ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ 3 ಫಾರ್ಮೆಟ್‌ನಲ್ಲಿ ನಾಯಕತ್ವ ಬಿಟ್ಟುಕೊಡುವುದು ಉತ್ತಮ: ಶಾಹಿದ್ ಅಫ್ರಿದಿ

Shahid afridi

ಟಿ20 ಫಾರ್ಮೆಟ್‌ನಲ್ಲಿ ಈಗಾಗಲೇ ನಾಯಕತ್ವ ತ್ಯಜಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ನಲ್ಲಿ ನಾಯಕತ್ವ ಬಿಟ್ಟುಕೊಟ್ಟರೆ, ಬ್ಯಾಟ್ಸ್‌ಮನ್ ಆಗಿ ಇನ್ನಷ್ಟು ಉತ್ತಮ ಸಾಧನೆ ಮಾಡಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಚುಟುಕು ಫಾರ್ಮೆಟ್‌ನ ನಾಯಕತ್ವದಿಂದ ಹಿಂದೆ ಸರಿದ್ರು. ಆದರೆ ವಿರಾಟ್ ಮುಂದಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲೂ ನಾಯಕತ್ವ ತ್ಯಜಿಸಿದ್ರೆ ಮಾತ್ರ ಇನ್ನುಳಿದ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮತ್ತಷ್ಟು ಎತ್ತರದ ಸಾಧನೆ ಮಾಡಬಹುದು ಎಂದು ಅಫ್ರಿದಿ ಕೊಹ್ಲಿಗೆ ಸಲಹೆ ನೀಡಿದ್ದಾರೆ.

''ಸಮಾ ಟಿವಿ ಚಾನೆಲ್'ನಲ್ಲಿ ಮಾತನಾಡಿದ ಆಫ್ರಿದಿ, ಭಾರತ ಟಿ20 ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ನೇಮಿಸುವ ಬಿಸಿಸಿಐ ನಿರ್ಧಾರ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ನಾಯಕನಾಗಿ ನಿವೃತ್ತಿ ಹೊಂದಲು ನಿರ್ಧರಿಸಿದರೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ'' ಎಂದು ಅಫ್ರಿದಿ ತಿಳಿಸಿದ್ದಾರೆ. ಅಫ್ರಿದಿ ಐಪಿಎಲ್ 2008 ರಲ್ಲಿ ಡೆಕ್ಕನ್ ಚಾರ್ಜಸ್ ಫ್ರಾಂಚೈಸಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆಡಿದ್ದಾರೆ.

"ನಾನು ರೋಹಿತ್ ಅವರೊಂದಿಗೆ ಒಂದು ವರ್ಷ ಆಡಿದ್ದೇನೆ ಮತ್ತು ಅವರು ಉನ್ನತ ಮನಸ್ಥಿತಿ ಹೊಂದಿರುವ ಅತ್ಯುತ್ತಮ ಆಟಗಾರರಾಗಿದ್ದಾರೆ. ಅವರ ದೊಡ್ಡ ಸಾಮರ್ಥ್ಯ ಅವರು ಅಗತ್ಯವಿರುವಲ್ಲಿ ನಿರಾಳವಾಗಿರಬಹುದು ಮತ್ತು ಹೆಚ್ಚು ಅಗತ್ಯವಿರುವಾಗ ಆಕ್ರಮಣಶೀಲತೆಯನ್ನು ತೋರಿಸುವುದು" ಎಂದು ಅವರು ಹೇಳಿದರು.

ODI ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಲು ಬಿಸಿಸಿಐ ಬಯಸುತ್ತಿದ್ಯಾ? ಹೌದು ಎನ್ನುತ್ತಿದೆ ವರದಿ!ODI ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಲು ಬಿಸಿಸಿಐ ಬಯಸುತ್ತಿದ್ಯಾ? ಹೌದು ಎನ್ನುತ್ತಿದೆ ವರದಿ!

ಟಿ 20 ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ನಿರ್ಧಾರದ ಕುರಿತು, ಮಾತನಾಡಿದ ಅಫ್ರಿದಿ, ವಿರಾಟ್ ಮೂರು ಫಾರ್ಮೆಟ್‌ನಲ್ಲಿ ನಾಯಕತ್ವವನ್ನು ತ್ಯಜಿಸಬೇಕು ಮತ್ತು ಈಗ ಎಲ್ಲಾ ಮೂರು ಸ್ವರೂಪಗಳಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು ಮತ್ತು ಆನಂದಿಸಬೇಕು ಎಂದು ಹೇಳಿದರು.

"ವಿರಾಟ್ ನಾಯಕತ್ವದಿಂದ ಕೆಳಗಿಳಿಯಬೇಕು ಮತ್ತು ಅವರ ಉಳಿದಿರುವ ಕ್ರಿಕೆಟ್ ಅನ್ನು ಮೃದ್ಧವಾಗಿ ಆನಂದಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರು ಅಗ್ರ ಬ್ಯಾಟ್ಸ್‌ಮನ್ ಮತ್ತು ಅವರು ತಮ್ಮ ಮನಸ್ಸಿನ ಮೇಲೆ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಬಹುದು. ಅವರು ತಮ್ಮ ಕ್ರಿಕೆಟ್ ಅನ್ನು ಆನಂದಿಸಬಹುದು" ಎಂದು ಅಫ್ರಿದಿ ಹೇಳಿದರು.

ಇತ್ತೀಚೆಗೆ ಸಂದರ್ಶನವೊಂದರೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ವಿರಾಟ್ ಏಕದಿನ ನಾಯಕತ್ವವನ್ನು ತ್ಯಜಿಸಬಹುದೆಂದು ಸುಳಿವು ನೀಡಿದ್ದರು.

"ಕೆಂಪು-ಚೆಂಡಿನ ಕ್ರಿಕೆಟ್‌ನಲ್ಲಿ(ಟೆಸ್ಟ್‌), ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಕಳೆದ 5 ವರ್ಷಗಳಿಂದ ವಿಶ್ವದ ನಂ 1 ತಂಡವಾಗಿದೆ. ಆದ್ದರಿಂದ ಅವರು ಬಿಟ್ಟುಕೊಡಲು ಬಯಸದಿದ್ದರೆ ಅಥವಾ ಅವರು ಮಾನಸಿಕವಾಗಿ ದಣಿದಿದ್ದರೆ ಹಾಗೂ ಅವರು ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕೆಂದು ಹೇಳಿದರೆ ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದು, ಅದು ತಕ್ಷಣ ಸಂಭವಿಸುತ್ತದೆ ಎಂದು ಭಾವಿಸಬೇಡಿ . ಆದರೆ ಅದು ಸಂಭವಿಸಬಹುದು ಎಂದು ರವಿಶಾಸ್ತ್ರಿ ಇಂಡಿಯಾ ಟುಡೇಗೆ ತಿಳಿಸಿದರು.

ಇದರರ್ಥ ವಿರಾಟ್ ಕೊಹ್ಲಿ ಸದ್ಯ ದಿಢೀರ್ ಎಂದು ಏಕದಿನ ನಾಯಕತ್ವ ಬಿಟ್ಟುಕೊಡದಿದ್ದರೂ, ಮುಂದಿನ ದಿನಗಳಲ್ಲಿ ಖಂಡಿತವಾಗಿಯು ಬಿಟ್ಟುಕೊಡುವ ಸಮಯ ಎದುರಾಗುತ್ತದೆ ಎಂದು ಶಾಸ್ತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.

ತನ್ನ ಮಾತನ್ನ ಮುಂದುವರಿಸಿದ ರವಿಶಾಸ್ತ್ರಿ ''ಏಕದಿನ ಪಂದ್ಯದಲ್ಲೂ ಇದೇ ಆಗಬಹುದು. ಅವರು ಕೇವಲ ಟೆಸ್ಟ್ ನಾಯಕತ್ವದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಹೇಳಬಹುದು. ಅವನ ಮನಸ್ಸು ಮತ್ತು ದೇಹವೇ ಆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದೇನು ಕೊಹ್ಲಿಯೇ ಮೊದಲು ಮಾಡಿದಂತಿಲ್ಲ. ಹಿಂದೆ ಅನೇಕ ನಾಯಕರು ತಮ್ಮ ಬ್ಯಾಟಿಂಗ್ ಕಡೆಗೆ ಗಮನ ಕೇಂದ್ರೀಕರಿಸಲು ನಾಯಕತ್ವ ತ್ಯಜಿಸಿದ್ದಾರೆ'' ಎಂದು ಶಾಸ್ತ್ರಿ ಹೇಳಿದರು.

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

Story first published: Saturday, November 13, 2021, 19:49 [IST]
Other articles published on Nov 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X