ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 Women's T20 World Cup: ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತದ ಮೂವರು ಆಟಗಾರ್ತಿಯರು

U-19 Womens T20 World Cup 2023: 3 Indian Women Players Named In ICC T20 Squad

2023ರ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯನ್ನು ಭಾರತ ಮಹಿಳೆಯರು ಎತ್ತಿ ಹಿಡಿದರು.

ನೂತನ ಟಿ20 ವಿಶ್ವಕಪ್ ಚಾಂಪಿಯನ್ ಭಾರತದ ನಾಯಕಿ ಶಫಾಲಿ ವರ್ಮಾ, ಆರಂಭಿಕ ಜೊತೆಗಾರ್ತಿ ಶ್ವೇತಾ ಸೆಹ್ರಾವತ್ ಮತ್ತು ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ ಸೇರಿದಂತೆ ಮೂವರು ಭಾರತೀಯ ಆಟಗಾರ್ತಿಯರು ಸೋಮವಾರ ಬಿಡುಗಡೆಯಾದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

ಭಾನುವಾರ, ಜನವರಿ 29ರಂದು ನಡೆದ ಅಂಡರ್-19 ಟಿ20 ವಿಶ್ವಕಪ್‌ನ ಚೊಚ್ಚಲ ಪ್ರಶಸ್ತಿಗೆ ಭಾರತ ವನಿತೆಯರ ತಂಡವನ್ನು ಶಫಾಲಿ ವರ್ಮಾ ಮುನ್ನಡೆಸಿದರು. ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಐಸಿಸಿ ಟ್ರೋಫಿ ಗೆದ್ದ ಭಾರತದ ಮೊದಲ ನಾಯಕಿ ಎನಿಸಿದರು.

U-19 Womens T20 World Cup 2023: 3 Indian Women Players Named In ICC T20 Squad

ಸ್ಫೋಟಕ ಆರಂಭಿಕ ಬ್ಯಾಟಿಂಗ್‌ನೊಂದಿಗೆ ಮತ್ತು ನಾಯಕನಾಗಿ ಯುದ್ಧತಂತ್ರದ ಜಾಣತನವನ್ನು ಶಫಾಲಿ ವರ್ಮಾ ಪ್ರದರ್ಶಿಸಿದರು. ಯುಎಇ ವಿರುದ್ಧ ಶಫಾಲಿ 34 ಎಸೆತಗಳಲ್ಲಿ 78 ರನ್ ಗಳಿಸಿದ್ದು, ಅದರಲ್ಲಿ 12 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಐಸಿಸಿ ಅಂಡರ್-19 ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 172 ರನ್‌ಗಳೊಂದಿಗೆ ಶಫಾಲಿ ವರ್ಮಾ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದರು.

ನಾಯಕಿ ಶಫಾಲಿ ವರ್ಮಾ ಬೌಲಿಂಗ್‌ನಲ್ಲಿ ಕೂಡ ಉಪಯುಕ್ತ ಕೊಡುಗೆ ನೀಡಿದರು. ಏಳು ಪಂದ್ಯಗಳಲ್ಲಿ 5.04ರ ಎಕಾನಮಿ ದರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಇನ್ನು ಆರಂಭಿಕ ಮತ್ತು ಸ್ಫೋಟಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಅವರು ತಮ್ಮ ಹಿರಿಯರ ತಂಡದ ಆಟಗಾರ್ತಿ ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರನ್ನು ಮೀರಿಸಿ, 99ರ ಸರಾಸರಿ ಮತ್ತು 139.43ರ ಸ್ಟ್ರೈಕ್‌ರೇಟ್‌ನಲ್ಲಿ 297 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

U-19 Womens T20 World Cup 2023: 3 Indian Women Players Named In ICC T20 Squad

ಇನ್ನು ಬೌಲರ್ ಪಾರ್ಶವಿ ಚೋಪ್ರಾ ಭಾರತದ ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದರು. ಆದರೆ ನಂತರದ ಪಂದ್ಯಗಳಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಪಾರ್ಶವಿ ಚೋಪ್ರಾ ಆರು ಪಂದ್ಯಗಳಲ್ಲಿ 11 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಿಕೊಂಡರು.

ಅಂತಿಮ ಸೂಪರ್ ಸಿಕ್ಸ್ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ ಶ್ರೀಲಂಕಾ ವಿರುದ್ಧ 5 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಅವರು 20 ರನ್ ನೀಡಿ 3 ವಿಕೆಟ್ ಮತ್ತು ಫೈನಲ್‌ನಲ್ಲಿ 13 ರನ್ ನೀಡಿ 2 ವಿಕೆಟ್‌ಗಳೊಂದಿಗೆ ಪಂದ್ಯ ವಿಜೆತ ಪ್ರದರ್ಶನ ನೀಡಿದರು.

IND vs NZ: ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್IND vs NZ: ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್

ಇನ್ನು ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಇಂಗ್ಲೆಂಡ್‌ನ ಗ್ರೇಸ್ ಸ್ಕ್ರಿವೆನ್ಸ್ ನಾಯಕತ್ವದ ತಂಡದಲ್ಲಿ ಅವರದೇ ದೇಶದ ಹನ್ನಾ ಬೇಕರ್ ಮತ್ತು ಎಲ್ಲೀ ಆಂಡರ್ಸನ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ನ್ಯೂಜಿಲೆಂಡ್‌ನ ಜಾರ್ಜಿಯಾ ಪ್ಲಿಮ್ಮರ್, ಶ್ರೀಲಂಕಾದ ದೇವ್ಮಿ ವಿಹಂಗಾ, ಬಾಂಗ್ಲಾದೇಶದ ಶೋರ್ನಾ ಅಕ್ಟರ್, ದಕ್ಷಿಣ ಆಫ್ರಿಕಾದ ಕರಾಬೊ ಮೆಸೊ, ಆಸ್ಟ್ರೇಲಿಯಾದ ಮ್ಯಾಗಿ ಕ್ಲಾರ್ಕ್ ಮತ್ತು ಪಾಕಿಸ್ತಾನದ ಅನೋಶಾ ನಾಸಿರ್ ಸ್ಥಾನ ಗಿಟ್ಟಿಸಿದ್ದಾರೆ.

Story first published: Monday, January 30, 2023, 21:39 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X