ಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋ

ಶಾರ್ಜಾ: ಅದ್ದೂರಿ ನಾಟಕವೊಂದು ಮುಗಿದ ಮೇಲೆ ವೇದಿಕೆ, ಕಾರ್ಯಕ್ರಮ ನಡೆದ ಸ್ಥಳ ಹೇಗಿರತ್ತೆ? ಅಸ್ತವ್ಯಸ್ತವಾಗಿರುವ ಆಸನಗಳು, ಕಳೆಗುಂದಿದ ಅಲಂಕಾರ, ವೇದಿಕೆಯಲ್ಲಿ ವಿಜೃಂಭಿಸಿದವರ ಬಣ್ಣ ಮಾಸಿದ ಮುಖಗಳು, ಅಲ್ಲಿಲ್ಲಿ ಬಿದ್ದುಕೊಂಡಿರುವ ಕಸ-ಕಡ್ಡಿಗಳೆಲ್ಲ ದೊಡ್ಡ ಮಟ್ಟದ ಸಂಭ್ರಮವೊಂದು ಕೊನೆಯಾಗಿದೆ ಅನ್ನೋದಕ್ಕೆ ಸಾಕ್ಷಿಯಾಗುತ್ತವೆ ಅಲ್ಲವೆ? ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟವೂ ಮುಗಿದಿದೆ.

ಆರ್‌ಸಿಬಿ ಟ್ರೋಲರ್‌ಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಟ್ವೀಟ್ ತಿರುಗೇಟು!ಆರ್‌ಸಿಬಿ ಟ್ರೋಲರ್‌ಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಟ್ವೀಟ್ ತಿರುಗೇಟು!

2021ರ ಐಪಿಎಲ್ ಸೀಸನ್‌ ಆರಂಭಕ್ಕೂ ಮುನ್ನ 'ಈ ಸಲ ಕಪ್ ನಮ್ದೇ' ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಜೋಶು ಈಗ ಖಾಲಿ ಖಾಲಿಯಾಗಿದೆ. ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ 4 ವಿಕೆಟ್‌ನಿಂದ ಸೋತು ನಿರಾಸೆ ಅನುಭವಿಸಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!

ಈ ಐಪಿಎಲ್ ಸೀಸನ್‌ ಮುಗಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆಟಗಾರರು, ಕೋಚ್‌ಗಳ ಭಾವನೆಗಳು ಹೇಗಿತ್ತು, ಅವರ ಸಂದೇಶ ಏನಿತ್ತು ಎನ್ನುವ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದೊಳಗಿನ ಚಿತ್ರಣ ಕೆಳಗಿವೆ ನೋಡಿ..

ಕಪ್‌ ಗೆಲ್ಲದ ತಂಡವೆಂಬ ಅವಮಾನ, ಅಸಹಾಯಕತೆ..

ಕಪ್‌ ಗೆಲ್ಲದ ತಂಡವೆಂಬ ಅವಮಾನ, ಅಸಹಾಯಕತೆ..

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಆರ್‌ಸಿಬಿ, ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಶ್ರೀಕರ್ ಭಾರತ್ 9, ಗ್ಲೆನ್ ಮ್ಯಾಕ್ಸ್‌ವೆಲ್ 15, ಎಬಿ ಡಿವಿಲಿಯರ್ಸ್ 11, ಡೇನಿಯಲ್ ಕ್ರಿಶ್ಚಿಯನ್ 9, ಶಹಬಾಜ್ ಅಹ್ಮದ್ 13, ಹರ್ಷಲ್ ಪಟೇಲ್ 8 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ರಾಹುಲ್ ತ್ರಿಪಾಠಿ 6, ಇಯೋನ್ ಮಾರ್ಗನ್ 5, ದಿನೇಶ್ ಕಾರ್ತಿಕ್ 10, ಶಕೀಬ್ ಅಲ್ ಹಸನ್ 9, ಸುನಿಲ್ ನರೈನ್ 26 ರನ್‌ನೊಂದಿಗೆ 19.4 ಓವರ್‌ಗೆ 6 ವಿಕೆಟ್ ಕಳೆದು 139 ರನ್‌ ಗಳಿಸಿ ಗೆಲುವನ್ನಾಚರಿಸಿತು. ಕೊಹ್ಲಿ ಆರ್‌ಸಿಬಿಗೆ ನಾಯಕರಾಗಿ ಆಡಿದ ಕೊನೇ ಸೀಸನ್‌ ಇದು. ಹೀಗಾಗಿ ಈಗಲೂ ಕಪ್‌ ಗೆಲ್ಲದ ತಂಡವೆಂಬ ಹಣಪಟ್ಟಿ ಬಿಚ್ಚಿಡಲಾದ ಅಸಹಾಯಕತೆ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಾಣಸಿಕ್ಕಿತ್ತು.

ಆಟ ಮುಗಿದ ಮೇಲೆ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್..

ಆಟ ಮುಗಿದ ಮೇಲೆ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್..

ಕೆಕೆಆರ್ ವಿರುದ್ಧ ಸೋಲನುಭವಿಸಿ ಈ ಬಾರಿಯ ಟೂರ್ನಿಯಿಂದ ಹೊರ ಬಿದ್ದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ ಹೇಗಿತ್ತು? ಅಲ್ಲಿದ್ದವರ ಭಾವನೆಗಳು ಹೇಗಿದ್ದವು, ಸಂದೇಶ ಏನಾಗಿತ್ತು ಎನ್ನುವ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ಹತಾಶರಾಗಿ ಡ್ರೆಸ್ಸಿಂಗ್‌ ರೂಮ್‌ಗೆ ಕಾಲಿಡುತ್ತಿರುವ ಆಟಗಾರರಿಂದ ಹಿಡಿದು ಮುಂದಿನ ಸೀಸನ್‌ಗೆ ಆತ್ಮಸ್ಥೈರ್ಯ ತುಂಬಿಕೊಂಡು ಮತ್ತೆ ಸಿದ್ಧರಾಗುತ್ತಿರುವ ಸ್ಫೂರ್ತಿಯ ಚಿತ್ರಣಗಳನ್ನು ಈ ಯೂಟ್ಯೂಬ್ ವಿಡಿಯೋ ನೀಡಿದೆ. ಕಪ್‌ ಗೆಲ್ಲಲಾಗಲಿಲ್ಲ ಎನ್ನುವ ನಿರಾಸೆ ಆರ್‌ಸಿಬಿ ತಂಡದ ಎಲ್ಲಾ ಆಟಗಾರರರಲ್ಲಿ, ಕೋಚ್‌ಗಳ ಮುಖಗಳಲ್ಲಿ ಸುಳಿದಾಡುತ್ತಿರುವುದಕ್ಕೆ ವಿಡಿಯೋ ಸಾಕ್ಷಿ ಹೇಳುತ್ತದೆ. ಆದರೆ ಆಟವೆಂದರೆ ಹಾಗೇನೆ; ಇಲ್ಲಿ ಸೋಲು-ಗೆಲುವು ಸ್ವೀಕರಿಸಿ ಮುನ್ನಡೆಯೋದೇ ಮುಖ್ಯ. ಇವತ್ತು ಕಪ್‌ ಕೈತಪ್ಪಿದರೂ ಮುಂದೊಮ್ಮೆ ಕಪ್‌ ಗೆದ್ದೇವು ಎನ್ನುವ ಸಂದೇಶ ಆರ್‌ಸಿಬಿ ಬಳಗದಿಂದ ಬಂದಿದೆ.

ಆರ್‌ಸಿಬಿ ಪ್ರಮುಖರಿಂದ ಭಾವನಾತ್ಮಕ ಮಾತುಗಳು

ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಂಡದ ಪ್ರಮುಖರು ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ವಿಡಿಯೋದಲ್ಲಿ ಕಾಣಸಿಕೊಂಡಿರುವ ಎಬಿ ಡಿ ವಿಲಿಯರ್ಸ್, "ಅದ್ಭುತ ಫ್ರಾಂಚೈಸಿ ಆರ್‌ಸಿಬಿಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ವರ್ಷ ಟ್ರೋಫಿ ಗೆಲ್ಲಲಾಗದ್ದಕ್ಕೆ ಕ್ಷಮಿಸಿ, ಹಾಗಂತ ಇಲ್ಲಿಗೇ ಕೆಲಸ ಮುಗಿದಿಲ್ಲ. ನಾವು ಇನ್ನೂ ಬಲಿಷ್ಠರಾಗಿ ಕಮ್‌ಬ್ಯಾಕ್ ಮಾಡ್ತೇವೆ," ಎಂದಿದ್ದಾರೆ. ಆ ಬಳಿಕ ಮಾತನಾಡಿರುವ ಆರ್‌ಸಿಬಿ ಹೆಡ್ ಕೋಚ್ ಮೈಕ್ ಹೆಸನ್, "ಇಲ್ಲಿ ಕೆಲವಾರು ಆಟಗಾರರು ಬರುತ್ತಾರೆ ಹೋಗುತ್ತಾರೆ. ತಂಡ ಉತ್ತಮ ಪ್ರದರ್ಶನ ನೀಡಿದೆ. ವೈಯಕ್ತಿಕವಾಗಿ ಎಲ್ಲರೂ ತಮ್ಮ ಪ್ರಯತ್ನ ಮಾಡಿದ್ದೀರಿ," ಎಂದಿದ್ದಾರೆ. ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಕೂಡ ಮಾತನಾಡಿ ತನ್ನ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೊನೆಯಾಗಿ ಮಾತನಾಡಿರುವ ನಾಯಕ ಕೊಹ್ಲಿ ಕೂಡ ನಿರಾಶೆಯಾಗಿದ್ದರೂ ನಾವು ಹತಾಶರಾಗಿಲ್ಲ. ಮುಂದೆಯೂ ನಾನು ಈ ಫ್ರಾಂಚೈಗೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಪಂದ್ಯ ಸೋತು, ಪ್ರಶಸ್ತಿ ಕೈ ತಪ್ಪಿದ್ದಾಗ ಆ ಸೋಲಿನ ಕ್ಷಣವನ್ನು ಹೇಗೆ ಸ್ಫೂರ್ತಿಯಿಂದ ಸ್ವೀಕರಿಸಬೇಕು ಅನ್ನೋದರ ಚಿತ್ರಣ ಈ ವಿಡಿಯೋದಲ್ಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 13 - October 23 2021, 03:30 PM
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 13:36 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X