್ ನಡೆಸಿಕೊಡಲಿದೆ.

Story first published: Monday, November 22, 2021, 21:24 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X