ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿಗೂ ಮುನ್ನ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ಗೆ ಇಳಿದಿದ್ದೇಕೆ ಎಂದು ಬಹಿರಂಗಪಡಿಸಿದ ಕೊಹ್ಲಿ

Virat Kohli discloses the reason for Glenn Maxwell batting before AB de Villiers against MI
MaxWell ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ Virat Kohli | Oneindia Kannada

ಐಪಿಎಲ್ 14ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪಾಲಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರೆ. ಈ ಪ್ರದರ್ಶನ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿಗೂ ಕಾರಣವಾಗಿತ್ತು. ಆದರೆ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಇಳಿಯಬೇಕಿದ್ದ ಎಬಿ ಡಿವಿಲಿಯರ್ಸ್ ಸ್ಥಾನದಲ್ಲಿ ಮ್ಯಾಕ್ಸ್‌ವೆಲ್ ಆಡಲಿಳಿದಿದ್ದರು. ಇದಕ್ಕೆ ಕಾರಣವೇನೆಂದು ನಾಯಕ ವಿರಾಟ್ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

"ನಮ್ಮ ಆಲೋಚನೆಯೆಂದರೆ ಆರಂಭದಲ್ಲಿಯೇ ಮ್ಯಾಕ್ಸ್‌ವೆಲ್‌ಗೆ ಕೆಲ ಚೆಂಡುಗಳನ್ನು ಎದುರಿಸುವುದನ್ನು ಬಯಸಿದ್ದೆವು. ಈಗಿನಿಂದಲೇ ಆತನನ್ನು ಅಂತಿಮ ಘಟ್ಟದಲ್ಲಿ ಬ್ಯಾಟಿಂಗ್‌ಗೆ ಇಳಿಸುವುದು ಬೇಕಿರಲಿಲ್ಲ. ಇಂದು ನೀವು ಆತ ಆಡಿದ 10-15 ಎಸೆತಗಳನ್ನು ನೋಡಿದ್ದೀರಿ. ಆತನ ಆಟ ಆಟದ ದಿಕ್ಕನ್ನು ಬದಲಾಯಿಸಿತು" ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.

ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್ಒಂದೇ ಪಂದ್ಯದಲ್ಲಿ ರೋಹಿತ್ ಮತ್ತು ವಾರ್ನರ್‌ ದಾಖಲೆಯನ್ನು ಸರಿಗಟ್ಟಿದ ಧವನ್

ಇನ್ನು ಇದೇ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಉಳಿದುಕೊಂಡಿದ್ದರೆ ಒಂದೆರಡು ಓವರ್‌ಗಳ ಮುನ್ನವೇ ಗೆಲುವು ಸಾಧಿಸಬಹುದಾಗಿತ್ತು ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಆವೃತ್ತಿಯ ಮೊದಲ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 28 ಎಸೆತಗಳನ್ನು ಎದುರಿಸಿದ 39 ರನ್‌ ಬಾರಿಸಿದ್ದರು.

ಇನ್ನು ಆರ್‌ಸಿಬಿ ಈ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದರು. ನಾಯಕ ವಿರಾಟ್ ಕೊಹ್ಲಿಯ ಜೊತೆಗೆ ವಾಶಿಂಗ್ಟನ್ ಸುಂದರ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. 2016 ಆವೃತ್ತಿಯ ಬಳಿಕ ಕೊಹ್ಲಿ ಆರಂಭಿಕ ನಾಯಕ ಮತ್ತೆ ಕಣಕ್ಕಿಳಿದರು.

ಇನ್ನು ಆರ್‌ಸಿಬಿ ತನ್ನ ಎರಡನೇ ಪಂದ್ಯವನ್ನು ಬುಧವಾರ ಆಡಲಿದೆ. ಅಂದು ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರಾಟ್ ಕೊಹ್ಲಿ ಪಡೆಗೆ ಎದುರಾಳಿಯಾಗಿರಲಿದೆ.

Story first published: Sunday, April 11, 2021, 21:01 [IST]
Other articles published on Apr 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X