ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ಸಾವಿರ ರನ್ ಕ್ಲಬ್ ನಲ್ಲಿ ಕೊಹ್ಲಿ ಜತೆಗಿರುವ 5 ದಿಗ್ಗಜರು

Virat Kohli joins Club 10000; glance at his club mates from India

ವೈಜಾಗ್, ಅಕ್ಟೋಬರ್ 24: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ತ್ವರಿತಗತಿಯಲ್ಲಿ ಒಡಿಐನಲ್ಲಿ 10,000ರನ್ ಗಳಿಸಿದ ದಾಖಲೆ ಬರೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ 10 ಸಾವಿರ ರನ್ ಪೂರೈಸಲು 81ರನ್ ಮಾತ್ರ ಬೇಕಿತ್ತು. ವೆಸ್ಟ್ ಇಂಡೀಸ್ ನ ಸ್ಪಿನ್ನರ್ ನರ್ಸ್ ಬೌಲಿಂಗ್ ನಲ್ಲಿ ಒಂದು ರನ್ ಗಳಿಸಿ ಈ ವೈಯಕ್ತಿಕ ಸಾಧನೆ ಮಾಡಿದರು.

ಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರ

10 ಸಾವಿರ ರನ್ ಕ್ಲಬ್: ಈ ಸಾಧನೆ ಮಾಡಿದ ಭಾರತದ 5ನೇ ಹಾಗೂ ವಿಶ್ವದ 13ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.

ವಿರಾಟ್ ಕೊಹ್ಲಿ ಅವರು 205 ಇನ್ನಿಂಗ್ಸ್ ಗಳಲ್ಲೇ 10 ಸಾವಿರ ರನ್ ಚೆಚ್ಚಿದ್ದಾರೆ. ಸಚಿನ್ ಅವರು 10 ಸಾವಿರ ರನ್ ಗಡಿ ದಾಟಲು 259 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಭಾರತದ ಪರ 10 ಸಾವಿರ ರನ್ ಗಳಿಸಿರುವ ಆಟಗಾರರ ವಿವರ ಮುಂದಿದೆ.

ಸಚಿನ್ ತೆಂಡೂಲ್ಕರ್ -18426

ಸಚಿನ್ ತೆಂಡೂಲ್ಕರ್ -18426

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಸಚಿನ್ ಅವರು 90ರ ದಶಕದಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಬಳಿಕ ಆಟದ ಶೈಲಿಯೇ ಬದಲಾಯಿತು. ನವಜ್ಯೋತ್ ಸಿಂಗ್ ಸಿಧು ಅವರು ಕುತ್ತಿಗೆ ನೋವಿನಿಂದ ಆ ಪಂದ್ಯವಾಡಲು ಆಗಿರಲಿಲ್ಲ. ಏಕದಿನ ಕ್ರಿಕೆಟ್ ನಲ್ಲಿ ಹತ್ತು ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದಲ್ಲದೆ ಅಜರುದ್ದೀನ್ ಅವರನ್ನು ಹಿಂದಿಕ್ಕಿ 10 ಸಾವಿರ ರನ್ ಗಡಿ ದಾಟಿದ ಮೊದಲ ಕ್ರಿಕೆಟ್ ಪಟುವಾದರು.

ಸೌರವ್ ಗಂಗೂಲಿ(11,363)

ಸೌರವ್ ಗಂಗೂಲಿ(11,363)

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರ ಪೈಕಿ ಒಬ್ಬರೆನಿಸಿದ ಸೌರವ್ ಗಂಗೂಲಿ ತಮ್ಮ ಬ್ಯಾಟಿಂಗ್ ಹಾಗೂ ನಾಯಕತ್ವದ ಮೂಲಕ ತಂಡದಲ್ಲಿ ಆಕ್ರಮಣಕಾರಿ ಮನೋಭಾವ ಬೆಳೆಸಿದವರು. ತೆಂಡೂಲ್ಕರ್ ಹಾಗೂ ಗಂಗೂಲಿ ಆರಂಭಿಕ ಜೋಡಿ ಎಂದರೆ ಎದುರಾಳಿಗಳಿಗೆ ತೊಂದರೆ. ಈ ಆರಂಭಿಕ ಜೋಡಿ 136 ಇನ್ನಿಂಗ್ಸ್ ಗಳಲ್ಲಿ 6609ರನ್ ಚೆಚ್ಚಿತ್ತು.

ರಾಹುಲ್ ದ್ರಾವಿಡ್ -10889 (340 ಪಂದ್ಯ)

ರಾಹುಲ್ ದ್ರಾವಿಡ್ -10889 (340 ಪಂದ್ಯ)

ರಾಹುಲ್ ದ್ರಾವಿಡ್ ಅವರು ಪಕ್ಕಾ ಟೆಸ್ಟ್ ಆಟಗಾರರಾಗಿದ್ದು, ಏಕದಿನ ಕ್ರಿಕೆಟ್ ಗೆ ಲಾಯಕ್ಕಿಲ್ಲ ಎಂದು ಎಲ್ಲರೂ ಮೂದಲಿಸುವಾಗ, ಮಾಜಿ ನಾಯಕ ದ್ರಾವಿಡ್ ಅವರು 10000ರನ್ ಗಡಿ ದಾಟಿ ಎಲ್ಲರನ್ನು ಅಚ್ಚರಿಗೆ ದೂಡಿದರು. ನ್ಯೂಜಿಲೆಂಡ್ ವಿರುದ್ಧ 22 ಎಸೆತಗಳಲ್ಲಿ 50ರನ್ ಬಾರಿಸಿ ಎರಡನೇ ವೇಗದ ಅರ್ಧಶತಕ ಬಾರಿಸಿದರು. ದ್ರಾವಿಡ್ ರನ್ ಸರಾಸರಿ 39.16, 12 ಶತಕ ಬಾರಿಸಿದ್ದಾರೆ.

ಎಂಎಸ್ ಧೋನಿ 10123

ಎಂಎಸ್ ಧೋನಿ 10123

ಮಾಜಿ ನಾಯಕ ಎಂಎಸ್ ಧೋನಿ ಅವರು 50.90ರನ್ ಸರಾಸರಿ ಹೊಂದಿದ್ದು, ಕೊಹ್ಲಿ ನಂತರ 50ಪ್ಲಸ್ ರನ್ ಸರಾಸರಿ ಹೊಂದಿದ್ದು 10 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. 5 ರಿಂದ 7ನೇ ಕ್ರಮಾಂಕದಲ್ಲಿ ಆಡಿ, ಪಂದ್ಯ ಮುಗಿಸುವ ಛಾತಿಯುಳ್ಳವರು.

10,000ರನ್ ಕ್ಲಬ್ ನಲ್ಲಿರುವ ಆಟಗಾರರು

10,000ರನ್ ಕ್ಲಬ್ ನಲ್ಲಿರುವ ಆಟಗಾರರು

ಸಚಿನ್ ತೆಂಡೂಲ್ಕರ್ : 18426 ರನ್
ಕುಮಾರ್ ಸಂಗಕ್ಕಾರ : 14,234
ರಿಕಿ ಪಾಂಟಿಂಗ್ : 13,704
ಸನತ್ ಜಯಸೂರ್ಯ : 13,430
ಮಹೇಲ ಜಯವರ್ದನೆ : 12,650
ಇನ್ಜಾಮಾಮ್ ಉಲ್ ಹಕ್ : 11,739
ಜಾಕ್ ಕಾಲೀಸ್ : 11,579
ಸೌರವ್ ಗಂಗೂಲಿ : 11363
ರಾಹುಲ್ ದ್ರಾವಿಡ್ : 10889
ಬ್ರಿಯಾನ್ ಲಾರಾ : 10405
ತಿಲಕರತ್ನೆ ದಿಲ್ಶನ್ : 10290
ಮಹೇಂದ್ರ ಸಿಂಗ್ ಧೋನಿ : 10123*
ವಿರಾಟ್ ಕೊಹ್ಲಿ : 10,060*

Story first published: Wednesday, October 24, 2018, 17:28 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X