ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಐಸೊಲೇಶನ್ ಅವಧಿ ಮುಕ್ತಾಯ, ಅಭ್ಯಾಸ ಪಂದ್ಯಕ್ಕೆ ಸಿದ್ಧತೆ

West Indies complete isolation period, set for practice match

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಕೊರೊನಾವೈರಸ್ ಸಲುವಾಗಿ ನೀಡಲಾಗಿದ್ದ 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾರ್ಗಸೂಚಿಯನ್ನು ಪೂರ್ಣಗೊಳಿಸಿದೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಮೂರು ದಿನಗಳ ಅಂತಾರಾಷ್ಟ್ರೀಯ ಅಭ್ಯಾಸ ಪಂದ್ಯಕ್ಕಾಗಿ ವಿಂಡೀಸ್ ತಂಡ ಸಿದ್ಧತೆ ನಡೆಸುತ್ತಿದೆ. ಜೂನ್ 9ರಂದು ಇಂಗ್ಲೆಂಡ್ ತಲುಪಿದ್ದ ಕೆರಿಬಿಯನ್ನರು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಓರ್ಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕ್ವಾರಂಟೈನ್‌ನಲ್ಲಿದ್ದು, 14 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್

ವೆಸ್ಟ್ ಇಂಡೀಸ್ ತಂಡ ಮ್ಯಾನ್ಚೆಸ್ಟರ್‌ನಲ್ಲಿ ಗುರುವಾರ (ಜೂನ್ 25) ಅಭ್ಯಾಸದಲ್ಲಿ ಪಾಲ್ಗೊಳ್ಳಲಿವೆ. ಇಂಗ್ಲೆಂಡ್‌ಗೆ ಬಂದಿಳಿದ ಬಳಿಕ ವಿಂಡೀಸ್ ತಂಡ ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿತ್ತು.

ಐಪಿಎಲ್‌ಗೆ ಶೀಘ್ರ ಕಮ್‌ಬ್ಯಾಕ್‌ ಮಾಡುವ ಸುಳಿವಿತ್ತ ಎಸ್‌ ಶ್ರೀಶಾಂತ್ಐಪಿಎಲ್‌ಗೆ ಶೀಘ್ರ ಕಮ್‌ಬ್ಯಾಕ್‌ ಮಾಡುವ ಸುಳಿವಿತ್ತ ಎಸ್‌ ಶ್ರೀಶಾಂತ್

ಇಂಗ್ಲೆಂಡ್‌ಗೆ ಬಂದ ವಿಂಡೀಸ್ ತಂಡದಲ್ಲಿ 30 ಮಂದಿಯಿದ್ದರು (ಆಟಗಾರರು, ಸಿಬ್ಬಂದಿ ಸೇರಿ). ಬಳಿಕ ತಂಡವು ಮೈದಾನದ ಹೋಟೆಲ್‌ನಲ್ಲಿ ಐಸೊಲೇಶನ್‌ನಲ್ಲಿತ್ತು.

ಜುಲೈ 1ರಿಂದ ಅಭ್ಯಾಸ ಪಂದ್ಯ

ಜುಲೈ 1ರಿಂದ ಅಭ್ಯಾಸ ಪಂದ್ಯ

ಮೂರು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ, ಮೊದಲ ಕೊರೊನಾವೈರಸ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಬಳಿಕ ವೆಸ್ಟ್ ಇಂಡೀಸ್-ಇಂಗ್ಲೆಂಡ್ ತಂಡಗಳು ಜುಲೈ 1ರಿಂದ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿವೆ. ಟೆಸ್ಟ್ ಸರಣಿ ಜುಲೈ 8ರಿಂದ ಆರಂಭವಾಗಲಿವೆ.

ಕಾರ್ಮಿಕರಿಗೆ ಗೌರವಾರ್ಥ ಸರಣಿ

ಕಾರ್ಮಿಕರಿಗೆ ಗೌರವಾರ್ಥ ಸರಣಿ

#raisethebatseries ಎಂದು ಕರೆಯಲಾಗುತ್ತಿರುವ ಈ ಟೆಸ್ಟ್ ಸರಣಿ ಕೊರೊನಾವೈರಸ್ ವಿರುದ್ಧ ದುಡಿದ ಕಾರ್ಮಿಕರಿಗೆ ಗೌರವಾರ್ಥವಾಗಿ ನಡೆಯಲಿದೆ. ಮೊದಲ ಟೆಸ್ಟ್‌ನ ಆರಂಭಿಕ ದಿನದಂದು ಇಂಗ್ಲೆಂಡ್ ತಂಡದ ಆಟಗಾರರು ಪ್ರಮುಖ ಕಾರ್ಮಿಕರ ಹೆಸರುಗಳಿರುವ ಟೀಶರ್ಟ್ ಧರಿಸಲಿದ್ದಾರೆ. ಟೀಚರ್‌ಗಳು, ಡಾಕ್ಟರ್‌ಗಳು, ನರ್ಸ್‌ಗಳು, ಜಾಗೃತಿದಾರರು, ಸಾಮಾಜಿಕ ಕಾರ್ಯಕರ್ತರು ಇತ್ಯಾದಿ ಕಾರ್ಮಿಕರ ಹೆಸರುಗಳು ಆಂಗ್ಲ ಆಟಗಾರರ ಟೀಶರ್ಟ್‌ನಲ್ಲಿರುಲಿವೆ.

ಎರಡು ತಂಡಗಳಾಗಿ ಅಭ್ಯಾಸ

ಎರಡು ತಂಡಗಳಾಗಿ ಅಭ್ಯಾಸ

ಕಡ್ಡಾಯ ಕ್ವಾರಂಟೈನ್ ಪೂರ್ಣಗೊಳಿಸಿರುವ ಆಟಗಾರರು ಗುರುವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. ಅಭ್ಯಾಸಕ್ಕಿಳಿಯುವ ಆಟಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ತಂಡ ಬೆಳಗ್ಗೆ ಅಭ್ಯಾಸದಲ್ಲಿ ಪಾಲ್ಗೊಂಡರೆ ಮತ್ತೊಂದು ಗುಂಪು ಮಧ್ಯಾಹ್ನ ಅಭ್ಯಾಸ ನಡೆಸಲಿದೆ.

ಟೆಸ್ಟ್ ಸಂಪೂರ್ಣ ವೇಳಾಪಟ್ಟಿ

ಟೆಸ್ಟ್ ಸಂಪೂರ್ಣ ವೇಳಾಪಟ್ಟಿ

* 1ನೇ ಟೆಸ್ಟ್, ಜುಲೈ 08- ಜುಲೈ 12, ದಿ ರೋಸ್ ಬೌಲ್, ಸೌತಾಂಪ್ಟನ್, 3:30 pm
* 2ನೇ ಟೆಸ್ಟ್, ಜುಲೈ 16- ಜುಲೈ 20, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್, 3:30 pm
* 3ನೇ ಟೆಸ್ಟ್, ಜುಲೈ 24-ಜುಲೈ 28, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್, 3: 30 pm

Story first published: Tuesday, June 23, 2020, 15:04 [IST]
Other articles published on Jun 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X