ಕುತೂಹಲ ಘಟಕ್ಕೆ ವರ್ಲ್ಡ್‌ಕಪ್ ಅರ್ಹತಾ ಟೂರ್ನಿ, 3 ತಂಡಕ್ಕೆ ಇದೆ ಅವಕಾಶ

Posted By:
UAE defeated Zimbabwe in world cup qualifier match

ಹರಾರೆ, ಮಾರ್ಚ್ 23: ಜಿಂಬಾಬ್ವೆಯ ಹರಾರೆಯಲ್ಲಿ ನಡೆದಿರುವ ವರ್ಲ್‌ಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ವೆಸ್ಟ್‌ ಇಂಡೀಸ್ ತಂಡ ಈಗಾಗಲೇ ಫೈನಲ್ ಪ್ರವೇಶಿಸಿ ವರ್ಲ್ಡ್‌ಕಪ್ ಟೂರ್ನಿಯಲ್ಲಿ ತನ್ನ ಸ್ಥಾನ ಖಚಿತ ಪಡಿಸಿಕೊಂಡಿದೆ. ಆದರೆ ನಿನ್ನೆ ನಡೆದ ಮತ್ತೊಂದು ಸೂಪರ್ ಸಿಕ್ಸ್‌ ಪಂದ್ಯದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಜಿಂಬಾಬ್ವೆ ಅರಬ್ ಎದುರು ಸೋಲುವ ಮೂಲಕ ಟೂರ್ನಿಯನ್ನು ಕುತೂಹಲದ ಘಟ್ಟಕ್ಕೆ ಕೊಂಡೊಯ್ದಿದೆ.

ನಿನ್ನೆ ಯುನೈಟೆಡ್ ಅರಬ್‌ ಎಮರೈಟ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಸೋಲುಂಡಿದೆ. ಆ ಮೂಲಕ 10ನೇ ತಂಡವಾಗಿ ವಿಶ್ವಕಪ್ ಟೂರ್ನಿ ಪ್ರವೇಶಿಸುವ ಸುಲಭ ಅವಕಾಶವನ್ನು ಕೈಚೆಲ್ಲಿದೆ. ಜಿಂಬಾಬ್ವೆ ಸೋತ ಕೂಡಲೇ ಉಳಿದ ತಂಡಗಳ ನಡುವೆ ಸರಾಸರಿ ಲೆಕ್ಕಾಚಾರ ಪ್ರಾರಂಭವಾಗಿದ್ದು, ಮೂರು ತಂಡಗಳು ವಿಶ್ವಕಪ್ ಅರ್ಹತೆ ಗಳಿಸಲು ಹತ್ತಿರದಲ್ಲಿವೆ.

ಇಂದು ಐರ್ಲೆಂಡ್ ಮತ್ತು ಅಪ್ಘಾನಿಸ್ತಾನ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ವಿಶ್ವಕಪ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಅಕಸ್ಮಾತ್ ಮಳೆಯಿಂದ ಆಟ ರದ್ದಾದರೆ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ರನ್ ಸರಾಸರಿಯ ಲೆಕ್ಕಾಚಾರ ಮಾಡಬೇಕಾಗುತ್ತದೆ. ಆಗ ಜಿಂಬಾಬ್ವೆ ವಿಶ್ವಕಪ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಮೇಲಿನ ಎರಡೂ ಆಗದೆ ಒಂದು ವೇಳೆ ಪಂದ್ಯ ಟೈ ಆದರೆ ಜಿಂಬಾಬ್ವೆ ತಂಡಕ್ಕೆ ಸುಲಭ ಅವಕಾಶ ಸಿಗಲಿದೆ ಆದರೆ ಹೀಗೆ ನಡೆಯುವುದು ಕಷ್ಟ ಸಾಧ್ಯವೇ ಆಗಿದೆ.

ನಿನ್ನೆ ಪಂದ್ಯದಲ್ಲಿ ಮಳೆ ಜಿಂಬಾಬ್ವೆಗೆ ವಿಲನ್ ಆಗಿ ಪರಿಣಮಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅರಬ್ 47.5 ಓವರ್‌ಗಳಲ್ಲಿ 235 ರನ್ ಗಳಿಸಿತು ಆಗ ಜೋರು ಮಳೆ ಬಂದಿತು. ಡಕ್‌ವರ್ತ್‌ ಲೂಯಿಸ್ ನಿಯಮದ ಪ್ರಕಾರ ಗುರಿಯನ್ನು ಕೇವಲ 5 ರನ್ ಇಳಿಸಿ 230 ಮಾಡಲಾಯಿತು ಜಿಂಬಾಬ್ವೆ ಈ ರನ್‌ ಗುರಿಯನ್ನು 40 ಓವರ್‌ನಲ್ಲಿ ಚೇಸ್‌ ಮಾಡುವ ಇಕ್ಕಟ್ಟಿಗೆ ಸಿಲುಕಿತು. ಆದರೂ ಪ್ರಯಾಸ ಪಟ್ಟ ಜಿಂಬಾಬ್ವೆ ಕೇವಲ ಮೂರು ರನ್‌ನಿಂದ ಸೋತು ವಿಶ್ವಕಪ್ ಟೂರ್ನಿ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.

ಇಂದು ಅಪ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡದ ನಡುವೆ ಈಗಾಗಲೇ ಪಂದ್ಯ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡಿರುವ ಐರ್ಲೆಂಡ್ ತಂಡ 50 ಓವರ್‌ಗಳಲ್ಲಿ 209 ರನ್ ಗಳಿಸಿದೆ. ಉತ್ತರವಾಗಿ ಅಪ್ಘಾನಿಸ್ತಾನವು ಬ್ಯಾಟಿಂಗ್‌ಗೆ ಇಳಿದಿದ್ದು, 9 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 43 ರನ್ ಗಳಿಸಿ ಆಡುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 23, 2018, 17:45 [IST]
Other articles published on Mar 23, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ