ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರಂಭಿಕರಾಗಿ ವೇಗವಾಗಿ 7500 ರನ್‌ ಗಡಿದಾಟಿದ 5 ಆಟಗಾರರು ಇವರು: ಈ ಪಟ್ಟಿಯಲ್ಲೂ ಭಾರತೀಯರದ್ದೇ ಮೇಲುಗೈ!

These five cricketers scored 7,500 ODI runs as an opener in less than 200 innings

ಏಕದಿನ ಮಾದರಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸುವುದು ಸುಲಭದ ಸವಾಲಲ್ಲ. ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಆಡುತ್ತಾ ತಂಡಕ್ಕೆ ಆರಂಭಿಕ ಯಶಸ್ಸು ಒದಗಿಸುವ ಮಹತ್ತರ ಜವಾಬ್ಧಾರಿಯಿದು. ಆ ದಿನ ಪಿಚ್ ಯಾವ ರೀತಿಯಾಗಿ ವರ್ತಿಸುತ್ತದೆ ಎಂಬುದರ ಅರಿವು ಇಲ್ಲದಿದ್ದರೂ ಅದನ್ನು ಅರ್ಥೈಸಿಕೊಂಡು ಆಡುವ ಹೊಣೆ ಆರಂಭಿಕರದಾಗಿರುತ್ತದೆ. ಈ ಜವಾಬ್ಧಾರಿಯಲ್ಲಿ ಸುದೀರ್ಘ ಕಾಲ ಮುಂದುವರಿಯುವುದು ನಿಜಕ್ಕೂ ದೊಡ್ಡ ಸವಾಲು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿಯುತ್ತಲೇ 7500ಕ್ಕೂ ಅಧಿಕ ರನ್‌ಗಳಿಸುವುದೆಂದರೆ ಅದು ಶ್ರೇಷ್ಠ ಸಾಧನೆ ಎಂಬುದಕ್ಕೆ ಅನುಮಾನವೇ ಇಲ್ಲ.

ಹಾಗಿದ್ದರೂ ಕೆಲವು ಶ್ರೇಷ್ಠ ಆಟಗಾರರು ಆರಂಭಿಕರಾಗಿ ಅದ್ಭುತ ಯಶಸ್ಸು ಸಾಧಿಸಿದ್ದು ಸುದೀರ್ಘ ಕಾಲ ಆರಂಬಿಕರಾಗಿ ಮುಂದುವರಿದು ತಂಡಕ್ಕೆ ನೆರವಾಗಿದ್ದಾರೆ. ಏಕದಿನ ಮಾದರಿಯಲ್ಲಿ ಆರಂಭಿಕರಾಗಿಯೇ ಕಣಕ್ಕಿಳಿದು 7500ಕ್ಕೂ ಅಧಿಕ ರನ್‌ಗಳಿಸಿದ ಆಟಗಾರರು ಇದ್ದಾರೆ. ಇಂದಿನ ಈ ವರದಿಯಲ್ಲಿ ಆರಂಬಿಕರಾಗಿ ಕಣಕ್ಕಿಳಿದು 200ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 7500ಕ್ಕೂ ಅಧಿಕ ರನ್‌ಗಳಿಸಿದ ಐವರು ಆಟಗಾರರ ಬಗ್ಗೆ ಮಾಹಿತಿಯನ್ನು ನೋಡೋಣ. ಹೆಮ್ಮೆಯ ಸಂಗತಿಯೆಂದರೆ ಐವರು ಆಟಗಾರರ ಈ ಪಟ್ಟಿಯಲ್ಲಿ ಮೂರು ಸ್ಥಾನಗಳು ಭಾರತೀಯರದ್ದೇ ಆಗಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್

ರೋಹಿತ್ ಶರ್ಮಾ, 149 ಇನ್ನಿಂಗ್ಸ್

ರೋಹಿತ್ ಶರ್ಮಾ, 149 ಇನ್ನಿಂಗ್ಸ್

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಆರಂಭಿಕರಾಗಿ ಅತ್ಯಂತ ವೇಗವಾಗಿ 7500 ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ 149 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು 150ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿದ್ದಾರೆ.

ಹಾಶೀಮ್ ಆಮ್ಲ, 158 ಇನ್ನಿಂಗ್ಸ್

ಹಾಶೀಮ್ ಆಮ್ಲ, 158 ಇನ್ನಿಂಗ್ಸ್

ದಕ್ಷಿಣ ಆಫ್ರಿಕಾ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಹಾಶಿಮ್ ಆಮ್ಲ ಈ ಪಟ್ಟಿಯಲ್ಲಿರುವ ಎರಡನೇ ಆಟಗಾರ. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಅನೇಕ ದಾಖಲೆಗಳನ್ನು ಹೊಂದಿರುವ ಈ ಆಟಗಾರ ಆರಂಭಿಕನಾಗಿಯೂ ಉತ್ತಮ ಯಶಸ್ಸು ಸಾಧಿಸಿದ್ದಾರೆ. ಅತ್ಯದ್ಭುತ ಸ್ಥಿರತೆ ಹೊಂದಿದ್ದ ಈ ಆಟಗಾರ ಆರಂಭಿಕನಾಗಿ ಕಣಕ್ಕಿಳಿದು 158 ಇನ್ನಿಂಗ್ಸ್‌ಗಳಲ್ಲಿ 7500 ರನ್‌ಗಳ ಮೈಲಿಗಲ್ಲು ದಾಟಿದ್ದಾರೆ.

ಸಚಿನ್ ತೆಂಡೂಲ್ಕರ್, 170 ಇನ್ನಿಂಗ್ಸ್

ಸಚಿನ್ ತೆಂಡೂಲ್ಕರ್, 170 ಇನ್ನಿಂಗ್ಸ್

ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರಲ್ಲಿ ಒಬ್ಬರೆನಿಸಿರುವ ಸಚಿನ್ ತೆಂಡೂಲ್ಕರ್ ಆರಂಭಿಕನಾಗಿ ಸಾಕಷ್ಟು ದೊಡ್ಡ ದಾಖಲೆ ಬರೆದುಕೊಂಡಿದ್ದಾರೆ. ಇನ್ನು ಆರಂಬಿಕನಾಗಿ 7500 ರನ್‌ಗಳ ಗಡಿ ದಾಟಲು ಸಚಿನ್ ತೆಂಡೂಲ್ಕರ್ 170 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿಯುವ ಮುನ್ನ ಈ ಸಾಧನೆಯನ್ನು ವೇಗವಾಗಿ ಮಾಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನದಲ್ಲಿದ್ದರು.

ಸೌರವ್ ಗಂಗೂಲಿ, 182 ಇನ್ನಿಂಗ್ಸ್

ಸೌರವ್ ಗಂಗೂಲಿ, 182 ಇನ್ನಿಂಗ್ಸ್

ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಕೂಡ ಭಾರತ ಕಂಡ ಅದ್ಭುತ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆರಂಭಿಕರಾಗಿ ಅತ್ಯಂತ ವೇಗವಾಗಿ 7500 ರನ್‌ಗಳ ಗಡಿದಾಟಿದ ಆಟಗಾರರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಸಾಧನೆಯನ್ನು ವೇಗವಾಗಿ ಮಾಡಿದ ಐವರು ಆಟಗಾರರ ಪಟ್ಟಿಯಲ್ಲಿ ಗಂಗೂಲಿ ನಾಲ್ಕನೇ ಸ್ಥಾನದಲ್ಲಿದ್ದು ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರನೂ ಹೌದು. ಗಂಗೂಲಿ 182 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ.

ಕ್ರಿಸ್ ಗೇಲ್, 192 ಇನ್ನಿಂಗ್ಸ್

ಕ್ರಿಸ್ ಗೇಲ್, 192 ಇನ್ನಿಂಗ್ಸ್

ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕ್ರಿಸ್ ಗೇಲ್ ಈ ದಾಖಲೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಐದನೇ ಆಟಗಾರ. ಆರಂಭಿಕ ಆಟಗಾರನಾಗಿ 7500 ರನ್‌ಗಳ ಗಡಿದಾಟಲು ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕ್ರಿಸ್ ಗೇಲ್ 192 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Story first published: Wednesday, January 11, 2023, 10:28 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X