ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭರ್ಜರಿ ಫೀಲ್ಡಿಂಗ್ ಮೂಲಕ ಶತಕವೀರ ಸ್ಮಿತ್ ವಿಕೆಟ್ ಕೆಡವಿದ ಜಡ್ಡುಗೆ ನೆಟ್ಟಿಗರ ಪ್ರಶಂಸೆ

Twitterati hail Ravindra Jadeja as he runs Steve Smith out with a direct-hit

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದರೆ. ಟೆಸ್ಟ್ ಕ್ರಿಕೆಟ್‌ನ 27ನೇ ಶತಕ ಸಿಡಿಸುವ ಮೂಲಕ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಇನ್ನಿಂಗ್ಸ್‌ಗೆ ಆಸರೆಯಾದರು. ಈ ಮೂಲಕ ಆಸ್ಟ್ರೇಲಿಯಾ ಮುನ್ನೂರು ರನ್‌ಗಳ ಗಡಿಯನ್ನು ದಾಟಲು ಕಾರಣರಾದರು.

ಸ್ಟೀವ್ ಸ್ಮಿತ್ ಮೂರನೇ ಟೆಸ್ಟ್‌ನಲ್ಲಿ 131 ರನ್‌ಗಳ ಭರ್ಜರಿ ಪ್ರದರ್ಶನವನ್ನು ನೀಡಿದರು. ಈ ಮೂಲಕ ಮತ್ತಷ್ಟು ರನ್ ಆಸಿಸ್ ಪಡೆಯ ಖಾತೆಗೆ ಸೇರಿಸುವ ಉದ್ದೇಶವನ್ನಿಟ್ಟುಕೊಂಡಿದ್ದರು. ಆದರೆ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅದ್ಭುತವಾದ ಥ್ರೋ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಆಸಿಸ್ ಇನ್ನಿಂಗ್ಸ್‌ನ ಅಂತ್ಯಕ್ಕೆ ಕಾರಣರಾದರು.

ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್

ಸ್ಟೀವ್ ಸ್ಮಿತ್ 130 ರನ್ ಗಳಿಸಿದ್ದ ವೇಳೆ ಎರಡು ರನ್ ಗಳಿಸುವ ಪ್ರಯತ್ನವನ್ನು ನಡೆಸಿದ್ದರು. ಮೊದಲ ರನ್‌ಅನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ರನ್‌ಗೆ ಓಟಕ್ಕಿತ್ತರು. ಈ ವೇಳೆ ಚೆಂಡು ಫೀಲ್ಡರ್ ರವೀಂದ್ರ ಜಡೇಜಾ ಕೈಗೆ ತಲುಪಿತ್ತು. ಜಡೇಜಾ ಚೆಂಡನ್ನು ನೇರವಾಗಿ ಗುರಿಯಿಟ್ಟು ಸ್ಟ್ರೈಕರ್ ತುದಿಯ ವಿಕೆಟ್‌ಗೆ ಎಸೆದರು. ಅದು ವಿಕೆಟ್ ಹಾರಿಸುವ ಮೂಲಕ ಸ್ಮಿತ್ ಅವರ ಅದ್ಭುತ ಇನ್ನಿಂಗ್ಸ್ ಅಂತ್ಯಗೊಳಿಸಿತು. ಅಲ್ಲಿಗೆ ಸ್ಮಿತ್ 131 ರನ್ ಗಳಿಸಿದ್ದರು.

ಜಡೇಜಾ ಅವರ ಈ ಫೀಲ್ಡಿಂಗ್‌ಗೆ ಅಭಿಮಾನಿಗಳು ಮನಸೋತಿದ್ದು ಟ್ವಿಟ್ಟರ್‌ನಲ್ಲಿ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದೆ.

ರವೀಂದ್ರ ಜಡೇಜಾ ಸ್ಟೀವ್ ಸ್ಮಿತ್ ಅವರನ್ನು ರನೌಟ್ ಮಾಡುವ ಮುನ್ನ ಬೌಲಿಂಗ್‌ನಲ್ಲೂ ಭಾರತಕ್ಕೆ ಉತ್ತಮ ಯಶಸ್ಸನ್ನು ನೀಡಿದರು. ಟೀಮ್ ಇಂಡಿಯಾ ಪರವಾಗಿ ಜಡೇಜಾ ಆಸ್ಟ್ರೇಲಿಯಾದ 4 ವಿಕೆಟ್ ಕಿತ್ತಿದ್ದಾರೆ. ಮೊದಲ ದಿನದಾಟದಲ್ಲಿ ಬೌಲಿಂಗ್ ಮಾಡಲು ಜಡೇಜಾ ಹೆಚ್ಚಿನ ಅವಕಾಶವನ್ನು ಪಡೆದಿರಲಿಲ್ಲ. ಎರಡನೇ ದಿನದಲ್ಲಿ 91 ರನ್ ಗಳಿಸಿದ್ದ ಲಾಬುಶೇನ್ ಅವರನ್ನು 91 ರನ್‌ಗೆ ಔಟ್ ಮಾಡಿ ಮೊದಲ ಯಶಸ್ಸು ನೀಡಿದರು.

ಅದಾದ ಬಳಿಕ ಜಡೇಜಾ ಮ್ಯಾಥ್ಯೂ ವೇಡ್ ವಿಕೆಟ್ ಪಡೆದು ಆಸ್ಟ್ರೇಲಿಯಾಗೆ ಮತ್ತೊಂದು ಆಘಾತವನ್ನು ನೀಡಿದ್ದರು. ಬಳಿಕ ಪ್ಯಾಟ್ ಕಮ್ಮಿನ್ಸ್ ಹಾಗೂ ನಥನ್ ಲಿಯಾನ್ ಕೂಡ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದರು.

Story first published: Friday, January 8, 2021, 14:24 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X