'ಸೆನಾ' ರಾಷ್ಟ್ರಗಳಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್; ಇದು ವಿರಾಟ್ ಕೊಹ್ಲಿ ವಿಶೇಷ ದಾಖಲೆ

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದೆ.

WTC Final: ನ್ಯೂಜಿಲೆಂಡ್‌ಗೆ ಲಾಭ, ಭಾರತಕ್ಕೆ ನಷ್ಟ; ಯುವರಾಜ್ ಸಿಂಗ್ ಅಸಮಾಧಾನ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚಿಗಷ್ಟೆ ಸೌತಾಂಪ್ಟನ್ ಕ್ರೀಡಾಂಗಣದ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಆಡಲು ಕಾತುರರಾಗಿರುವುದನ್ನು ತಿಳಿಸಿದ್ದರು. ಇನ್ನು ನ್ಯೂಜಿಲೆಂಡ್ ತಂಡವನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ ಆಗಿ ಹೊರಹೊಮ್ಮುವ ಮೂಲಕ ವಿರಾಟ್ ಕೊಹ್ಲಿ ನಾಯಕನಾಗಿ ಮೊದಲ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.

ರವಿಚಂದ್ರನ್ ಅಶ್ವಿನ್ ಮಹಾನ್ ಬೌಲರ್ ಏನಲ್ಲ, ಆತನಿಗೆ ಸಮಸ್ಯೆಯಿದೆ: ಮಾಜಿ ಭಾರತೀಯ ಕ್ರಿಕೆಟಿಗ

ಇನ್ನು ಸೆನಾ ದೇಶಗಳಲ್ಲಿ ( ಸೆನಾ ದೇಶಗಳೆಂದರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ) ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಎರಡೂ ಮಾದರಿಯಲ್ಲಿ ಹತ್ತಕ್ಕಿಂತ ಹೆಚ್ಚು ಶತಕ ಸಿಡಿಸಿದ್ದಾರೆ, ಈ ದೇಶಗಳಲ್ಲಿ ವಿರಾಟ್ ಕೊಹ್ಲಿ 11 ಟೆಸ್ಟ್ ಶತಕಗಳು ಹಾಗೂ 10 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಸೆನಾ ದೇಶಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡೂ ಮಾದರಿಗಳಲ್ಲೂ ಹತ್ತಕ್ಕಿಂತ ಹೆಚ್ಚು ಶತಕ ಬಾರಿಸಿರುವ ಏಕೈಕ ಏಷ್ಯಾ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, June 6, 2021, 20:39 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X