ಕೊಹ್ಲಿ ಜೊತೆ ಯಾರನ್ನೂ ಹೋಲಿಸಲೇಬೇಡಿ ಎಂದ ರಶೀದ್ ಖಾನ್

ಬೇರೆಯವರ ತರ ಅಲ್ಲ ವಿರಾಟ್ ಕೊಹ್ಲಿ ಎಂದ Rashid Khan | Oneindia Kannada

ವಿರಾಟ್ ಕೊಹ್ಲಿ, ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಟೆಸ್ಟ್, ಏಕದಿನ, ಟಿ ಟ್ವೆಂಟಿ ಹಾಗೂ ಐಪಿಎಲ್ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿಯೂ ಸಹ ವಿರಾಟ್ ಕೊಹ್ಲಿ ತನ್ನದೇ ಆದ ದೊಡ್ಡ ದೊಡ್ಡ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ನಿರ್ಮಿಸಿರುವ ದಾಖಲೆಗಳಿಗೆ ಮತ್ತು ಸಾಧನೆಗಳಿಗೆ ಕ್ರಿಕೆಟ್ ದಂತಕತೆಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WTC Final: ನ್ಯೂಜಿಲೆಂಡ್‌ಗೆ ಲಾಭ, ಭಾರತಕ್ಕೆ ನಷ್ಟ; ಯುವರಾಜ್ ಸಿಂಗ್ ಅಸಮಾಧಾನ

ಇನ್ನು ವಿರಾಟ್ ಕೊಹ್ಲಿ ಜೊತೆಗೆ ಇತ್ತೀಚೆಗೆ ದಾಖಲೆಗಳನ್ನು ನಿರ್ಮಿಸಿದ ಹಲವಾರು ಕ್ರಿಕೆಟಿಗರನ್ನು ಕೆಲವೊಮ್ಮೆ ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಆದರೆ ರಶೀದ್ ಖಾನ್ ಇತ್ತೀಚೆಗೆ ವಿರಾಟ್ ಕೊಹ್ಲಿಯವರಿಗೆ ಯಾರನ್ನೂ ಸಹ ಹೋಲಿಕೆ ಮಾಡಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ. ಹೌದು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದು ಕೊಹ್ಲಿಗೆ ಹೋಲಿಕೆಯೇ ಇಲ್ಲ ಎಂದಿದ್ದಾರೆ.

ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳದೇ ತಂಡದಿಂದ ಕೈಬಿಟ್ಟ ಸ್ಟಾರ್ ಕ್ರಿಕೆಟಿಗರಿವರು!

'ಬೇರೆ ಬ್ಯಾಟ್ಸ್‌ಮನ್‌ಗಳು ಕಷ್ಟದ ಎಸೆತಗಳನ್ನು ಯಾವ ರೀತಿ ಎದುರಿಸಬೇಕು ಎಂದು ತಿಳಿಯದೆ ಪರದಾಡುತ್ತಾರೆ. ಆದರೆ ವಿರಾಟ್ ಕೊಹ್ಲಿಯೇ ಬೇರೆ, ಅವರಿಗೆ ಕಷ್ಟದ ಎಸೆತಗಳನ್ನು ಯಾವ ರೀತಿ ಎದುರಿಸಬೇಕೆಂಬುದು ತಿಳಿದಿದೆ ಹಾಗೂ ಸುಲಭದ ಎಸೆತಗಳನ್ನು ಯಾವ ರೀತಿ ದಂಡಿಸಬೇಕು ಎಂಬುದೂ ಸಹ ಸ್ಪಷ್ಟವಾಗಿ ಗೊತ್ತು. ವಿರಾಟ್ ಕೊಹ್ಲಿ ತನ್ನದೇ ಆದ ಬ್ಯಾಟಿಂಗ್ ಕ್ರಮವನ್ನು ಹೊಂದಿದ್ದಾರೆ, ಆ ಕ್ರಮಕ್ಕನುಗುಣವಾಗಿ ಬ್ಯಾಟ್ ಬೀಸುತ್ತಾರೆ. ವಿರಾಟ್ ಕೊಹ್ಲಿ ಹೆಚ್ಚಿನ ಸ್ವಯಂ ನಂಬಿಕೆಯನ್ನು ಹೊಂದಿದ್ದಾರೆ ಆದರೆ ಬೇರೆ ಆಟಗಾರರು ಕೊಹ್ಲಿಯ ರೀತಿ ಸ್ವಯಂ ನಂಬಿಕೆ ಹೊಂದಿಲ್ಲ. ಹೀಗಾಗಿಯೇ ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿದ್ದಾರೆ ಮತ್ತು ಯಶಸ್ವಿ ಕ್ರಿಕೆಟಿಗನಾಗಿ ನಿಂತಿದ್ದಾರೆ' ಎಂದು ರಶೀದ್ ಖಾನ್ ಕೊಹ್ಲಿಯನ್ನು ಕೊಂಡಾಡಿದ್ದಾರೆ.

ಕೊಹ್ಲಿ ತನ್ನನ್ನು ತಾನು ಹೆಚ್ಚಾಗಿ ನಂಬುತ್ತಾರೆ

ಕೊಹ್ಲಿ ತನ್ನನ್ನು ತಾನು ಹೆಚ್ಚಾಗಿ ನಂಬುತ್ತಾರೆ

ವಿರಾಟ್ ಕೊಹ್ಲಿ ಬೇರೆಯ ಆಟಗಾರರು ರೀತಿಯಲ್ಲ ತಮ್ಮ ಆಟವನ್ನು ತಾವು ಹೆಚ್ಚಾಗಿ ನಂಬುತ್ತಾರೆ ಈ ಕಾರಣದಿಂದಲೇ ವಿರಾಟ್ ಕೊಹ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಾರೆ. ಆದರೆ ಬೇರೆ ಆಟಗಾರರು ತಮ್ಮ ಆಟದ ಮೇಲೆ ನಂಬಿಕೆ ಬಿಟ್ಟು ಕಷ್ಟದ ಎಸೆತಗಳಲ್ಲಿ ವಿಕೆಟ್ ಉಳಿಸಿಕೊಳ್ಳಲು ಪರದಾಡಿ ವಿಫಲರಾಗುತ್ತಾರೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಕಿಂಗ್

ವಿರಾಟ್ ಕೊಹ್ಲಿ ಕಿಂಗ್

ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ ಕುರಿತು ಒಂದೇ ಪದದಲ್ಲಿ ಏನಾದರೂ ಹೇಳಿ ಎಂದು ರಶೀದ್ ಖಾನ್ ಬಳಿ ಕೇಳಿದಾಗ, ಆ ಪ್ರಶ್ನೆಗೆ ಉತ್ತರಿಸಿದ ರಶೀದ್ ಖಾನ್ ವಿರಾಟ್ ಕೊಹ್ಲಿ ಕಿಂಗ್ ಎಂದಿದ್ದರು.

ಕೊಹ್ಲಿ ವಿಕೆಟ್ ಪಡೆದದ್ದನ್ನು ಜೀವನದಲ್ಲಿ ಮರೆಯುವುದಿಲ್ಲ

ಕೊಹ್ಲಿ ವಿಕೆಟ್ ಪಡೆದದ್ದನ್ನು ಜೀವನದಲ್ಲಿ ಮರೆಯುವುದಿಲ್ಲ

ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್‍ಗಳನ್ನು ಪಡೆದಿದ್ದ ಸಮಯವನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ಓರ್ವ ಸ್ಪಿನ್ ಬೌಲರ್ ಆಗಿ ಅಂತಹ ದೊಡ್ಡ ದೊಡ್ಡ ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡುವುದು ತಮಾಷೆಯ ಮಾತಲ್ಲ ಎಂದು ರಶೀದ್ ಖಾನ್ ಹೇಳಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 7, 2021, 22:30 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X