ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಿರಿಮನ್ನೆ, ಸಂಗಕ್ಕಾರ ಶತಕ, ಇಂಗ್ಲೆಂಡ್ ಗೆ ಹೀನಾಯ ಸೋಲು

ವೆಲ್ಲಿಂಗ್ ಟನ್, ಮಾ. 1 : ಕುಮಾರ್ ಸಂಗಕ್ಕಾರ ಮತ್ತು ಲಹಿರು ತಿರಿಮನ್ನೆ ಶತಕಗಳ ನೆರವಿನಿಂದ ಶ್ರೀಲಂಕಾ ಇಂಗ್ಲೆಂಡ್ ನ್ನು 9 ವಿಕೆಟ್ ಗಳ ಅಂತರದಲ್ಲಿ ಬಗ್ಗುಬಡಿದಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಶ್ರೀಲಂಕಾಕ್ಕೆ 310 ರನ್ ಗಳ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್ ಪರ ಜೋ ರೂಟ್ 121 ರನ್ ಗಳಿಸಿ ಮಿಂಚಿದ್ದರು. ಇದಕ್ಕೆ ಉತ್ತರವಾಗಿ ಚೇಸಿಂಗ್ ಗೆ ಇಳಿದ ಲಂಕನ್ನರು ಯಾವ ಹಂತದದಲ್ಲೂ ಪಂದ್ಯವನ್ನು ಕೈ ಜಾರುವಂತೆ ಮಾಡಿಕೊಳ್ಳಲಿಲ್ಲ.

cricket

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ತಮ್ಮ 401ನೇ ಪಂದ್ಯದಲ್ಲಿ ಸತತ ಎರಡನೇ ಶತಕ ಗಳಿಸಿದ ಸಂಗಕ್ಕಾರ(117) ಮತ್ತು ಸಮಯೋಚಿತ ಆಟ ಆಡಿದ ಲಹಿರು ತಿರಿಮನ್ನೆ[139]ಶ್ರೀಲಂಕಾವನ್ನು ಗೆಲುವಿನ ದಡ ಸೇರಿಸಿದರು.

ತಿಲಕರತ್ನ ದಿಲ್ಶನ್‌ ಮತ್ತು ಲಹಿರು ತಿರಿಮನ್ನೆ ಮೊದಲ ವಿಕೆಟ್‌ಗೆ 100 ರನ್‌ ಜೊತೆಯಾಟವಾಡಿದರು. ದಿಲ್ಶನ್‌ 44 ರನ್‌ ಗಳಿಸಿ ಔಟಾದರು . ಬಳಿಕ ಕ್ರೀಸ್ ಗೆ ಇಳಿದ ಸಂಗಕ್ಕಾರ ಇಂಗ್ಲೆಂಡ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. 70 ಎಸೆತಗಳಲ್ಲಿ ನ್ಪೋಟಕ ಶತಕ ಸಿಡಿಸಿದ ಸಂಗಕ್ಕಾರ ತಮ್ಮ ಕ್ರಿಕೆಟ್‌ ಜೀವನದ ಅತೀವೇಗದ ಶತಕ ದಾಖಲಿಸಿದರು. 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ಮೂಲಕ 117 ರನ್‌ಗಳಿಸಿ ಅಜೇಯರಾಗಿ ಉಳಿದರು.

ಬ್ಯಾಟಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಲಂಕನ್ನರು ಇನ್ನು 16 ಚೆಂಡುಗಳು ಬಾಕಿ ಇರುವಂತೆ ಗೆಲುವು ದಕ್ಕಿಸಿಕೊಂಡರು. ಈ ಸೋಲಿನಿಂದ ಇಂಗ್ಲೆಂಡ್ ಗೆ ಕ್ಯಾಟರ್ ಫೈನಲ್ ಹಾದಿ ಕಠಿಣವಾಗಿದೆ ಎಂದೇ ಹೇಳಬಹುದು.

[ಪಂದ್ಯದ ಸ್ಕೋರ್ ಕಾರ್ಡ್]

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X