ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಭಾರತ ಹಾಗೂ ಇಂಗ್ಲೆಂಡ್ ನಡುವೆ ಸ್ಪರ್ಧಾತ್ಮಕ ಹೋರಾಟ ನೋಡಲು ಬಯಸುತ್ತೇನೆ"

Want to see competitive cricket from India and England in last game of the series, says Deep Dasgupta

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಗುರುವಾರದಿಂದ ಆರಂಭವಾಗಿದೆ. ಮೂರನೇ ಟೆಸ್ಟ್ ಪಂದ್ಯ ಎರಡೇ ದಿನದಲ್ಲಿ ಅಂತ್ಯವಾದ ಬಳಿಕ ಪಿಚ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿತ್ತು. ಅಂತಿಮ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟರ್ ದೀಪ್ ದಾಸ್‌ಗುಪ್ತ ಅಂತಿಮ ಪಂದ್ಯ ಐದು ದಿನಗಳ ಕಾಲ ನಡೆದು ಹೆಚ್ಚು ಸ್ಪರ್ಧಾತ್ಮವಾಗಿರುವುದನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ.

ಮಾಜಿ ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತ ಸದ್ಯ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಮಧ್ಯೆ ಕಠಿಣ ಹೋರಾಟವನ್ನು ನೋಡಲು ನಾನು ಕಾತುರನಾಗಿದ್ದೇನೆ. ಈ ಪಂದ್ಯ ನಾಲ್ಕರಿಂದ ಐದು ದಿನಗಳ ಕಾಲ ನಡೆಯುವುದನ್ನು ಬಯಸುತ್ತೇನೆ ಎಂದು ದೀಪ್ ದಾಸ್‌ಗುಪ್ತ ಹೇಳಿದ್ದಾರೆ.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

"ಈ ಪಂದ್ಯ ಐದನೇ ದಿನದಾಟದಲ್ಲಿ ಅಂತ್ಯವಾಗುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಇದು ಪಂದ್ಯದ ಅಂತಿಮ ಸೆಶನ್ ವರೆಗೂ ಮುಂದುವರಿಯಬೇಕು. ಪೈಪೋಟಿಯ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಬೇಕು. ಭಾರತ ಹಾಗೂ ಇಂಗ್ಲೆಂಡ್ ಎರಡು ಕೂಡ ಉತ್ತಮವಾದ ತಂಡಗಳು. ಅಭಿಮಾನಿಗಳಾಗಿ ನಾವು ಸ್ಪರ್ಧಾತ್ಮಕ ಕ್ರಿಕೆಟ್‌ಅನ್ನು ನೋಡಲು ಬಯಸುತ್ತೇವೆ" ಎಂದಿದ್ದಾರೆ ದೀಪ್ ದಾಸ್‌ಗುಪ್ತ.

ಇನ್ನು ಇದೇ ಸಂದರ್ಭದಲ್ಲಿ ದಾಸ್‌ಗುಪ್ತ ಟಾಸ್‌ನ ಮಹತ್ವದ ಬಗ್ಗೆ ಪ್ರತಿಕ್ರಿಯಿಸಿದರು. "ನೀವು ಯಾವ ಭಾಗದಲ್ಲಿ ಆಡುತ್ತೀರು ಎನ್ನುವುದಕ್ಕಿಂತ ಟಾಸ್ ಬಹಳ ಮುಖ್ಯವಾಗುತ್ತದೆ. ಆದರೆ ಸುದೀರ್ಘ ಪರಿಸ್ಥಿತಿಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ತಂಡಗಳಿಗೂ ಹೆಚ್ಚಿನ ಬದಲಾವಣೆ ಮಾಡಲಾರದು. ನನ್ನ ಪ್ರಕಾರ ಅದು ಸರಿಯಾಗಿದೆ. ಇದರ ಜೊತೆಗೆ ಫಲಿತಾಂಶ ಸಂಪೂರ್ಣವಾಗಿ ಅಥವಾ ಬಹುತೇಕವಾಗಿ ಟಾಸ್ ಅನ್ನು ಅವಲಂಬಿರುವುದಿಲ್ಲ. ಅದು ಒಂದು ತಪ್ಪು ಕಲ್ಪನೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವುಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

ಇನ್ನು ಸುದೀರ್ಘ ಕಾಲದಿಂದ ಟೀಮ್ ಇಂಡಿಯಾ ಪರವಾಗಿ ಶತಕವನ್ನು ಬಾರಿಸಲು ವಿಫಲವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಬಾರಿಸಲಿ ಎಂದು ದೀಪ್ ದಾಸ್‌ಗುಪ್ತ ಹಾರೈಸಿದ್ದಾರೆ.

Story first published: Thursday, March 4, 2021, 12:28 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X