ವಿಶ್ವದ ಅತ್ಯುತ್ತಮ ಟಿ20 ಆಟಗಾರ ಈತ: ಭಾರತೀಯನನ್ನು ಹೊಗಳಿದ ವೇಯ್ನ್ ಪಾರ್ನೆಲ್

ಏಷ್ಯಾ ಕಪ್‌ನಲ್ಲಿ ಭಾರತ ತಂಡ ಎಡವಿದ್ದರೂ ಅದಾದ ಬಳಿಕ ಹಾಗೂ ಅದಕ್ಕೂ ಹಿಂದಿನ ಟಿ2 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಟಿ20 ವಿಶ್ವಕಪ್‌ಗೆ ಅದ್ಭುತ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಟೀಮ್ ಇಂಡಿಯಾದ ಪ್ರಮುಖ ಎಲ್ಲಾ ಆಟಗಾರರು ಕೂಡ ವಿಶ್ವಕಪ್‌ಗೆ ಮುನ್ನ ಫಾರ್ಮ್‌ಗೆ ಮರಳಿದ್ದು ಚುಟುಕು ಮಹಾ ಸಮರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವೇಯ್ನ್ ಪಾರ್ನೆಲ್ ಭಾರತೀತ ಪ್ರಮುಖ ಆಟಗಾರನೊಬ್ಬನ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾದ ಪ್ರಮುಖ ದಾಂಡಿಗ ಸೂರ್ಯಕುಮಾರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವ ವೇಯ್ನ್ ಪಾರ್ನೆಲ್ ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ ಸೂರ್ಯಕುಮಾರ್ ಯಾದವ್ ಎಂದಿದ್ದಾರೆ. ಅಲ್ಲದೆ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದಿದ್ದಾರೆ.

 ಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ

2ನೇ ಶ್ರೇಯಾಂಕದಲ್ಲಿರುವ ಸೂರ್ಯಕುಮಾರ್

2ನೇ ಶ್ರೇಯಾಂಕದಲ್ಲಿರುವ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಆಟಗಾರನಾಗಿದ್ದಾರೆ. ಕಳೆದ ಸುಮಾರು ಒಂದು ವರ್ಷಗಳಿಂದ ಸೂರ್ಯಕುಮಾರ್ ಯಾದವ್ ಸತತವಾಗಿ ಅದ್ಬುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಸ್ಥಿರ ಪ್ರದರ್ಶನ ನೀಡುತ್ತಾ ತಂಡಕ್ಕೆ ಆಸರೆಯಾಗಿದ್ದಾರೆ. ಅತ್ಯಂತ ವೇಗವಾಗಿ ರನ್‌ಗಳಿಸುವ ಸಾಮರ್ಥ್ಯವಿರುವ ಸೂರ್ಯ ಚುಟುಕು ಕ್ರಿಕೆಟ್‌ಗೆ ಹೇಳಿಮಾಡಿಸಿದ ಆಟಗಾರನಂತಿದ್ದಾರೆ. ಅಲ್ಲದೆ ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಅಟ್ಟುವ ಸಾಮರ್ಥ್ಯವಿರುವ ಆಟಗಾರ ಎಂಬ ಹೆಗ್ಗಳಿಕೆಗೂ ಸೂರ್ಯಕುಮಾರ್ ಪಾತ್ರವಾಗಿದ್ದಾರೆ.

ಸೂರ್ಯಕುಮಾರ್ ಸಾಮರ್ಥ್ಯವನ್ನು ಪ್ರಶಂಸಿಸಿದ ಪಾರ್ನೆಲ್

ಸೂರ್ಯಕುಮಾರ್ ಸಾಮರ್ಥ್ಯವನ್ನು ಪ್ರಶಂಸಿಸಿದ ಪಾರ್ನೆಲ್

ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪಾರ್ನೆಲ್ ಸದ್ಯ ಭಾರತದ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಬ್ಯಾಟರ್ ಸೂರ್ಯಕುಮಾರ್ ವಿಚಾರವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಸ್ತುತ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಟಗಾರ ಎಂದಿದ್ದಾರೆ. "ಕಳೆದ ಒಂದೆರಡು ತಿಂಗಳಿನಲ್ಲಿ ನಾನು ನೋಡಿರುವ ಪ್ರಕಾರ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯ ಅತ್ಯುತ್ತಮ ಆಟಗಾರ ಎನಿಸುತ್ತದೆ. ಅವರು 360 ಡಿಗ್ರಿಯಲ್ಲಿಯೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಹೀಗಾಗಿ ಆತನಿಗೆ ಬೌಲರ್‌ಗಳಿಗೆ ದಾಳಿ ನಡೆಸಲು ಅತ್ಯಂತ ಕಠಿಣವಾಗಿದೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.

ದ. ಆಫ್ರಿಕಾದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ ಪಾರ್ನೆಲ್

ದ. ಆಫ್ರಿಕಾದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ ಪಾರ್ನೆಲ್

ಇನ್ನು ಭಾರತ ಹಾಘೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾದ ಅಗ್ರಕ್ರಮಾಂಕದ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ವೇಯ್ನ್ ಪಾರ್ನೆಲ್ ಅದೊಂದು ಅತ್ಯಂತ ಕಠಿಣವಾದ ಪಿಚ್ ಆಗಿತ್ತು. ಭಾರತ ಆ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿತು. ಈ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದಿದ್ದಾರೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೇಯ್ನ್ ಪಾರ್ನೆಲ್.

ಭಾನುವಾರ ನಡೆಯಲಿದೆ ಎರಡನೇ ಪಂದ್ಯ

ಭಾನುವಾರ ನಡೆಯಲಿದೆ ಎರಡನೇ ಪಂದ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ತಣಮಡ ಭರ್ಜರಿ ಗೆಲುವು ಸಾಧಿಸಿರುವ ಕಾರಣ ಈ ಪಂದ್ಯ ದಕ್ಷಿಣ ಆಫ್ರಿಕಾ ಪಾಲಿಗೆ ಮಹತ್ವದ್ದಾಗಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸರಣಿಯಲ್ಲಿ ಜೀವಂತವಾಗಿರಲು ಸಾಧ್ಯ. ಭಾರತ ಗೆದ್ದರೆ ಈ ಸರಣಿಯನ್ನು ಭಾರತ ವಶಕ್ಕೆ ಪಡೆಯಲಿದೆ. ಈ ಮೂಲಕ ಚುಟುಕು ವಿಶ್ವಕಪ್‌ಗೆ ಅತ್ಯಂತ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, October 1, 2022, 17:45 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X