ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮಾಡದ ತಪ್ಪುಗಳನ್ನು ಈ ಟೂರ್ನಿಯಲ್ಲಿ ಮಾಡಿದ್ದಾರೆ; ಸೆಹ್ವಾಗ್

Virat Kohli Has Made More Mistakes This IPL 2022 Than Probably In His Entire Career Says Virender Sehwag

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ 2022ರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ 2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಟೂರ್ನಿಯಿಂದ ಹೊರಬಿದ್ದಿತು. ಆ ಮೂಲಕ 15 ವರ್ಷಗಳ ಐಪಿಎಲ್ ಟ್ರೋಫಿ ಗೆಲ್ಲಬೇಕೆನ್ನುವ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿಯಿತು.

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೆ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲವಾಗಿದ್ದು, ಆರ್‌ಸಿಬಿ ಅಭಿಮಾನಿಗಳು ಇಟ್ಟಿದ್ದ ಭರವಸೆ ನುಚ್ಚುನೂರಾಯಿತು.

ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಂತೆ ತೋರುತ್ತಿತ್ತು

ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಂತೆ ತೋರುತ್ತಿತ್ತು

ಟ್ರೆಂಟ್ ಬೌಲ್ಟ್ ಬೌಲ್ ಮಾಡಿದ ಪ್ರಥಮ ಓವರ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಪ್ಯಾಡ್‌ಗಳಿಂದ ಹೊರಗಿದ್ದ ಚೆಂಡನ್ನು ಡೀಪ್-ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರು ಮತ್ತು ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಂತೆ ತೋರುತ್ತಿತ್ತು. ಆದರೆ, ಮುಂದಿನ ಓವರ್‌ನಲ್ಲಿ 33ರ ಹರೆಯದ ಆಟಗಾರ ಪ್ರಸಿದ್ಧ್ ಕೃಷ್ಣ ಅವರ ಎಸೆತದಲ್ಲಿ ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.

ಭಾರತದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಪಾರ್ಥಿವ್ ಪಟೇಲ್ ಅವರು ವಿರಾಟ್ ಕೊಹ್ಲಿ ಔಟಾದ ಬಗ್ಗೆ ಮತ್ತು ಒಟ್ಟಾರೆ ಈ ಋತುವಿನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ವಿವರವಾಗಿ ಚರ್ಚಿಸಿದ್ದು, ವಿರಾಟ್ ಕೊಹ್ಲಿ ತಮ್ಮ ಇಡೀ ವೃತ್ತಿಜೀವನಕ್ಕೆ ಹೋಲಿಸಿದರೆ ಈ ಐಪಿಎಲ್ ಋತುವಿನಲ್ಲಿ ಬಹುಶಃ ಹೆಚ್ಚು ತಪ್ಪುಗಳನ್ನು ಮಾಡಿದ್ದಾರೆ ಎಂದು ಸೆಹ್ವಾಗ್ ಹೇಳಿದರು.

ಬಹುಶಃ ಈ ಋತುವಿನಲ್ಲಿ ಬೇರೆ ವಿರಾಟ್ ಕೊಹ್ಲಿ ಕಂಡರು

ಬಹುಶಃ ಈ ಋತುವಿನಲ್ಲಿ ಬೇರೆ ವಿರಾಟ್ ಕೊಹ್ಲಿ ಕಂಡರು

"ನೀವು ಫಾರ್ಮ್‌ನಿಂದ ಹೊರಗಿರುವಾಗ, ನೀವು ಆತ್ಮವಿಶ್ವಾಸವನ್ನು ಪಡೆಯಲು ಪ್ರತಿ ಬಾಲ್‌ಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದೀರಿ. ಮೊದಲ ಓವರ್‌ನಲ್ಲಿ ಅವರು (ಕೊಹ್ಲಿ) ಕೆಲವು ಎಸೆತಗಳನ್ನು ಬಿಟ್ಟುಕೊಟ್ಟರು, ಆದರೆ ನೀವು ಫಾರ್ಮ್‌ನಲ್ಲಿ ಇಲ್ಲದಿದ್ದಾಗ ಇದು ನಿಖರವಾಗಿ ಸಂಭವಿಸುತ್ತದೆ. ಬಾಲ್ ಅನ್ನು ನೀವು ಬೆನ್ನಟ್ಟಿ ಹೋಗುತ್ತೀರಿ, ಕೆಲವೊಮ್ಮೆ ಅದೃಷ್ಟ ನಿಮಗೆ ಒಲಿಯುತ್ತದೆ, ಕೆಲವೊಮ್ಮೆ ಒಲಿಯುವುದಿಲ್ಲ. ಇದು ನಮಗೆ ತಿಳಿದಿರುವ ವಿರಾಟ್ ಕೊಹ್ಲಿ ಅಲ್ಲ, ಇದು ಬಹುಶಃ ಈ ಋತುವಿನಲ್ಲಿ ಬೇರೆ ವಿರಾಟ್ ಕೊಹ್ಲಿ," ಎಂದು ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ವೀರೇಂದ್ರ ಸೆಹ್ವಾಗ್ ತಿಳಿಸಿದರು.

ಇಡೀ ವೃತ್ತಿಜೀವನದಲ್ಲಿ ಹೆಚ್ಚು ತಪ್ಪು ಮಾಡಿಲ್ಲ

ಇಡೀ ವೃತ್ತಿಜೀವನದಲ್ಲಿ ಹೆಚ್ಚು ತಪ್ಪು ಮಾಡಿಲ್ಲ

"ಈ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರು ಮಾಡಿದ ತಪ್ಪುಗಳ ಸಂಖ್ಯೆ, ಅವರು ಬಹುಶಃ ಅವರ ಇಡೀ ವೃತ್ತಿಜೀವನದಲ್ಲಿ ಹೆಚ್ಚು ಮಾಡಿಲ್ಲ. ನೀವು ರನ್ ಗಳಿಸದಿದ್ದಾಗ, ನೀವು ವಿಭಿನ್ನ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೀರಿ ಮತ್ತು ನಂತರ ನಿಮ್ಮನ್ನು ವಿಭಿನ್ನ ರೀತಿಯಲ್ಲಿ ಔಟ್ ಮಾಡಲಾಗುತ್ತದೆ. ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಔಟ್ ಮಾಡಲಾಗಿದೆ. ಅವರು ಬಹುಶಃ ಆ ಚೆಂಡನ್ನು ಬಿಡಬಹುದಿತ್ತು ಅಥವಾ ಅವರು ಅದರಲ್ಲಿ ಕಠಿಣವಾಗಿ ಹೋಗಬಹುದಿತ್ತು. ಆದರೆ ಕ್ಯಾಚ್ ನೀಡಿ ಕೊಹ್ಲಿ ತಮ್ಮ ಅಭಿಮಾನಿಗಳು ಮತ್ತು ಆರ್‌ಸಿಬಿ ಅಭಿಮಾನಿಗಳನ್ನು ನಿರಾಶೆಗೊಳಿಸಿದರು, ಇದು ತುಂಬಾ ಮಹತ್ವದ ಪಂದ್ಯವಾಗಿತ್ತು," ಸೆಹ್ವಾಗ್ ಹೇಳಿದರು.

ಇನ್ನೊಬ್ಬ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಮಾತನಾಡಿ, ವಿರಾಟ್ ಕೊಹ್ಲಿ ಯಾವಾಗಲೂ ಕಟ್ ಶಾರ್ಟ್ ಅನ್ನು ಹೀಗೆ ಆಡುವುದಿಲ್ಲ ಎಂಬುದನ್ನು ತೋರಿಸಿದರು ಮತ್ತು ಇದು ಬಹುಶಃ ಬ್ಯಾಟರ್ ತನ್ನ ಹಿಂದಿನ ಪಂದ್ಯಗಳಲ್ಲಿ ರನ್ ಗಳಿಸಿಲ್ಲದ ಕಾರಣ ಅತಿಯಾಗಿ ಆತಂಕಕ್ಕೊಳಗಾದ ಸಂದರ್ಭವಾಗಿದೆ ಎಂದು ವಿವರಿಸಿದರು.

ನೀವು ಅತಿಯಾದ ಆತಂಕದಲ್ಲಿರುವ ಕೊಹ್ಲಿ

ನೀವು ಅತಿಯಾದ ಆತಂಕದಲ್ಲಿರುವ ಕೊಹ್ಲಿ

"ನೀವು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ, ನೀವು ಅತಿಯಾದ ಆತಂಕದಲ್ಲಿರುತ್ತೀರಿ. ವಿರಾಟ್ ಕೊಹ್ಲಿ ಕಟ್ ಶಾಟ್ ಆಡದಿರುವುದು ಸಮಸ್ಯೆಯಾಗಿದೆ," ಎಂದು ಪಾರ್ಥಿವ್ ಪಟೇಲ್ ಹೇಳಿದರು.

ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ 341 ರನ್ ದಾಖಲಿಸಿದ್ದಾರೆ. ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್‌ಗಳ ಸೋಲು ಅನುಭವಿಸಿದ ಆರ್‌ಸಿಬಿ ಪ್ರಸಕ್ತ ಐಪಿಎಲ್ ಟ್ರೋಫಿ ರೇಸ್‌ನಿಂದ ಹೊರಬಿದ್ದಿದೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಜೋಸ್ ಬಟ್ಲರ್ ಅವರು ಅಜೇಯ ಶತಕ ಗಳಿಸಿ ಆರ್‌ಆರ್ ತಂಡವನ್ನು ಏಳು ವಿಕೆಟ್‌ಗಳು ಮತ್ತು 11 ಎಸೆತಗಳು ಬಾಕಿ ಇರುವಾಗ ಗೆಲುವಿನ ದಡ ಸೇರಿಸಿದರು.

Story first published: Saturday, May 28, 2022, 14:34 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X