ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

Vincy T10 League, first cricket event since March set for May 22 start

ಪೋರ್ಟ್ ಆಫ್‌ ಸ್ಪೇನ್, ಮೇ 14: ಕ್ರಿಕೆಟ್‌ ಪ್ರೇಮಿಗಳಿಗೆ ಸಹಿಸುದ್ದಿ ಬಂದಿದೆ. ಮಾರಕ ಕೊರೊನಾವೈರಸ್‌ನಿಂದಾಗಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲಾಗದ ಕ್ರೀಡಾಭಿಮಾನಿಗಳು ಶೀಘ್ರವೇ ಕ್ರಿಕೆಟ್ ಟೂರ್ನಿಯೊಂದನ್ನು ಕಣ್ತುಂಬಿಕೊಳ್ಳಲು ಅವಕಾಶ ಲಭಿಸಿದೆ. ಮಾರ್ಚ್ ತಿಂಗಳ ಬಳಿಕ ಅಂದರೆ ಕೊರೊನಾದಿಂದ ಕ್ರೀಡಾ ಚಟುವಟಿಕೆಗಳು ನಿಂತಿದ್ದಾಗಿನಿಂದ ನಡೆಯುತ್ತಿರುವ ಚೊಚ್ಚಲ ಕ್ರಿಕೆಟ್‌ ಟೂರ್ನಿಯಾಗಿ 'ದ ವಿನ್ಸಿ ಪ್ರೀಮಿಯರ್ ಲೀಗ್' (ವಿಪಿಎಲ್) ಶೀಘ್ರವೇ ಆರಂಭಗೊಳ್ಳಲಿದೆ.

ನನ್ನ ಹೃದಯ ಸಚಿನ್ ಔಟಾಗುವುದನ್ನು ಬಯಸುತ್ತಿರಲಿಲ್ಲ: ಪಾಕ್ ಮಾಜಿ ನಾಯಕ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿನನ್ನ ಹೃದಯ ಸಚಿನ್ ಔಟಾಗುವುದನ್ನು ಬಯಸುತ್ತಿರಲಿಲ್ಲ: ಪಾಕ್ ಮಾಜಿ ನಾಯಕ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

ಟಿ10 ಮಾದರಿಯ ಫ್ರಾಂಚೈಸಿ ಕ್ರಿಕೆಟ್ ಆದ ವಿನ್ಸಿ ಪ್ರೀಮಿಯರ್ ಲೀಗ್‌, ಕೆರಿಬಿಯನ್ ಐಲ್ಯಾಂಡ್‌ನ ಸೇಂಟ್ ವಿನ್ಸ್‌ನಲ್ಲಿ ಮೇ 22ರಿಂದ ಆರಂಭಗೊಳ್ಳಲಿದೆ. ಕೊರೊನಾ ಪಿಡುಗು ವಿಶ್ವವನ್ನು ಆವರಿಸಿಕೊಂಡ ಬಳಿಕ ನಡೆಯುತ್ತಿರುವ ವಿಶ್ವಮಟ್ಟದ ಮೊದಲ ಕ್ರಿಕೆಟ್ ಟೂರ್ನಿಯಿದು.

ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್

ಈ ವಿಭಿನ್ನ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು, ಅಂತಾರಾಷ್ಟ್ರೀಯ ಆಟಗಾರರು ಸೇರಿದಂತೆ ಟೂರ್ನಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊರೊನಾ ವೇಳೆಯ ನಡೆದ ಕಡೇಯ ಟೂರ್ನಿ?

ಕೊರೊನಾ ವೇಳೆಯ ನಡೆದ ಕಡೇಯ ಟೂರ್ನಿ?

ಕಳೆದ ಮಾರ್ಚ್‌ನಲ್ಲಿ ಕೊರೊನಾ ಕಾರಣ ವಿಶ್ವದಾದ್ಯಂತ ಎಲ್ಲಾ ಕ್ರಿಕೆಟ್ ಟೂರ್ನಿಗಳು ರದ್ದು/ಮುಂದೂಲ್ಪಟ್ಟಿದ್ದವು. ಕೊರೊನಾ ಆವರಿಸಲಾರಂಭಿಸಿದಾಗ ನಡೆದ ವಿಶ್ವ ಕ್ರಿಕೆಟಿಗರನ್ನೊಳಗೊಂಡ ಕಡೇಯ ಟೂರ್ನಿಯೆಂದರೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್). ಕರಾಚಿ ಕಿಂಗ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಧ್ಯೆ ಮಾರ್ಚ್ 15ರಂದು ಪಂದ್ಯ ನಡೆದಿತ್ತು. ಆದರೆ ಕೊರೊನಾ ತೀವ್ರಗೊಂಡಿದ್ದರಿಂದ ಪಿಎಸ್‌ಎಲ್ ರದ್ದಾಗಿತ್ತು.

ಚೊಚ್ಚಲ ಕ್ರಿಕೆಟ್ ಟೂರ್ನಿ ನಡೆಸಿದ ಹೆಗ್ಗಳಿಕೆ

ಚೊಚ್ಚಲ ಕ್ರಿಕೆಟ್ ಟೂರ್ನಿ ನಡೆಸಿದ ಹೆಗ್ಗಳಿಕೆ

10 ಓವರ್‌ಗಳನ್ನೊಳಗೊಂಡ ಈ ಲೀಗ್‌ನಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ. ಈ ಬಾರಿ ನಡೆಯುತ್ತಿರುವುದು ಇದು ಆರಂಭಿಕ ಸೀಸನ್‌ ಆಗಿರುವುದರಿಂದ ಉದ್ಘಾಟನಾ ಪಂದ್ಯ ಕಿಂಗ್ಸ್‌ಟೌನ್‌ಗೆ ಸಮೀಪವಿರುವ ಸೇಂಟ್‌ ವಿನ್ಸೆಂಟ್‌ನ ಅರ್ನೋಸ್ ವೇಲ್ ಸ್ಪೋರ್ಟಿಂಗ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಕೊರೊನಾ ವೈರಸ್‌ನಿಂದ ಮಾರ್ಚ್‌ನಲ್ಲಿ ಕ್ರೀಡಾಸ್ಪರ್ಧೆಗಳು ರದ್ದಾಗ ಬಳಿಕ ಕ್ರಿಕೆಟ್ ಟೂರ್ನಿ ನಡೆಸುತ್ತಿರುವ ಮೊದಲ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪೆಸಿಫಿಕ್ ದ್ವೀಪ ರಾಷ್ಟ್ರ ವನವಾಟು ಕಾರಣವಾಗಿದೆ. ಹಾಗಂತ ಟೂರ್ನಿಯ ವೇಳೆ ಆಟಗಾರರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗಿದೆ. ಮುಖ್ಯವಾಗಿ ಚೆಂಡು ಹೊಳೆಯುವಂತೆ ಮಾಡಲು ಆಟಗಾರರು ಎಂಜಲು ಬಳಸುವುಕ್ಕೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಇನ್ನಿತರ ಸುರಕ್ಷಾ ಕ್ರಮಗಳನ್ನೂ ಪಾಲಿಸಲು ಸೂಚಿಸಲಾಗಿದೆ.

ಆಟಗಾರರು ಮತ್ತು ಟೂರ್ನಿಯ ಚಿತ್ರಣ

ಆಟಗಾರರು ಮತ್ತು ಟೂರ್ನಿಯ ಚಿತ್ರಣ

ವಿಪಿಎಲ್ ಒಟ್ಟಿಗೆ 30 ಪಂದ್ಯಗಳನ್ನು ಒಳಗೊಂಡಿರಲಿದೆ. ಸುಮಾರು 72 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 6 ತಂಡಗಳ ನಡುವಿನ ಜಿದ್ದಾಜಿದ್ದಿಯ ಈ ಪಂದ್ಯಾಟದಲ್ಲಿ ವೆಸ್ಟ್ ಇಂಡೀಸ್‌ನ ಕೆಸ್ರಿಕ್ ವಿಲಿಯಮ್ಸ್, ಆರಂಭಿಕ ಬ್ಯಾಟ್ಸ್‌ಮನ್ ಸುನಿಲ್ ಆ್ಯಂಬ್ರಿಸ್, ಎಡಗೈ ವೇಗಿ ಓಬೆಡ್ ಮೆಕಾಯ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಮೇ 22ರಂದು ಆರಂಭಗೊಳ್ಳುವ ಟೂರ್ನಿ ಮೇ 30ರಂದು ಕೊನೆಗೊಳ್ಳಲಿದೆ. ಭಾರತೀಯ ಕಾಲಮಾನ 6 PMಗೆ ಪಂದ್ಯ ಆರಂಭಗೊಂಡರೆ 11.30 PMಗೆ ಕೊನೆಗೊಳ್ಳಲಿದೆ.

ತಂಡಗಳು, ಪ್ರಮುಖ ಆಟಗಾರರು

ತಂಡಗಳು, ಪ್ರಮುಖ ಆಟಗಾರರು

1. ಬೊಟಾನಿಕಲ್ ಗಾರ್ಡನ್ಸ್ ರೇಂಜರ್ಸ್: ಕೆಸ್ರಿಕ್ ವಿಲಿಯಮ್ಸ್ (ಮಾರ್ಕ್ಯೂ ಆಟಗಾರ); ನಿಕ್ಸನ್ ಮೆಕ್ಲೀನ್ (ತರಬೇತುದಾರ).
2. ಗ್ರೆನಡೈನ್ಸ್ ಡೈವರ್ಸ್: ಓಬೆಡ್ ಮೆಕಾಯ್ (ಮಾರ್ಕ್ಯೂ ಪ್ಲೇಯರ್); ಇಯಾನ್ ಅಲೆನ್ (ತರಬೇತುದಾರ),
3. ಸಾಲ್ಟ್ ಪಾಂಡ್ ಬ್ರೇಕರ್ಸ್: ಸುನಿಲ್ ಆ್ಯಂಬ್ರಿಸ್ (ಮಾರ್ಕ್ಯೂ ಪ್ಲೇಯರ್); ಒಲಂಜೊ ಜಾಕ್ಸನ್ (ತರಬೇತುದಾರ).
4. ಲಾ ಸೌಫ್ರಿಯರ್ ಹೈಕರ್ಸ್: ಡೆಸ್ರಾನ್ ಮಲೋನಿ (ಮಾರ್ಕ್ಯೂ ಪ್ಲೇಯರ್); ಇರ್ವಿನ್ ವಾರ್ರಿಕನ್ (ತರಬೇತುದಾರ).
5. ಡಾರ್ಕ್ ವ್ಯೂ ಎಕ್ಸ್‌ಪ್ಲೋರರ್ಸ್: ಲಿಂಡನ್ ಜೇಮ್ಸ್ (ಮಾರ್ಕ್ಯೂ ಪ್ಲೇಯರ್); ಬರ್ಟ್ರಾಮ್ ಸ್ಟ್ಯಾಪ್ಲೆಟನ್ (ತರಬೇತುದಾರ).
6. ಫೋರ್ಟ್ ಷಾರ್ಲೆಟ್ ಸ್ಟ್ರೈಕರ್ಸ್: ಕೆರಾನ್ ಕೊಟ್ಟೊಯ್ (ಮಾರ್ಕ್ಯೂ ಪ್ಲೇಯರ್); ಕೆನ್ರಾಯ್ ಮಾರ್ಟಿನ್ (ತರಬೇತುದಾರ).

Story first published: Thursday, May 14, 2020, 20:05 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X