TNPL 2022: ಮಧ್ಯದ ಬೆರಳು ತೋರಿಸಿದ್ದ ಸಿಎಎಸ್‌ಕೆ ಆಟಗಾರನಿಗೆ ಬಂದ ಪರಿಸ್ಥಿತಿ ನೋಡಿ

ನಿನ್ನೆಯಿಂದ ( ಜೂನ್ 23 ) ತಮಿಳುನಾಡು ಪ್ರೀಮಿಯರ್ ಲೀಗ್ ಆರನೇ ಆವೃತ್ತಿ ಆರಂಭಗೊಂಡಿದ್ದು, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳ ನಡುವೆ ಟೂರ್ನಿಯ ಪ್ರಥಮ ಪಂದ್ಯ ತಿರುನೆಲ್ವೇಲಿಯ ಸಿಮೆಂಟ್ ಕಂಪೆನಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರುಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ಬಾರಿಸಿ ಶತಕ ಮಿಸ್ ಮಾಡಿಕೊಂಡ ಸಕ್ರಿಯ ಆಟಗಾರರಿವರು

ಈ ಬಾರಿಯ ಟೂರ್ನಿಯ ಪ್ರಥಮ ಪಂದ್ಯವೇ ಸೂಪರ್ ಓವರ್ ರೋಚಕತೆಗೆ ಸಾಕ್ಷಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆಲ್ಲೈ ರಾಯಲ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ಅತ್ತ ನೆಲ್ಲೈ ರಾಯಲ್ ಕಿಂಗ್ಸ್ ನೀಡಿದ್ದ 185 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲಿಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಚೆನ್ನೈ ಸೂಪರ್ ಗಿಲ್ಲೀಸ್ ವಿರುದ್ಧ ನೆಲ್ಲೈ ರಾಯಲ್ ಕಿಂಗ್ಸ್ ಜಯ ಸಾಧಿಸಿತು.

ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಪೂರೈಸಿ ಅಬ್ಬರಿಸಿರುವ ಮೂವರು ಆಟಗಾರರಿವರುಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 4000 ರನ್ ಪೂರೈಸಿ ಅಬ್ಬರಿಸಿರುವ ಮೂವರು ಆಟಗಾರರಿವರು

ಇನ್ನು ಈ ಪಂದ್ಯ ರೋಚಕ ಹಣಾಹಣಿಯ ಜತೆಗೆ ವಿವಾದಕ್ಕೂ ಕೂಡ ವೇದಿಕೆಯಾಯಿತು. ಚೆನ್ನೈ ಸೂಪರ್ ಗಿಲ್ಲೀಸ್ ತಂಡದ ಆರಂಭಿಕ ಆಟಗಾರ ಎನ್ ಜಗದೀಶನ್ ಪಂದ್ಯದ ವೇಳೆ ಎದುರಾಳಿ ಆಟಗಾರನ ಜತೆ ಅನುಚಿತವಾಗಿ ವರ್ತಿಸಿ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೌದು, ಎದುರಾಳಿ ತಂಡದ ಬೌಲರ್ ಬಾಬಾ ಅಪರಾಜಿತ್ ಅವರಿಗೆ ಮಧ್ಯದ ಬೆರಳನ್ನು ತೋರಿಸಿ ಎನ್ ಜಗದೀಶನ್ ಮೈದಾನದಲ್ಲಿಯೇ ಉದ್ಧಟತನ ಮೆರೆದಿದ್ದರು.

ಮಂಕಡ್ ರನ್ ಔಟ್ ಮಾಡಿದ್ದಕ್ಕೆ ಆಕ್ರೋಶ

ಮಂಕಡ್ ರನ್ ಔಟ್ ಮಾಡಿದ್ದಕ್ಕೆ ಆಕ್ರೋಶ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಎನ್ ಜಗದೀಶನ್ ಚೆನ್ನೈ ಸೂಪರ್ ಗಿಲ್ಲೀಸ್ ಪರ ಆರಂಭಿಕನಾಗಿ ಕಣಕ್ಕಿಳಿದು 15 ಎಸೆತಗಳಲ್ಲಿ 25 ರನ್ ಕಲೆಹಾಕಿ ಬಾಬಾ ಅಪರಾಜಿತ್ ಓವರ್‌ನಲ್ಲಿ ಮಂಕಡ್ ರನ್ ಔಟ್‌ಗೆ ಬಲಿಯಾದರು. ಈ ಸಂದರ್ಭದಲ್ಲಿ ತೀವ್ರ ಬೇಸರಕ್ಕೊಳಗಾದ ಎನ್ ಜಗದೀಶನ್ ಮೈದಾನ ತೊರೆಯುವಾಗ ಅನೇಕ ಬಾರಿ ಮಧ್ಯದ ಬೆರಳನ್ನು ತೋರಿಸುತ್ತಾ ಹೊರನಡೆದರು. ಎನ್ ಜಗದೀಶನ್ ಅವರ ಈ ವರ್ತನೆಗೆ ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದರು, ಮಂಕಡ್ ರನ್ ಔಟ್ ನ್ಯಾಯಯುತ ಎಂದು ಘೋಷಣೆಯಾದ ನಂತರವೂ ಎನ್ ಜಗದೀಶನ್ ಈ ರೀತಿ ವರ್ತಿಸುವುದು ತಪ್ಪು ಎಂದು ಜಗದೀಶನ್ ನಡೆಯನ್ನು ಖಂಡಿಸಿದರು.

ಕ್ಷಮೆಯಾಚಿಸಿದ ಜಗದೀಶನ್

ಪಂದ್ಯದ ವೇಳೆ ಮಧ್ಯದ ಬೆರಳು ತೋರಿಸಿದ್ದು ನನ್ನ ತಪ್ಪಾಗಿದೆ ಎಂದು ಎನ್ ಜಗದೀಶನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ಆಟಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ನಾನು ಕ್ರೀಡಾಪಟುತ್ವವನ್ನು ಹೆಚ್ಚು ಗೌರವಿಸುತ್ತೇನೆ, ಹೀಗಾಗಿ ನನಗೆ ಮಂಕಡ್ ರನ್ ಔಟ್‌ನ್ನು ಸಹಿಸಿಕೊಳ್ಳಲು ಆಗಲಿಲ್ಲ ಆದ್ದರಿಂದ ಆ ರೀತಿ ಪ್ರತಿಕ್ರಿಯಿಸಿದೆ, ಈಗ ನನ್ನ ತಪ್ಪಿನ ಅರಿವಾಗಿದೆ ಹಾಗೂ ಅದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದು ಎನ್ ಜಗದೀಶನ್ ಬರೆದುಕೊಂಡಿದ್ದಾರೆ.

ರೋಚಕ ಸೂಪರ್ ಓವರ್

ರೋಚಕ ಸೂಪರ್ ಓವರ್

ಇನ್ನು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಗಿಲ್ಲೀಸ್ 9 ರನ್ ಕಲೆಹಾಕಿ ನೆಲ್ಲೈ ರಾಯಲ್ ಕಿಂಗ್ಸ್‌ಗೆ 10 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು 5 ಎಸೆತಗಳಲ್ಲಿ ಪೂರೈಸಿದ ನೆಲ್ಲೈ ರಾಯಲ್ ಕಿಂಗ್ಸ್ ಪಂದ್ಯವನ್ನು ಗೆದ್ದು ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 24, 2022, 22:48 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X