ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್

Virat Kohli should have avoided his outburst during 3rd test against SA says Sunil Gavaskar

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಭಾರೀ ದೊಡ್ಡ ಮಟ್ಟದ ವಿವಾದ ಹಾಗೂ ಚರ್ಚೆಗೆ ಕಾರಣವಾಗಿರುವ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. ಕಳೆದ ವರ್ಷದಿಂದಲೇ ಹಲವಾರು ವಿವಾದ ಹಾಗೂ ಟೀಕೆಗಳಿಗೆ ಗುರಿಯಾಗುತ್ತಾ ಬಂದಿರುವ ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿಯೂ ಟೀಕಾಕಾರರಿಗೆ ಆಹಾರವಾಗಿದ್ದಾರೆ.

ಈ ಕಾರಣಕ್ಕಾಗಿ ಕೆಎಲ್ ರಾಹುಲ್‌ಗೆ ಯಾವುದೇ ನಾಯಕತ್ವ ಕೊಡಬಾರದು ಎಂದ ಗೌತಮ್ ಗಂಭೀರ್!ಈ ಕಾರಣಕ್ಕಾಗಿ ಕೆಎಲ್ ರಾಹುಲ್‌ಗೆ ಯಾವುದೇ ನಾಯಕತ್ವ ಕೊಡಬಾರದು ಎಂದ ಗೌತಮ್ ಗಂಭೀರ್!

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಎಲ್ಲಾ ಆವೃತ್ತಿಗಳಲ್ಲಿಯೂ ಟೀಂ ಇಂಡಿಯಾದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಪ್ರಸ್ತುತ ಈ ಎಲ್ಲಾ ನಾಯಕತ್ವದ ಜವಾಬ್ದಾರಿಗಳನ್ನು ಕೂಡ ಕಳೆದುಕೊಂಡಿದ್ದು ಕೇವಲ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ. ಮೊದಲಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಸ್ವ ಇಚ್ಛೆಯಿಂದ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದರು. ನಂತರ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದು ಹಾಕಿತು.

ನಾಯಕತ್ವಕ್ಕಾಗಿ ರೋಹಿತ್, ರಾಹುಲ್ ಮಧ್ಯ ಪೈಪೋಟಿ ಶುರು; ಅನುಮಾನ ಮೂಡಿಸಿದ ರಾಹುಲ್‌ನ ಆ ಹೇಳಿಕೆ!ನಾಯಕತ್ವಕ್ಕಾಗಿ ರೋಹಿತ್, ರಾಹುಲ್ ಮಧ್ಯ ಪೈಪೋಟಿ ಶುರು; ಅನುಮಾನ ಮೂಡಿಸಿದ ರಾಹುಲ್‌ನ ಆ ಹೇಳಿಕೆ!

ಹೀಗೆ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ತೆಗೆದುಹಾಕಿದ ನಂತರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಬಿಸಿಸಿಐಗೆ ಟಾಂಗ್ ನೀಡುವಂತಹ ಉತ್ತರಗಳನ್ನು ಕೊಟ್ಟು ಟೀಕೆಗಳಿಗೆ ಒಳಗಾಗಿದ್ದರು. ಇನ್ನು ವಿರಾಟ್ ಮೈದಾನದಲ್ಲಿ ಆಗಲಿ ಅಥವಾ ಮೈದಾನದಿಂದ ಹೊರಗಾಗಲಿ ಯಾವಾಗಲೂ ನೇರವಾದ ಉತ್ತರಗಳನ್ನು ಮುಖದ ಮೇಲೆ ಹೇಳಿಬಿಡುತ್ತಾರೆ. ಇನ್ನು ಮೈದಾನದಲ್ಲಂತೂ ವಿರಾಟ್ ಕೊಹ್ಲಿ ವಿರಾಟ ರೂಪವನ್ನು ನಾವು ನೀವೆಲ್ಲ ಹಲವಾರು ಬಾರಿ ಕಂಡಿದ್ದೇವೆ. ಹೀಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಕೋಪ ಅವತಾರ ತಾಳುವುದರ ಮೂಲಕ ಈ ಹಿಂದೆ ಸಾಕಷ್ಟು ಬಾರಿ ಟೀಕೆಗಳಿಗೂ ಒಳಗಾಗಿದ್ದಾರೆ. ಇದೀಗ ಮತ್ತೊಮ್ಮೆ ಅಂತಹದ್ದೇ ವಿಚಾರದ ಕುರಿತಾಗಿ ವಿರಾಟ್ ಕೊಹ್ಲಿ ಸುದ್ದಿಯಾಗುತ್ತಿದ್ದು, ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಡಿಆರ್‌ಎಸ್ ತೀರ್ಪಿನ ಕುರಿತಾಗಿ ವಿರಾಟ್ ಕೊಹ್ಲಿ ಕೋಪಗೊಂಡು ಸ್ಟಂಪ್ ಮೈಕ್ ಬಳಿ ತೆರಳಿ ಆಕ್ರೋಶವನ್ನು ಹೊರಹಾಕಿದ್ದರು. ಆ ಕುರಿತಾಗಿ ಹಲವಾರು ಮಾಜಿ ಕ್ರಿಕೆಟಿಗರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದು ಇದೀಗ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಮಾತನಾಡಿ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ..

ಕೊಹ್ಲಿ ರೀತಿಯೇ ವಿದೇಶಿ ನಾಯಕ ಭಾರತ ನೆಲದಲ್ಲಿ ವರ್ತಿಸಿದ್ದರೆ ಸುಮ್ಮನೆ ಇರುತ್ತಿದ್ರಾ?

ಕೊಹ್ಲಿ ರೀತಿಯೇ ವಿದೇಶಿ ನಾಯಕ ಭಾರತ ನೆಲದಲ್ಲಿ ವರ್ತಿಸಿದ್ದರೆ ಸುಮ್ಮನೆ ಇರುತ್ತಿದ್ರಾ?

ತೃತೀಯ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ಬಳಿ ತೆರಳಿ ಆಕ್ರೋಶ ಹೊರಹಾಕಿದ್ದರ ವಿರುದ್ಧ ಕಿಡಿಕಾರಿರುವ ಸುನಿಲ್ ಗವಾಸ್ಕರ್ ಒಂದುವೇಳೆ ವಿದೇಶಿ ನಾಯಕನೋರ್ವ ಭಾರತ ನೆಲದಲ್ಲಿ ಪಂದ್ಯ ನಡೆಯುವಾಗ ಸ್ಟಂಪ್ ಮೈಕ್ ಬಳಿ ತೆರಳಿ ವಿರಾಟ್ ಕೊಹ್ಲಿ ರೀತಿಯೇ ವರ್ತಿಸಿದ್ದರೆ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಅದನ್ನು ವಿರೋಧಿಸದೇ ಸುಮ್ಮನೆ ಇರುತ್ತಿದ್ರಾ ಎಂಬ ಪ್ರಶ್ನೆಯನ್ನು ಹಾಕಿ ಕೊಹ್ಲಿ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಅಂದು ನಡೆದದ್ದೇನು?

ಅಷ್ಟಕ್ಕೂ ಅಂದು ನಡೆದದ್ದೇನು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯದ ವೇಳೆ ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಡಿ ಆರ್ ಎಸ್ ತೀರ್ಪು ಹೊರಬೀಳುತ್ತಿದ್ದಂತೆಯೇ ಮೈದಾನದಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಸ್ಟಂಪ್ ಬಳಿ ತೆರಳಿ ಅಳವಡಿಸಲಾಗಿದ್ದ ಮೈಕ್ ಮೂಲಕ ಅಸಮಾಧಾನವನ್ನು ಹೊರಹಾಕಿದರು. ಮೈಕ್ ಬಳಿ ತೆರಳಿದ ಕೊಹ್ಲಿ ಕೇವಲ ಎದುರಾಳಿ ತಂಡವನ್ನು ಗಮನಿಸದೇ ನಿಮ್ಮ ತಂಡದ ಕಡೆಗೂ ಗಮನವನ್ನು ಹರಿಸಿ ಎಂದು ಕೋಪದಿಂದ ಹೇಳಿದ್ದರು.

KL Rahul ಬಗ್ಗೆ ಅವರ ತಾಯಿ ಏನ್ ಹೇಳಿದ್ರು ಗೊತ್ತಾ! | Oneindia Kannada
ಆಟ ಎಂದ ಮೇಲೆ ಆಕ್ರೋಶ ಸಹಜ

ಆಟ ಎಂದ ಮೇಲೆ ಆಕ್ರೋಶ ಸಹಜ

ಇನ್ನೂ ಮುಂದುವರಿದು ಮಾತನಾಡಿರುವ ಸುನಿಲ್ ಗವಾಸ್ಕರ್ ಯಾವುದೇ ಆಟವಾದರೂ ಮೈದಾನದಲ್ಲಿ ಪಂದ್ಯ ನಡೆಯುವ ವೇಳೆ ಮಾತಿನ ಚಕಮಕಿ ಮತ್ತು ಪೈಪೋಟಿಗಳು ಇದ್ದೇ ಇರುತ್ತವೆ, ಹಾಗೆಂದ ಮಾತ್ರಕ್ಕೆ ಈ ಚಟುವಟಿಕೆಗಳನ್ನು ತೀರಾ ದೊಡ್ಡ ಹಂತಕ್ಕೆ ತೆಗೆದುಕೊಂಡು ಹೋಗುವುದು ತಪ್ಪು, ಅದರಲ್ಲಿಯೂ ಅಂತರರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತಹ ನಾಯಕರು ತಮ್ಮ ಆಕ್ರೋಶವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

Story first published: Wednesday, January 19, 2022, 18:05 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X