ಟಿ20 ವಿಶ್ವಕಪ್‌ನಲ್ಲಿ ಹಲವು ದಾಖಲೆಗಳ ಸರದಾರ ವಿರಾಟ್ ಕೊಹ್ಲಿ

ವಿಶ್ವದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ 3 ವರ್ಷಗಳ ನಂತರ ತಮ್ಮ 71 ಶತಕವನ್ನು ಪೂರೈಸಿದ್ದಾರೆ. ಫಾರ್ಮ್ ಇಲ್ಲದೆ ಟೀಕೆಗೆ ಗುರಿಯಾಗಿದ್ದ ಕೊಹ್ಲಿ ಏಷ್ಯಾಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ್ದಾರೆ. ಟಿ20 ವಿಶ್ವಕಪ್ ಹತ್ತಿರದಲ್ಲೇ ಇರುವಾಗ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಟೀಂ ಇಂಡಿಯಾಗೆ ಬಲ ತುಂಬಿದೆ.

ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯ ನಡೆಯಲಿದೆ.

ಯುವರಾಜ್‌ 6 ಸಿಕ್ಸರ್‌ಗೆ ಇಂದಿಗೆ 15 ವರ್ಷ: ಸಿಕ್ಸರ್‌ ಕಿಂಗ್‌ನ ಆರ್ಭಟಕ್ಕೆ ಪತರುಗುಟ್ಟಿದ್ದ ಆಂಗ್ಲರು!ಯುವರಾಜ್‌ 6 ಸಿಕ್ಸರ್‌ಗೆ ಇಂದಿಗೆ 15 ವರ್ಷ: ಸಿಕ್ಸರ್‌ ಕಿಂಗ್‌ನ ಆರ್ಭಟಕ್ಕೆ ಪತರುಗುಟ್ಟಿದ್ದ ಆಂಗ್ಲರು!

ಟಿ20 ವಿಶ್ವಕಪ್‌ನಲ್ಲಿ ದೇಶಕ್ಕಾಗಿ ಆಡಬೇಕೆನ್ನುವುದು ಹಲವರ ಬಯಕೆ, ಎಲ್ಲರಿಗೂ ಅಂತಹ ಅವಕಾಶ ಸಿಗುವುದಿಲ್ಲ. ಸಿಕ್ಕರೂ ವಿಶ್ವದ ದೊಡ್ಡ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸಲು ಅತ್ಯುತ್ತಮ ಪ್ರದರ್ಶನ ನೀಡಬೇಕು. ವಿರಾಟ್ ಕೊಹ್ಲಿ ಈ ವಿಚಾರದಲ್ಲಿ ಸದಾ ಮುಂದೆ ಇದ್ದಾರೆ. ಯಾವುದೇ ಮಾದರಿಯ ಕ್ರಿಕೆಟ್ ಇರಲಿ ದಾಖಲೆ ಮುರಿಯುವುದರಲ್ಲಿ ಹೊಸ ದಾಖಲೆ ಮಾಡುವುದರಲ್ಲಿ ಕೊಹ್ಲಿಗೆ ಕೊಹ್ಲಿಯೇ ಸಾಟಿ. ಅಂತಹ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಒಟ್ಟು 10 ಅರ್ಧಶತಕ

ಟಿ20 ವಿಶ್ವಕಪ್‌ನಲ್ಲಿ ಒಟ್ಟು 10 ಅರ್ಧಶತಕ

ಟಿ20 ವಿಶ್ವಕಪ್‌ನಲ್ಲಿ ಈವರೆಗೆ 21 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿರುವ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 2012ರಿಂದ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಒಟ್ಟು 845 ರನ್ ಗಳಿಸಿದ್ದಾರೆ.

ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕೊಹ್ಲಿಗೆ ಅವಕಾಶ ಇದೆ. ವಿರಾಟ್ ಕೊಹ್ಲಿ ನಂತರ ಕ್ರಿಸ್‌ ಗೇಲ್ 7 ಅರ್ಧ ಶತಕ ಗಳಿಸುವ ಮೂಲಕ ಅತಿ ಹೆಚ್ಚು ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

IND vs AUS: ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಸೋಲಿಸಲು ಈತನ ಬ್ಯಾಟಿಂಗ್ ಅತಿ ಮುಖ್ಯ

ಕೊಹ್ಲಿಗೆ 5 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ

ಕೊಹ್ಲಿಗೆ 5 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ

ಟಿ20 ವಿಶ್ವಕಪ್‌ನಲ್ಲಿ ತಾವಾಡಿರುವ 21 ಪಂದ್ಯದಲ್ಲೇ ವಿರಾಟ್ ಕೊಹ್ಲಿ 5 ಬಾರಿ ಪಂದ್ಯ ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನೊಂದು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು ಕೊಹ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಲಿದ್ದಾರೆ.

ವಿರಾಟ್ ಕೊಹ್ಲಿ ಹೊರತು ಪಡಿಸಿ, ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್, ಶ್ರೀಲಂಕಾದ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾ ಆಲ್‌ರೌಡರ್ ಶೇನ್ ವ್ಯಾಟ್ಸನ್ ಮಾತ್ರ 5 ಬಾರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಎಲ್ಲಾ ಆಟಗಾರರು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ವಿರಾಟ್ ಕೊಹ್ಲಿ ಮಾತ್ರ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್

ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್

ವಿರಾಟ್ ಕೊಹ್ಲಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ ಇದುವರೆಗೂ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಯಾವ ಆಟಗಾರನೂ ಕೂಡ ಇದುವರೆಗೆ ವಿಶ್ವಕಪ್‌ನಲ್ಲಿ ಸತತವಾಗಿ ಎರಡು ಬಾರಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿಲ್ಲ.

2014 ಮತ್ತು 2016ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಆಟವಾಡಿದ ವಿರಾಟ್ ಕೊಹ್ಲಿ ಸಹಜವಾಗಿಯೇ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿದ್ದರು.

ಇಂದಿಗೂ ಮುರಿಯಲಾಗಿಲ್ಲ ಕೊಹ್ಲಿಯ ಈ ದಾಖಲೆ

ಇಂದಿಗೂ ಮುರಿಯಲಾಗಿಲ್ಲ ಕೊಹ್ಲಿಯ ಈ ದಾಖಲೆ

ಒಂದೇ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2014 ರಲ್ಲಿ 319 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ದಾಖಲೆ ಬರೆದರು. ಇಂದಿಗೂ ಕೂಡ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಯಾರಿಗೂ ಮುರಿಯಲಾಗಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ಈ ದಾಖಲೆಯನ್ನು ಸ್ವತಃ ಕೊಹ್ಲಿಯೇ ಮುರಿಯಲಿ ಎಂದು ಅಭಿಮಾನಿಗಳು ಆಶಿಸುತ್ತಿರುವುದಲ್ಲಿ ಆಶ್ಚರ್ಯವೇನಲ್ಲ.

ಮಾತ್ರವಲ್ಲದೆ ಅತಿ ಹೆಚ್ಚು ರನ್ ಸರಾಸರಿಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. 21 ಪಂದ್ಯಗಳಲ್ಲಿ 76.81 ಸರಾಸರಿಯಲ್ಲಿ 845 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, September 19, 2022, 18:05 [IST]
Other articles published on Sep 19, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X