ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿ ಕಾಕ್ ಆರ್ಭಟ, ವೆಸ್ಟ್‌ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ!

West Indies vs South Africa, 3rd T20I: South Africa take series lead with one-run win

ಗ್ರೆನೆಡಾ: ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಆತಿಥೇಯರ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ರೋಚಕ 1 ರನ್‌ನಿಂದ ಗೆದ್ದಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ಅವರ ಸ್ಫೋಟಕ ಅರ್ಧ ಶತಕದೊಂದಿಗೆ ದಕ್ಷಿಣ ಆಫ್ರಿಕಾ ತಂಡ ಐದು ಪಂದ್ಯಗಳ ಈ 20ಐ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. 4ನೇ ಟಿ20ಐ ಪಂದ್ಯ ಜುಲೈ 1ಕ್ಕೆ ನಡೆಯಲಿದೆ.

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

ಗ್ರೆನೆಡಾದ ಸೇಂಟ್ ಜಾರ್ಜ್ಸ್‌ನಲ್ಲಿರುವ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್‌ನಲ್ಲಿ ಕ್ವಿಂಟನ್ ಡಿ ಕಾಕ್ (72 ರನ್) ಮಿಂಚಿದರೆ, ಬೌಲಿಂಗ್‌ನಿಂದ ಅನ್ರಿಕ್ ನಾರ್ಜ್ ಮತ್ತು ತಬ್ರೈಝ್ ಶಂಸಿ ಗಮನ ಸೆಳೆದರು.

ಡಿ ಕಾಕ್ ಸ್ಫೋಟಕ ಅರ್ಧ ಶತಕ

ಡಿ ಕಾಕ್ ಸ್ಫೋಟಕ ಅರ್ಧ ಶತಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್ ಡಿ ಕಾಕ್ 72 (51 ಎಸೆತ), ರೀಝ ಹೆಂಡ್ರಿಕ್ಸ್ 17, ಐಡನ್ ಮಾರ್ಕ್ರಮ್ 23, ರಾಸ್ಸಿ ವ್ಯಾನ್ ಡೆರ್ ಡುಸೆನ್ 32, ಡೇವಿಡ್ ಮಿಲ್ಲರ್ 2, ಕಾಗಿಸೊ ರಬಾಡ 4 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು.

ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ

ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್‌ನಿಂದ ಎವಿನ್ ಲೂಯಿಸ್ 27, ಲೆಂಡ್ಲ್ ಸಿಮನ್ಸ್ 22, ಜೇಸನ್ ಹೋಲ್ಡರ್ 16, ಶಿಮ್ರನ್ ಹೆಟ್ಮೈಯರ್ 17, ನಿಕೋಲಸ್ ಪೂರನ್ 27, ಆ್ಯಂಡ್ರೆ ರಸೆಲ್ 25, ಫ್ಯಾಬಿಯೆನ್ ಅಲೆನ್ 25 ರನ್‌ ಸೇರಿಸಿದರು. ಕೀರನ್ ಪೊಲಾರ್ಡ್ ಪಡೆ 20 ಓವರ್‌ಗೆ 7 ವಿಕೆಟ್ ಕಳೆದು 166 ರನ್ ಬಾರಿಸಿ ಕೇವಲ 1 ರನ್‌ನಿಂದ ಸೋತಿತು.

ಮೆಕಾಯ್ ಉತ್ತಮ ಬೌಲಿಂಗ್

ಮೆಕಾಯ್ ಉತ್ತಮ ಬೌಲಿಂಗ್

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಕೆರಿಬಿಯನ್ ಎಡಗೈ ವೇಗಿ ಒಬೆಡ್ ಮೆಕಾಯ್ ಮತ್ತು ಆಲ್ ರೌಂಡರ್ ಡ್ವೇನ್ ಬ್ರಾವೋ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ್ದು ಕಂಡುಬಂತು. ಮೆಕಾಯ್ 22 ರನ್‌ಗೆ 4 ವಿಕೆಟ್ ಪಡೆದರೆ, ಬ್ರಾವೋ 25 ರನ್‌ಗೆ 3 ವಿಕೆಟ್ ಉರುಳಿಸಿದರು. ವಿಂಡೀಸ್‌ ಇನ್ನಿಂಗ್ಸ್‌ನಲ್ಲಿ ಆಫ್ರಿಕಾದ ಅನ್ರಿಕ್ ನಾರ್ಜ್ 2, ತಬ್ರೈಝ್ ಶಂಸಿ 2, ಜಾರ್ಜ್ ಲಿಂಡ್ಲ್, ಲುಂಗಿ ಎನ್‌ಗಿಡಿ ಮತ್ತು ಕಾಗಿಸೊ ರಬಾಡ ತಲಾ 1 ವಿಕೆಟ್ ಪಡೆದರು. ಶಂಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Wednesday, June 30, 2021, 9:27 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X