ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 Women's World Cup 2023: ಸ್ಕಾಟ್ಲೆಂಡ್ ಮಣಿಸಿ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಭಾರತ

U-19 Womens T20 World Cup: India Beat Scotland Enter To Super Six Round

ಜನವರಿ 18ರ ಬುಧವಾರ ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ವಿಲೋಮೋರ್ ಪಾರ್ಕ್‌ನಲ್ಲಿ ನಡೆದ 19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮಹಿಳಾ ತಂಡದ ವಿರುದ್ಧ 83 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತದ ಮಹಿಳಾ ತಂಡ ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶ ಪಡೆದಿದೆ.

ಟಾಸ್ ಗೆದ್ದ ಭಾರತದ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಗೊಂಗಾಡಿ ತ್ರಿಶಾ, ರಿಚಾ ಗೋಷ್ ಮತ್ತು ಶ್ವೇತಾ ಶೆರವಾತ್‌ರ ಉತ್ತಮ ಇನ್ನಿಂಗ್ಸ್ ನೆರವಿನಿಂದ ಭಾರತ 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.

IND Vs NZ 1st ODI: ಶಾರ್ದೂಲ್ ಠಾಕೂರ್ ಕೊನೆ ಓವರ್ ಮ್ಯಾಜಿಕ್: ರಣರೋಚಕ ಪಂದ್ಯದಲ್ಲಿ ಗೆದ್ದ ಭಾರತIND Vs NZ 1st ODI: ಶಾರ್ದೂಲ್ ಠಾಕೂರ್ ಕೊನೆ ಓವರ್ ಮ್ಯಾಜಿಕ್: ರಣರೋಚಕ ಪಂದ್ಯದಲ್ಲಿ ಗೆದ್ದ ಭಾರತ

ಆರಂಭಿಕ ಬ್ಯಾಟರ್ ಗೊಂಗಾಡಿ ತ್ರಿಶಾ ಅತ್ಯುತ್ತಮ ಅರ್ಧಶತಕ ಸಿಡಿಸಿ ಮಿಂಚಿದರು. 51 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ರನ್ ಗಳಿಸಿದ ತ್ರಿಶಾ ತಂಡಕ್ಕೆ ಆಸರೆಯಾದರು. ರಿಷಾ ಘೋಷ್ 35 ಎಸೆತಗಳಲ್ಲಿ 33 ರನ್ ಗಳಿಸಿದರೆ, ಶ್ವೇತಾ ಶೆರವಾತ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 10 ಎಸೆತಗಳಲ್ಲಿ 4 ಬೌಂಡರಿ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 31 ರನ್ ಗಳಿಸಿ ಮಿಂಚಿದರು.

U-19 Womens T20 World Cup: India Beat Scotland Enter To Super Six Round

ಮಾರಕ ಬೌಲಿಂಗ್ ದಾಳಿಗೆ ಸ್ಕಾಟ್ಲೆಂಡ್ ತತ್ತರ

150 ರನ್‌ಗಳ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಭಾರತದ ವನಿತೆಯರ ಬೌಲಿಂಗ್ ಆರ್ಭಟಕ್ಕೆ ತತ್ತರಿಸಿತು. 13.1 ಓವರ್ ಆಗುವಷ್ಟರಲ್ಲಿ 66 ರನ್‌ಗಳಿಗೆ ಆಲೌಟ್ ಆಗುವ ಮೂಲಕ 83 ರನ್‌ಗಳಿಂದ ಸೋಲನುಭವಿಸಿತು. ಅಲಿಸಾ ಲಿಸ್ಟರ್ 14 ರನ್ , ಡಾರ್ಸಿ ಕಾರ್ಟರ್ 24 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ.

ಮನ್ನತ್ ಕಶ್ಯಪ್ 4 ಓವರ್ ಗಳಲ್ಲಿ 12 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಅರ್ಚನಾ ದೇವಿ 4 ಓವರ್ ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರೆ, ಸೋನಮ್ ಯಾದವ್ 1.1 ಓವರ್ ಗಳಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಕಿತ್ತು ಸ್ಕಾಟ್ಲೆಂಡ್‌ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.

ಗುಂಪು ಹಂತದ ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ಭಾರತ ಮಹಿಳಾ ತಂಡ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಸ್ಕಾಟ್ಲೆಂಡ್ ವಿರುದ್ಧ ಕೂಡ 83 ರನ್‌ಗಳ ಜಯ ಸಾಧಿಸಿ ಅಜೇಯವಾಗಿ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

Story first published: Wednesday, January 18, 2023, 23:12 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X